ಅರುಣಾಚಲ: ಹೆಲಿಕಾಪ್ಟರ್ ಅಪಘಾತ, 17 ಮಂದಿ ಸಾವು
ಇಟಾನಗರ್,
ಏಪ್ರಿಲ್ 19: ಪವನ್ ಹನ್ಸ್ ಹೆಲಿಕಾಪ್ಟರೊಂದು ಮಂಗಳವಾರ ಅಪಘಾತಕ್ಕೀಡಾಗಿದ್ದು, ಅದರಲ್ಲಿದ್ದ 17 ಮಂದಿ ಸಾವಿಗೀಡಾಗಿದ್ದಾರೆ. ಉಳಿದ ಆರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೆಲಿಕಾಪ್ಟರ್ ಗೌಹಾಟಿಯಿಂದ ಮಂಗಳವಾರ ಮಧ್ಯಾಹ್ನ 1.15ಕ್ಕೆ ಹೊರಟಿತ್ತು. id="toptextpromo">ಆದರೆ
ಅದು ಅರುಣಾಚಲ ಪ್ರದೇಶದ ತವಾಂಗ್ ಪಟ್ಟಣದ ಬೆಟ್ಟದ ಮೇಲಿರುವ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡುವಾಗ ಜಖಂಗೊಂಡು ಬೆಂಕಿಗೆ ಆಹುತಿಯಾಗಿದೆ. ಬಳಿಕ ಅದು 15 ಮೀಟರ್ ಆಳದ ಬೆಟ್ಟದ ಕೊರಕಲಿನಲ್ಲಿ ಬಿದ್ದಿದೆ. id='are-slot-1' class='oiad oi-axt oiadv'> id='top-searched-articles'>ಹೆಲಿಕಾಪ್ಟರ್
ನಲ್ಲಿ ಇಬ್ಬರು ಮಕ್ಕಳು ಸೇರಿದಂತೆ 18 ಮಂದಿ ಪ್ರಯಾಣಿಕರು ಇದ್ದರು. ಕ್ಯಾಪ್ಟನ್ ವರುಣ್ ಗುಪ್ತಾ ಮತ್ತು ಕ್ಯಾಪ್ಟನ್ ತಿವಾರಿ ಜತೆ ಒಟ್ಟು ಐದು ಮಂದಿ ಸಿಬ್ಬಂದಿ ಹೆಲಿಕಾಪ್ಟರ್ ನಲ್ಲಿದ್ದರು. ಪರಿಹಾರ ಕಾರ್ಯಾಚರಣೆ ಭರದಿಂದ ಸಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications