ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸರಕಾರಿ ಅಧಿಕಾರಿಗಳಿಗೆ ಕೆಂಪೇಗೌಡ ಪ್ರಶಸ್ತಿ

By Srinath
|
Google Oneindia Kannada News

BNS Reddy, Jt Commissioner
ಬೆಂಗಳೂರು, ಏಪ್ರಿಲ್. 18: ನಾಡಪ್ರಭು ಕೆಂಪೇಗೌಡರ 500ನೇ ಜಯಂತ್ಯುತ್ಸವ ನಗರದಲ್ಲಿ ವಿಜೃಂಭಣೆಯಿಂದ ಜರುಗುತ್ತಿದೆ. ಬೆಂಗಳೂರಿಗೆ ತನ್ನದೇ ಆದ ವಿಶಿಷ್ಟ ಪ್ರಭುತ್ವವನ್ನು ತಂದುಕೊಟ್ಟವರು ಕೆಂಪೇಗೌಡ. ಅಂದರೆ ನಗರಾಡಳಿತಕ್ಕೆ ಸರಕಾರಿ ಸ್ಪರ್ಶ ನೀಡಿದವರು.

ಇಂತಹ ನಾಡಪ್ರಭುವಿನ 500 ನೇ ಜಯಂತಿಯಂದು ನಾನಾ ಕ್ಷೇತ್ರಗಳಲ್ಲಿ ಸಾಧನೆಗೈದ 230 ಮಂದಿಯ ಜತೆಗೆ ನಗರಾಡಳಿತಕ್ಕೆ ವಿಶಿಷ್ಟ ಸೇವೆ ಸಲ್ಲಿಸಿದ ಸರಕಾರಿ ಅಧಿಕಾರಿಗಳನ್ನು ಗುರುತಿಸಿ, ಕೆಂಪೇಗೌಡ ಪ್ರಶಸ್ತಿಯಿಂದ ಗೌರವಿಸಲಾಗಿದೆ. ಪುರಸ್ಕೃತ ಅಧಿಕಾರಿಗಳ ಪಟ್ಟಿಯನ್ನು ಪರಾಮರ್ಶಿಸಿದಾಗ ಪ್ರಶಸ್ತಿ ಮೌಲ್ಯ ಹೆಚ್ಚಾಗಿರುವುದು ಕಂಡುಬರುತ್ತದೆ.

ಕೆಂಪೇಗೌಡ ಪ್ರಶಸ್ತಿ ಪುರಸ್ಕೃತ ಹಿರಿಯ ಸರಕಾರಿ ಅಧಿಕಾರಿಗಳು ಯಾರೆಂದರೆ ಎನ್. ಜಯರಾಂ, ಎಸ್. ಲಕ್ಷ್ಮಣ್ ಸಿಂಗ್, ಬಿ.ಬಿ. ಅಶೋಕ್ ಕುಮಾರ್, ಬಿ.ಎನ್.ಎಸ್. ರೆಡ್ಡಿ, ಎಸ್.ಕೆ. ಉಮೇಶ್, ಕೆ.ಆರ್. ವೀರಭದ್ರಯ್ಯ, ಮುದಸೀರ್ ಹುಸೇನ್, ಅಲೋಕ್ ಕುಮಾರ್, ಡಾ. ಪುಟ್ಟಸ್ವಾಮಿ, ಎನ್. ಛಲಪತಿ, ಎನ್. ಗಜ್ಜಿನಕಟ್ಟಿ ಮತ್ತು ಡಾ. ಪಿ.ಕೆ. ಶೆಟ್ಟಿ. ಬೆಂಗಳೂರಿನ ಮಹಾಪೌರ ಎಸ್.ಕೆ. ನಟರಾಜ್ ನೇತೃತ್ವದ ಸಮಿತಿಯು ಈ ಆಯ್ಕೆ ಮಾಡಿದೆ. ಪ್ರಶಸ್ತಿಗೆ ಆಯ್ಕೆಯಾದ ಎಲ್ಲ ಅಧಿಕಾರಿಗಳಿಗೆ ದಟ್ಸ್ ಕನ್ನಡ.ಕಾಂ ವತಿಯಿಂದ ಹೃತ್ಪೂರ್ವಕ ಅಭಿನಂದನೆಗಳು.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಅಸ್ತಿತ್ವಕ್ಕೆ ಬಂದ ಬಳಿಕ ಇದೇ ಮೊದಲ ಬಾರಿಗೆ ಕೆಂಪೇಗೌಡ ದಿನಾಚರಣೆ ನಡೆಯುತ್ತಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರು ಪ್ರಶಸ್ತಿಯನ್ನು ಸೋಮವಾರ ಪ್ರದಾನ ಮಾಡಿದರು.

English summary
BBMP is celebrating 500 years of founding the vibrant Indian city Bangalore. The city was built by the chieftain of Yelahanka Kempegowda the emperor(1513–1569) To commemorate the event BBMP honored more than 264 achievers in various fields. Oneindia-Kannada brings you the list of civil servants among the awardees, including IPS officers BNS Reddy, Jt Commissioner and Alok Kumar, CCB.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X