ಉತ್ತರ ಕರ್ನಾಟಕದಲ್ಲಿ ಜಲಪ್ರಳಯ; ಕೋಡಿ ಮಠ ಭವಿಷ್ಯ
ರಾಯಚೂರು,
ಏ.11: ಜಪಾನ್‌ನಲ್ಲಿ ಸಂಭವಿಸುತ್ತಿರುವ ಸರಣಿ ದುರಂತಗಳಿಂದ ಇಡೀ ಜಗತ್ತು ಇನ್ನೇನು ಆಪತ್ತು ಕಾದಿದೆಯೋ ಎಂಬ ಆತಂಕದಲ್ಲಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೋಡಿ ಮಠದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ನುಡಿದಿರುವ ಹೊಸ ಭವಿಷ್ಯ ನಾಡಿನ ಜನತೆಯನ್ನು ಮತ್ತಷ್ಟು ಕಂಗೆಡಿಸುವಂತಿದೆ. id="toptextpromo">ಇಂದು
(ಏ.11)ಅವರು ರಾಯಚೂರಿನಲ್ಲಿ ಮಾತನಾಡುತ್ತಾ, ವಿಶ್ವದಲ್ಲಿ ವಾಯು ಪ್ರಳಯವಾಗುತ್ತದೆ. ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಂದುವರಿಯಲಿದೆ. 2009ರಲ್ಲಿ ಸಂಭವಿಸಿದ ಅತಿವೃಷ್ಟಿಯಿಂದ ಇಡೀ ಉತ್ತರ ಕರ್ನಾಟಕ ತತ್ತರಿಸಿತ್ತು. ಅದೇ ರೀತಿಯ ಮತ್ತೊಂದು ಕಂಟಕ ಉತ್ತರ ಕರ್ನಾಟಕಕ್ಕೆ ಕಾದಿದೆ ಎಂದು ಸ್ವಾಮೀಜಿಗಳು ಭವಿಷ್ಯ ನುಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೈವತ್ವಕ್ಕೀಡಾದ
ಧಾರ್ಮಿಕ ಗುರು ಒಬ್ಬರು ಅಸ್ತಂಗತರಾಗಲಿದ್ದಾರೆ. ಅವರ ಸಾವಿನಿಂದ ಜನತೆ ಅಪಾರ ನೋವಿಗೆ ಈಡಾಗುತ್ತಾರೆ. ಕಾರ್ತೀಕ ಮಾಸಲ್ಲಿ ರಾಜಕೀಯ ಪಕ್ಷವೊಂದು ಅವನತಿ ಹಾದಿ ಹಿಡಿಯುತ್ತದೆ. ತುಂಗಾ ನದಿ ಉಕ್ಕಿ ಹರಿಯುತ್ತದೆ. ಅಪಾರ ಪ್ರಮಾಣದ ಆಸ್ತಿ ಪಾಸ್ತಿ ನಷ್ಟವಾಗುತ್ತದೆ ಎಂದು ಸ್ವಾಮೀಜಿಗಳು ಹೇಳಿದ್ದಾರೆ.











Click it and Unblock the Notifications