ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೋಕಪಾಲ ಮಸೂದೆ : ಸಮಿತಿಗೆ ಹೆಗಡೆ ಹೆಸರು

By Prasad
|
Google Oneindia Kannada News

Justice Santosh Hegde
ನವದೆಹಲಿ, ಏ. 8 : ಆಮರಣಾಂತ ಉಪವಾಸಕ್ಕೆ ಕುಳಿತಿರುವ ಗಾಂಧಿವಾದಿ ಅಣ್ಣಾ ಹಜಾರೆ ಅವರ ಒತ್ತಡಕ್ಕೆ ಅರ್ಧ ಮಣಿದಿರುವ ಕೇಂದ್ರ ಸರಕಾರ ಜನ ಲೋಕಪಾಲ ಮಸೂದೆ ಕರದು ಸಿದ್ಧಪಡಿಸಲು ಒಪ್ಪಿಕೊಂಡಿದೆ. ಆದರೆ ಈ ಸಮಿತಿಯ ಅದ್ಯಕ್ಷ ಸ್ಥಾನ ಯಾರಿಗೆ ದೊರೆಯಬೇಕು ಎಂಬ ವಿಷಯ ಕುರಿತು ಅಣ್ಣಾ ಹಜಾರೆ ಮತ್ತು ಕೇಂದ್ರ ಸರಕಾರಗಳೆರಡು ಹಗ್ಗ ಜಗ್ಗಾಡುತ್ತಿವೆ.

ಈ ಭ್ರಷ್ಟಾಚಾರ ವಿರೋಧಿ ಮಸೂದೆ ಕರಡು ಸಿದ್ಧಪಡಿಸುವ ಜಂಟಿ ಸಮಿತಿಯಲ್ಲಿ ರಾಜಕಾರಣಿಗಳು ಮಾತ್ರವಲ್ಲ ಐವರು ನಾಗರಿಕರು ಕೂಡ ಇರಬೇಕೆನ್ನುವ ಆಗ್ರಹಕ್ಕೆ ಕೇಂದ್ರ ಮಣಿದಿದೆ. ಜಂತರ್ ಮಂತರ್ ನಲ್ಲಿ ಉಪವಾಸ ಸತ್ಯಾಗ್ರಹಕ್ಕೆ ಕುಳಿತಿರುವ ಅಣ್ಣಾ ಹಜಾರೆ ಅವರು ತಾವೇ ಸಮಿತಿಯ ಅಧ್ಯಕ್ಷರಾಗಬೇಕು ಎನ್ನುವ ಹಟಕ್ಕೆ ಒಪ್ಪಿಕೊಳ್ಳಲು ಕೇಂದ್ರ ಸುತಾರಾಂ ತಯಾರಿಲ್ಲ. ಚುನಾಯಿತ ಪ್ರತಿನಿಧಿಯ ಎದುರಿಗೆ ಜನಪ್ರತಿನಿಧಿಗಳು ತಲೆತಗ್ಗಿ ನಿಲ್ಲುವುದು ಕೇಂದ್ರಕ್ಕೆ ಬೇಕಾಗಿಲ್ಲ.

ಆದರೆ, ಕರಡನ್ನು ಪ್ರಾಥಮಿಕವಾಗಿ ರೂಪಿಸಿರುವ ತಂಡದಲ್ಲಿ ಇರುವ ಕರ್ನಾಟಕದ ಲೋಕಾಯುಕ್ತ, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಮೂರ್ತಿ ಸಂತೋಷ್ ಹೆಗಡೆ ಅಥವಾ ಸುಪ್ರೀಂ ಕೋರ್ಟ್ ನ ಮಾಜಿ ಮುಖ್ಯ ನ್ಯಾಯಮೂರ್ತಿ ಜೆಎಸ್ ವರ್ಮಾ ಅವರು ಸಮಿತಿಯ ಅಧ್ಯಕ್ಷರಾಗಬೇಕು ಎನ್ನುವ ಇಂಗಿತವನ್ನು ಕೆಜ್ರಿವಾಲ್ ಅವರು ವ್ಯಕ್ತಪಡಿಸಿದ್ದಾರೆ. ಇದಕ್ಕೂ ಮೊದಲು ಕೆಜ್ರಿವಾಲ್ ಅವರೇ ಸಮಿತಿ ಅಧ್ಯಕ್ಷರಾಗಬೇಕೆಂದು ಕೇಂದ್ರ ಸೂಚಿಸಿತ್ತು. ಭ್ರಷ್ಟಾಚಾರ ವಿರೋಧಿ ಆಂದೋಲನದ ಇನ್ನೊಬ್ಬ ರೂವಾರಿ ಸ್ವಾಮಿ ಅಗ್ನಿವೇಶ್ ಅವರು ಕೂಡ ಸಮಿತಿಯಲ್ಲಿರಬೇಕು ಎಂಬು ಮಾತು ಕೇಳಿಬರುತ್ತಿವೆ.

ಕರ್ನಾಟಕದ ಲೋಕಾಯುಕ್ತ ಸಂತೋಷ ಹೆಗಡೆ ಅವರು ಸಮಿತಿಯ ಅಧ್ಯಕ್ಷತೆ ವಹಿಸುವಲ್ಲಿ ಸಮರ್ಥರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಯಾವುದೇ ವಿಧವಾದ ವಿವಾದಗಳಲ್ಲಿ ಭಾಗಿಯಾಗಿರದ ಸಂತೋಷ ಹೆಗಡೆ ಅವರು ಸಮಿತಿಯ ಅಧ್ಯಕ್ಷತೆ ವಹಿಸುವುದನ್ನು ಅಣ್ಣಾ ಹಜಾರೆ ಒಪ್ಪುವ ನಿರೀಕ್ಷೆಯಿದೆ. ಈ ನಡುವೆ, ನಾಡಿನಾದ್ಯಂತ ಯುವಜನತೆಯಿಂದ ಈ ಆಂದೋಲನಕ್ಕೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಆದರೆ, ಅಣ್ಣಾ ಅವರು ಆಮರಣಾಂತ ಉಪವಾಸ ಕುಳಿತುಕೊಳ್ಳುವ ಬದಲು ನಾಡಿನಾದ್ಯಂತ ಸಂಚರಿಸಿ ಜನತೆಯನ್ನು ಒಗ್ಗೂಡಿಸಿದ್ದರೆ ಈ ಚಳವಳಿಯ ಚೆಹರೆಯೇ ಬದಲಾಗಿರುತ್ತಿತ್ತು.

ಎಂಟು ಬಾರಿ ಸತ್ತ ಮಸೂದೆ :
1968ರಲ್ಲಿ ಪ್ರಥಮ ಬಾರಿಗೆ ಲೋಕಸಭೆಯಲ್ಲಿ ಮಂಡನೆಯಾದಂದಿನಿಂದ ಎಂಟು ಬಾರಿ ಸಂಸತ್ತಿನಲ್ಲಿ ಜನಪ್ರತಿನಿಧಿಗಳ ಬೆಂಬಲ ಪಡೆಯಲು ಸೋತಿದೆ. ಇಂದಿರಾಗಾಂಧಿಯಿಂದ ಹಿಡಿದು, ಅಟಲ್ ಬಿಹಾರಿ ವಾಜಪೇಯಿಯಿಂದ ಮನಮೋಹನ ಸಿಂಗ್ ಅವರವರೆಗೆ ಸಂಸದರ ಅನುಮೋದನೆ ಪಡೆಯುವಲ್ಲಿ ವಿಫಲವಾಗಿದೆ. ಈ ಬಾರಿಯಾದರೂ ಮುಂಗಾರು ಅಧಿವೇಶನದಲ್ಲಿ ಜನ ಲೋಕಪಾಲ ಮಸೂದೆ ಮಂಡನೆಯಾಗಿ ಜನಪ್ರತಿನಿಧಿಗಳು ಕೃಪೆಗೆ ಪಾತ್ರವಾಗುವುದೆ?

English summary
UPA govt and social activist Anna Hazare are on tug of war as to who should chair the joint committe to draft Jan Lokpal bill. Anna has proposed his name but govt has disposed. Kejriwal has suggested karnataka Lokayukta Santosh Hegde's name for the committee chairmanship.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X