ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುರಂತ ಸಾವಿಗೀಡಾದ ಲೆ.ಕ. ವಿಶ್ರಾಂತ್ ಅಂತ್ಯಕ್ರಿಯೆ

By Prasad
|
Google Oneindia Kannada News

Helicopter accident in Sikkim
ಮಡಿಕೇರಿ, ಏ. 23 : ಸಿಕ್ಕಿಂನಲ್ಲಿ ಹೆಲಿಕಾಪ್ಟರ್ ದುರಂತದಲ್ಲಿ ಮರಣಕ್ಕೀಡಾದ ಕೊಡಗಿನ ವೀರ ಲೆಫ್ಟಿನೆಂಟ್ ಕರ್ನಲ್ ಚೌರಿರಾ ವಿಶ್ರಾಂತ್ ನಂಜಪ್ಪ (34) ಅವರನ್ನು ಶನಿವಾರ ಮಡಿಕೇರಿಗೆ ಕರೆತರಲಾಗುತ್ತಿದ್ದು, ಸಂಜೆ ಸಕಲ ಸರಕಾರ ಮರ್ಯಾದೆಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.

ಭಾರತ-ಚೀನಾ ಗಡಿಯಲ್ಲಿರುವ ಉತ್ತರ ಸಿಕ್ಕಿಂನಲ್ಲಿ ಅಪಘಾತಕ್ಕೀಡಾದ ಅಡ್ವಾನ್ಸಡ್ ಲೈಟ್ ಹೆಲಿಕಾಪ್ಟರ್ ಧ್ರುವದಲ್ಲಿದ್ದ ನಾಲ್ವರು ಯೋಧರಲ್ಲಿ ವಿಶ್ರಾಂತ್ ನಂಜಪ್ಪ ಕೂಡ ಒಬ್ಬರು. ಗುರುವಾರ ಅಪಘಾತ ಸಂಭವಿಸಿತ್ತು. ಯುಮಿಸಮಡಾಂಗ್ ಎಂಬ ಪ್ರದೇಶದಲ್ಲಿ ಶಿವ ದೇವಸ್ಥಾನದ ಬಳಿ ಶುಕ್ರವಾರ ಪತ್ತೆಯಾಗಿತ್ತು. ಅಪಘಾತವಾದ ಸ್ಥಳದಲ್ಲಿ ಇಬ್ಬರು ಪೈಲಟ್ ಮತ್ತು ಇಬ್ಬರು ಸೈನಿಕರ ದೇಹಗಳು ದೊರೆತಿದ್ದವು.

ದಟ್ಟ ಅರಣ್ಯವಿರುವ ಯುಮಿಸಮಡಾಂಗ್ ಪ್ರದೇಶದಲ್ಲಿ ಹಿಮ ಕೂಡ ವಿಪರೀತವಾಗಿ ಬೀಳುತ್ತಿತ್ತು. ಆ ಪ್ರದೇಶದಲ್ಲಿ 15 ಸಾವಿರ ಅಡಿಗಳ ಎತ್ತರದಲ್ಲಿ ಹೆಲಿಕಾಫ್ಟರ್ ಹಾರಾಡುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಇನ್ನೊಂದು ಧ್ರುವ ಹೆಲಿಕಾಪ್ಟರ್ ಜೊತೆ ಬೆಳಿಗ್ಗೆ 9.30ಕ್ಕೆ ಹಾರಾಟ ಪ್ರಾರಂಭಿಸಿತ್ತು. ಆದರೆ, 11.30ರ ಸುಮಾರಿಗೆ ಸಂಪರ್ಕವನ್ನು ಕಡಿದುಕೊಂಡಿತ್ತು. ಅಪಘಾತಕ್ಕೆ ನಿಖರವಾದ ಕಾರಣವೇನೆಂದು ತಿಳಿದುಬಂದಿಲ್ಲ.

ಸಿಕ್ಕಿಂನಿಂದ ತರಲಾಗುತ್ತಿದ್ದ ವಿಶ್ರಾಂತ್ ನಂಜಪ್ಪ ಅವರ ದೇಹವನ್ನು ಹೊದ್ದೂರಿನಲ್ಲಿರುವ ಚೌರಿರಾ ಐನ್ ಹೌಸ್ ನಲ್ಲಿ ಅಂತಿಮ ದರ್ಶನಕ್ಕಾಗಿ ಇಡಲಾಗುವುದೆಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ. ವಿಶ್ರಾಂತ್ ಅವರು ಬ್ಯಾಂಕ್ ಅಧಿಕಾರಿಯಾಗಿದ್ದ ನಾಣಯ್ಯ ಅವರ ಮಗ. ನಾಣಯ್ಯ ದಂಪತಿಗಳು ಅನೇಕ ವರ್ಷಗಳಿಂದ ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿ ವಾಸವಾಗಿದ್ದಾರೆ. ನಂಜಪ್ಪ ಅವರು ಮೆಕೆರಿರಾ ನಯನಾ ಎಂಬುವವರನ್ನು ಮದುವೆಯಾಗಿದ್ದು, ದಂಪತಿಗಳಿಗೆ 1 ವರ್ಷದ ಪುಟ್ಟ ಮಗಳಿದ್ದಾಳೆ. ನಯನಾ ಕೂಡ ಬೆಂಗಳೂರಿನಲ್ಲಿ ವೃತ್ತಿನಿರತರಾಗಿದ್ದಾರೆ.

English summary
Lt Col Vishranth Nanjappa (34), who died in helicopter accident in North Sikkim on Indo-Sino border, will be laid to rest in Madikeri on Saturday. He will be brought to Chowrarira in Coorg on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X