ಯಡಿಯೂರಪ್ಪಗೆ ಏ.10 ಡೆಡ್ ಲೈನ್: ರೆಡ್ಡಿ

Yeddyurappa should step down by Apr 10
ಬಳ್ಳಾರಿ, ಏ.1: ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಶತಪ್ರಯತ್ನ ಮಾಡಿ ವಿಫಲವಗಿರುವ ಬಳ್ಳಾರಿ ಗಣಿಧಣಿಗಳು ಪಕ್ಷದ ಶಾಸಕರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮುಖ್ಯಮಂತ್ರಿಯವರಿಗೆ ಏ.10ರ ತನಕ ಗಡುವು ನೀಡಲಾಗಿದ್ದು, ಅಂದು ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಸಾಧ್ಯವಾಗದಿದ್ದರೆ, ಮತ್ತೆ ಎಂದಿಗೂ ಸಾಧ್ಯವಿಲ್ಲ ಎಂಬ ಆಪ್ತ ಜ್ಯೋತಿಷಿ ಮಾತು ಕೇಳಿಕೊಂಡು ರೆಡ್ಡಿಗಳು ಬಳ್ಳಾರಿಯಲ್ಲಿ ಗುಪ್ತ ಸಭೆ ನಡೆಸಿದ್ದಾರೆ.

ಈಗಾಗಲೇ ಬಳ್ಳಾರಿ ಗಣಿ ರೆಡ್ಡಿ ಸಚಿವರ ಜತೆ 13 ಶಾಸಕರು ಗುರುತಿಸಿಕೊಂಡಿದ್ದು, ಈ ಸಂಖ್ಯೆಯನ್ನು ಕಷ್ಠ 17ಕ್ಕೆ ಮುಟ್ಟಿಸಲು ಪ್ರಯತ್ನಗಳು ನಡೆದಿವೆ. ಯಡಿಯೂರಪ್ಪರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಪಕ್ಷದ ಮುಖಂಡರು ಹಾಗೂ ಪ್ರತಿಪಕ್ಷಗಳಿಂದ ಸಾಧ್ಯವಾಗುತ್ತಿಲ್ಲ. ಅಲ್ಲದೇ ಅವರ ಭ್ರಷ್ಟಾಚಾರಕ್ಕೆ ಕಾನೂನಿನ ರಕ್ಷಣೆಯೂ ದೊರೆಯುತ್ತದೆ. ಇವರನ್ನೇ ಮುಂದುವರಿಸಿದರೆ ನಮ್ಮನ್ನು ಸಾರ್ವಜನಿಕವಾಗಿ ಮುಗಿಸುತ್ತಾರೆ ಎಂಬ ಭಯ ರೆಡ್ಡಿಗಳಿಗೆ ಆವರಿಸಿದೆ.

ಗಣಿ ರಾಷ್ಟ್ರೀಕರಣಕ್ಕೆ ಓಕೆ ಎಂದ ಸಿಎಂ: ಜಗಳೂರಿನ ಬಿಜೆಪಿ ಅಭ್ಯರ್ಥಿ ರಾಮಚಂದ್ರ ಅವರ ಪರ ಮತಯಾಚನೆ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ ಅವರು, ನಮ್ಮ ಜನಾರ್ದನರೆಡ್ಡಿ ಅವರು ಹೇಳಿದಂತೆ ಸರ್ಕಾರವೇ ಗಣಿಗಾರಿಕ್ಕೆ ನಡೆಸುವುದು ಸೂಕ್ತ. ಗಣಿಗಾರಿಕೆಯ ರಾಷ್ಟ್ರೀಕರಣಕ್ಕೆ ನಮ್ಮ ಸಹಮತವಿದೆ ಎಂದಿದ್ದಾರೆ. ತಾನಾಡಿದ ಮಾತನ್ನು ತನಗೆ ತಿರುಗಿಸುತ್ತಿರುವ ಸಿಎಂ ತಂತ್ರಕ್ಕೆ ಜನಾರ್ದನರೆಡ್ಡಿ ಸಿಕ್ಕಿಕೊಂಡಿದ್ದಾರೆ.

ರೆಡ್ಡಿಗಳ ಕೋಪಕ್ಕೇ ಕಾರಣ?: ನಮ್ಮಿಂದ ಅಧಿಕಾರಕ್ಕೆ ಬಂದ ಯಡಿಯೂರಪ್ಪ ನಮ್ಮಿಂದಲೇ ಅಧಿಕಾರ ಕಳೆದುಕೊಳ್ಳಬೇಕು ಎಂಬ ಹೋರಾಟದೊಂದಿಗೆ ರೆಡ್ಡಿಗಳು ಯಡಿಯೂರಪ್ಪ ವಿರುದ್ಧ ಹಠತೊಟ್ಟಿದ್ದಾರೆ. ಒಟ್ಟಿನಲ್ಲಿ ಉಪಚುನಾವಣೆ ಮುಗಿಯುತ್ತಿದ್ದಂತೆ ಯಡಿಯೂರಪ್ಪ ಅವರ ಭವಿಷ್ಯ ನಿರ್ಧಾರವಾಗಲಿದೆ. ರೆಡ್ಡಿ ಸೋದರರಿಗೆ ಸೇರಿದ 15ಕ್ಕೂ ಹೆಚ್ಚು ಗಣಿಗಾರಿಕೆ ಪರವಾನಿಗೆ ರದ್ದುಪಡಿಸಿದ್ದು, ಉಕ್ಕು ಕಾರ್ಖಾನೆ ಸ್ಥಾಪನೆಗೆ ಕಿರುಕುಳ ಇತ್ಯಾದಿ ಅಂಶಗಳು ಸಿಎಂ ವಿರುದ್ಧ ಮತ್ತೆ ಸಿಡಿದೇಳುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+