ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸ್ ಮೇಲೆ 5 ಕೋಟಿ ರು, ತಗೊಳ್ಳೋರೆ ಇಲ್ಲ!

By Prasad
|
Google Oneindia Kannada News

5 cr rupees seized
ಚೆನ್ನೈ, ಏ. 5 : ತಮಿಳುನಾಡಿನಲ್ಲಿ ಏಪ್ರಿಲ್ 13ರಂದು ನಡೆಯುತ್ತಿರುವ ವಿಧಾನಸಭೆ ಚುನಾವಣೆಯ ಕಾವು ದಿನದಿಂದ ಏರುತ್ತಿದೆ. ಕಾವಿನ ಜೊತೆಗೆ ಭಾರೀ ಹಣದ ಗಂಟುಗಳು ಕೂಡ ಬಸ್ ಮೇಲೆ ಏರಿ ಕ್ಷೇತ್ರಗಳಿಂದ ಕ್ಷೇತ್ರಗಳಿಗೆ ಸಂಚರಿಸುತ್ತಿವೆ. ಹೀಗೆ ಸವಾರಿ ಮಾಡುತ್ತಿದ್ದ 5.11 ಕೋಟಿ ರು. ಮೊತ್ತದ ನಗದು ಮತದಾರರ ಕೈ ಸೇರುವ ಬದಲು ಆದಾಯ ತೆರಿಗೆ ಅಧಿಕಾರಿಗಳ ಕೈಸೇರಿದೆ.

ಖಾಸಗಿ ಬಸ್ ಮೇಲೆ ಇಡಲಾಗಿದ್ದ ಈ ನಗದಿದ್ದ ಗಂಟನ್ನು ತಿರುಚಿನಾಪಳ್ಳಿಯಲ್ಲಿ ವಶಪಡಿಸಿಕೊಳ್ಳಲಾಗಿದೆ. ಪ್ರವಾಸಿ ಬ್ಯಾಗ್ ನಲ್ಲಿ ಬೆಚ್ಚಗೆ ಕೂತಿದ್ದ ಹಣವನ್ನು ಮಧ್ಯಾಹ್ನ 2 ಗಂಟೆಗೆ ವಶಕ್ಕೆ ತೆಗೆದುಕೊಳ್ಳಲಾಗಿದೆ. ಆದರೆ, ಇದು ತಮ್ಮ ಸ್ವತ್ತೆಂದು ಹೇಳಿಕೊಂಡು ಯಾರೂ ಮುಂದೆ ಬಂದಿಲ್ಲ ಎಂದು ಮುಖ್ಯ ಚುನಾವಣಾಧಿಕಾರಿ ವರದಿಗಾರರಿಗೆ ತಿಳಿಸಿದ್ದಾರೆ.

ಅತ್ತ ಭ್ರಷ್ಟಾಚಾರ ರಹಿತ ಸಮಾಜ ನಿರ್ಮಾಣಕ್ಕಾಗಿ ಸಮಾಜ ಸೇವಕ ಅಣ್ಣಾ ಹಜಾರೆ ಅವರು ಉಪವಾಸ ಕೂತಿದ್ದರೆ, ಇತ್ತ ಚುನಾವಣೆ ನಿಮಿತ್ತ ತಮಿಳುನಾಡಿನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಅಣ್ಣಾ ಹಜಾರೆ ಅವರನ್ನು ಅಣಿಕಿಸುತ್ತಿದೆ. ಹೆಂಡ, ಸೀರೆಯ ಜೊತೆಗೆ ಕಾಂಚಾಣ ಕೂಡ ಕುಣಿದಾಡುತ್ತಿದೆ. ಇಲ್ಲಿಯವರೆಗೆ ಒಟ್ಟು 25 ಕೋಟಿ ರು. ನಗದನ್ನು ನಾನಾ ಕಡೆಗಳಲ್ಲಿ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಕಳೆದ ತಿಂಗಳಷ್ಟೆ ಮದುರೈನಲ್ಲಿ 3.5 ಕೋಟಿ ರು. ನಗದು ವಶಪಡಿಸಿಕೊಳ್ಳಲಾಗಿತ್ತು.

English summary
5 crore rupees belonging to none has been seized by income tax sleuths in Tamilnadu, which none has come forward to claim. The money was kept in a trevellers bag on top of a private bus near Tiruchinapalli.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X