ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕುಕ್ಕೆಯಲ್ಲಿ ಹೆಲಿಕಾಪ್ಟರ್ ಇಳಿಸಲು ಸಿಎಂಗೆ ಭಯ?

By Mahesh
|
Google Oneindia Kannada News

Yeddyurappa visit to Puttur
ಪುತ್ತೂರು, ಏ.5: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ತೀರ್ಥಕ್ಷೇತ್ರ ಯಾತ್ರೆ ಹೊಸದೇನಲ್ಲ. ಭಾನುವಾರವಿಡೀ ಮೇಲುಕೋಟೆ, ಕುಕ್ಕೆ ಸುಬ್ರಮಣ್ಯ ಎಂದು ಸಿಎಂ ಸುತ್ತುತ್ತಿದ್ದರು. ಆದರೆ, ಪುಣ್ಯಕ್ಷೇತ್ರದಲ್ಲಿ ಕಾಲಿಟ್ಟರೆ ಸಾಕು ಜನ್ಮ ಪಾವನವಾಗುತ್ತದೆ ಎಂದು ಜನ ನಂಬುತ್ತಾರೆ. ಆದರೆ, ಯಡಿಯೂರಪ್ಪ ಮಾತ್ರ ಆಪ್ತ ಜ್ಯೋತಿಷಿಗಳ ಸಲಹೆ ಮೇರೆಗೆ 'ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು' ಎಂಬಂತೆ ಕುಕ್ಕೆ ಸುಬ್ರಮಣ್ಯಕ್ಕೆ ಹೋಗಬೇಕಾದವರು ಪುತ್ತೂರಿಗೆ ಹೋಗಿ ಬಂದಿದ್ದಾರೆ.

ಮೇಲುಕೋಟೆ ಚೆಲುವನಾರಾಯಣಸ್ವಾಮಿಗೆ ನಮಿಸಿದ ಯಡಿಯೂರಪ್ಪ ಹೆಲಿಕಾಪ್ಟರ್ ಏರಿ ನೇರ ಸುಬ್ರಹ್ಮಣ್ಯ ಕ್ಷೇತ್ರ ಯಾತ್ರೆಗೆ ಕೈಗೊಂಡರು. ಸುಬ್ರಹ್ಮಣ್ಯ ಕ್ಷೇತ್ರ ಹತ್ತಿರವಾಗುತ್ತಿದ್ದಂತೆ, ಕಾಪ್ಟರ್ ಇಳಿಸಲು ಹೊರಟ ಪೈಲಟ್ ಗೆ ಪುತ್ತೂರುಗೆ ಹೋಗುವಂತೆ ಸಿಎಂ ಸೂಚಿಸಿದ್ದಾರೆ ಎನ್ನಲಾಗಿದೆ. ಅದರಂತೆ, ಪುತ್ತೂರಿನಲ್ಲಿ ಇಳಿದು ನಂತರ ಕಾರಿನಲ್ಲಿ ಕುಕ್ಕೆ ಕಡೆಗೆ ವಾಪಾಸ್ ಬಂದಿದ್ದಾರೆ.

ಕುಕ್ಕೆ ಸುಬ್ರಮಣ್ಯ ವ್ಯಾಪ್ತಿಯಲ್ಲಿ ಹೆಲಿಕಾಪ್ಟರ್‌ನಲ್ಲಿ ಬಂದಿಳಿದರೆ ನಿಮಗೆ ಅನಿಷ್ಠ ಕಾದಿದೆ. ಮುಖ್ಯಮಂತ್ರಿ ಹುದ್ದೆ ಅದು ಕಂಟಕವಾಗುತ್ತದೆ ಎಂಬ ಭವಿಷ್ಯವಾಣಿ ಸಿಎಂರನ್ನು ಈ ರೀತಿ ಆಡಿಸಿದೆ. ಭೂತ, ಪ್ರೇತಗಳನ್ನೇ ಓಡಿಸುವ ಶಕ್ತಿಯಿರುವ ಕುಕ್ಕೆ ಶ್ರೀಕ್ಷೇತ್ರ ಈ ರೀತಿ ಸುತ್ತಿ ಬಳಸಿ ಎಂಟ್ರಿ ಕೊಟ್ಟ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜೊತೆ ಅವರ ಪುತ್ರಿಯೊಬ್ಬರು ಇದ್ದರು ಎಂಬ ಸುದ್ದಿಯಿದೆ. ಮತ್ಯಾರು ಇದ್ದರೋ ತಿಳಿದುಬಂದಿಲ್ಲ.

ಈ ಹಿಂದೆ ಯಡಿಯೂರಪ್ಪರವರು ಶೋಭಾ ಕರಂದ್ಲಾಜೆಯವರ ಸೋದರಿ ಮತ್ತು ಸೋದರನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಎರಡು ಬಾರಿ ಪುತ್ತೂರಿಗೆ ಬಂದಿದ್ದರು. ಪುತ್ತೂರಿಗೆ ಅಧಿಕೃತ ಕಾರ್ಯಕ್ಕಿಂತ ಖಾಸಗಿ ಕಾರ್ಯಕ್ರಮಕ್ಕೆ ಹೆಚ್ಚಾಗಿ ಸಿಎಂ ಭಾಗವಹಿಸಿರುವುದು ವಿಶೇಷ.

English summary
Yeddyurappa is afraid to land Helicopter near Kukke Subramanya Temple so he first went to Puttur and later visited Kukke temple along with his daughter sources said. CM BSY has visited more private function than government functions held in Puttur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X