ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಲ ಕಾರ್ಮಿಕರ ಸರ್ಕಸ್ ಗೆ ಸುಪ್ರೀಂ ಬ್ರೇಕ್

By Srinath
|
Google Oneindia Kannada News

Supreme Court of India
ನವದೆಹಲಿ, ಏ. 18: ದೇಶದಲ್ಲಿ ನಡೆಯುವ ಯಾವುದೇ ರೀತಿಯ ಸರ್ಕಸ್ ಗಳಲ್ಲಿ ಇನ್ನು ಮುಂದೆ ಬಾಲ ಮಕ್ಕಳನ್ನು ತೊಡಗಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಈಗಾಗಲೇ ಸರ್ಕಸ್ ಗಳಲ್ಲಿ ತೊಡಗಿರುವ ಮಕ್ಕಳನ್ನು ಪಾರು ಮಾಡಿ, ಅವರಿಗೆ ಸೂಕ್ತ ಪುನರ್ವಸತಿ ಯೋಜನೆ ರೂಪಿಸುವಂತೆಯೂ ಆಜ್ಞಾಪಿಸಿದೆ.

ಮಕ್ಕಳ ಸಂವಿಧಾನಬದ್ಧ ಮೂಲಭೂತ ಹಕ್ಕನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನ್ಯಾಯಮೂರ್ತಿ ದಲ್ವೀರ್ ಭಂಡಾರಿ ನೇತೃತ್ವದ ನ್ಯಾಯಪೀಠ ಏಪ್ರಿಲ್ 18ರಂದು ಈ ಆದೇಶ ಹೊರಡಿಸಿದೆ. ಜತೆಗೆ, ಮಕ್ಕಳು ಸರ್ಕಸ್ ನಲ್ಲಿ ಭಾಗವಹಿಸುವುದನ್ನು ತಡೆಗಟ್ಟುವ ಸಲುವಾಗಿ ಅನಿರೀಕ್ಷಿತ ದಾಳಿಗಳನ್ನು ಕೈಗೊಳ್ಳುವಂತೆಯೂ ಸೂಚಿಸಿದೆ.

ಇದರಿಂದ ಸರ್ಕಸ್ ಗಳಲ್ಲಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಉದ್ಯೋಗದಲ್ಲಿ ತೊಡಗಿಸುವುದನ್ನು ನಿಷೇಧಿಸುವ ಸಂಬಂಧ ಅಧಿಸೂಚನೆ ಹೊರಡಿಸುವುದು ಸರಕಾರಕ್ಕೆ ಅನಿವಾರ್ಯವಾಗಿದೆ. ಜತೆಗೆ ಇನ್ನು 10 ದಿನಗಳಲ್ಲಿ ಸರಕಾರ ಕೈಗೊಂಡಿರುವ ಕ್ರಮದ ಬಗ್ಗೆ ವರದಿ ಸಲ್ಲಿಸುವಂತೆಯೂ ಹೇಳಿದೆ. ಬಚಪನ್ ಬಚಾವೋ ಆಂದೋಲನ್ ಎಂಬ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ಅರ್ಜಿ ಸಂಬಂಧ ನ್ಯಾಯಾಲಯ ಈ ಆದೇಶ ಹೊರಡಿಸಿದೆ.

English summary
The Supreme Court banned (April 18) the employment of children in circus and directed the government to rescue children employed in the sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X