ಯಡಿಯೂರಪ್ಪ ಹೊಸ ಪಕ್ಷಕ್ಕೆ ಖೇಣಿ ಹಣ?

Yeddyurappa to launch new party?
ಬೆಂಗಳೂರು, ಮಾ.27 : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆ ಇಲ್ಲ ಎಂದು ಸಚಿವ ಎಂಪಿ ರೇಣುಕಾಚಾರ್ಯ ಎಷ್ಟೇ ಹೇಳಿದರೂ ಸುದ್ದಿ ಮಾತ್ರ ಸತ್ತಿಲ್ಲ. ಮತ್ತೆ ಮತ್ತೆ ಹೊಸ ರೆಕ್ಕೆ ಪುಕ್ಕ ಅಂಟಿಸಿಕೊಂಡು ಮೇಲೆದ್ದಿದೆ. ಹೈಕಮಾಂಡ್ ಕ್ರಮ ಹಾಗೂ ಪಕ್ಷದಲ್ಲಿರುವ ಪುಂಡರ ಕಾಟದಿಂದ ಯಡಿಯೂರಪ್ಪ ಅವರು ಇಂದಲ್ಲ ನಾಳೆ ಬಿಜೆಪಿ ತೊರೆದು ಹೊಸ ಪಕ್ಷ ಕಟ್ಟಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಗೆ ಯಡಿಯೂರಪ್ಪ ಅವರ ಹೊಸ ಪಕ್ಷ ಕಣಕ್ಕಿಳಿಯಲಿದೆ ಎಂಬ ಗಾಳಿಸುದ್ದಿ ಹರಡಿದೆ.

ಯಡಿಯೂರಪ್ಪ ಅವರಿಂದ ಹೊಸಪಕ್ಷ ಎಂಬ ಸುದ್ದಿ ಸತ್ಯಕ್ಕೆ ದೂರ ಎಂದು ಸಾಬೀತಾದರೂ, ಯಡಿಯೂರಪ್ಪ ಅವರ ಆಪ್ತರಿಂದ ಈ ರೀತಿ ಒತ್ತಡ ಬಂದಿರುವುದಂತೂ ನಿಜ. ಲೋಕಾಯುಕ್ತರಿಂದ ಎಫ್ ಐಆರ್ ದಾಖಲಾದರೆ, ಯಡಿಯೂರಪ್ಪ ಖಂಡಿತಾ ಕೆಳಗಿಳಿಯುತ್ತಾರೆ ಎಂಬ ಸಾಧ್ಯತೆಯಿದೆ. ಹೊಸ ಪಕ್ಷ ಸ್ಥಾಪನೆ ಸಾಧ್ಯಾಸಾಧ್ಯತೆ ಹಾಗೂ ಯಡಿಯೂರಪ್ಪ ಅವರಿಗಿರುವ ಅನಿವಾರ್ಯತೆ ಬಗ್ಗೆ ಗಮನ ಹರಿಸೋಣ.

ಮುಖ್ಯಮಂತ್ರಿ ಹುದ್ದೆಯಿಂದ ವಜಾ ಮಾಡಿದರೆ, ಬಿಜೆಪಿ ತೊರೆದು ಪ್ರಾದೇಶಿಕ ಪಕ್ಷ ಕಟ್ಟಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ. ಈ ಬಗ್ಗೆ ಪಕ್ಷದ ಹೈಕಮಾಂಡ್‌ ಗೂ ಎಚ್ಚರಿಕೆ ಸಂದೇಶ ನೀಡಿದ್ದಾರೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಪಕ್ಷಕ್ಕೆ "ಕನ್ನಡ ಮಕ್ಕಳ ಪಕ್ಷ" ಎಂಬ ಹೆಸರು ಅಂತಿಮಗೊಳ್ಳುವ ಸಾಧ್ಯತೆಯಿದೆ. ಇನ್ನೂ ಪಕ್ಷಕ್ಕೆ ಹಣ ತೊಡಗಿಸುವಂತೆ ನೈಸ್ ಸಂಸ್ಥೆ ಖೇಣಿಯವರನ್ನು ಯಡಿಯೂರಪ್ಪ ಅವರು ಕೇಳಿದ್ದಾರಂತೆ.

ಅಶೋಕ್ ಖೇಣಿ ಕೂಡಾ ಈಗಾಗಲೇ ಹೊಸ ಪಕ್ಷ ರಚನೆಗೆ ಸಂಬಂಧಿಸಿದಂತೆ ನೀಲನಕ್ಷೆ ತಯಾರಿ ನಡೆಸಿದ್ದಾರೆ. ಆದರೆ, ಖೇಣಿ ಬಳಿ ಹಣ ಬಲವಿದ್ದರೂ ರಾಜಕೀಯ ಬಲವಿಲ್ಲ. ಹಾಗಾಗಿ ಯಡಿಯೂರಪ್ಪ ಹಾಗೂ ಖೇಣಿ ಇಬ್ಬರೂ ಒಟ್ಟಿಗೆ ಈ ಭಾರಿ ಯೋಜನೆಗೆ ಮುಂದಾಗಿದ್ದಾರೆ. ಆದರೆ, ಇದೆಲ್ಲವೂ, ಹೈ ಕಮಾಂಡ್ ಯಡಿಯೂರಪ್ಪ ಅವರನ್ನು ಬಲವಂತವಾಗಿ ಕೆಳಗಿಳಿಸಿದರೆ ಮಾತ್ರ. ಆದರೆ, ಸದ್ಯಕ್ಕಂತೂ ಹೊಸ ಪಕ್ಷ, ಹೊಸ ಟಿವಿ ನೋಡುವ ಭಾಗ್ಯ ಯಡಿಯೂರಪ್ಪ ಅವರ ಅಭಿಮಾನಿಗಳಿಗೆ ಸಿಗಲಿಕ್ಕಿಲ್ಲ.

ಇಂದಲ್ಲ ನಾಳೆ ಹೊಸ ಪಕ್ಷ :ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕನಿಷ್ಠ 50 ಸೀಟು ಗೆಲ್ಲುವುದು ಯಡಿಯೂರಪ್ಪ ಅವರ ಗುರಿ. ಭಿನ್ನಮತವಿಲ್ಲದ ಆಪ್ತರನ್ನು ಈಗಾಗಲೇ ಒಟ್ಟು ಮಾಡಿರುವ ಯಡಿಯೂರಪ್ಪ, ಅನಂತ್ ಹಾಗೂ ಶೆಟ್ಟರ್ ಸೇರಿದಂತೆ ಸರ್ಕಾರ ಉರುಳಿಸುವ ಸಂಚು ನಡೆಸಿದ ಎಲ್ಲರಿಗೂ ಸರಿಯಾದ ಡೋಸ್ ನೀಡಲು ಸಜ್ಜಾಗಿದ್ದಾರೆ.

ಒಂದು ವೇಳೆ ಯಡಿಯೂರಪ್ಪ ಅವರು ಬಿಜೆಪಿ ಒಡೆದರೆ, ರಾಜ್ಯದಲ್ಲಿ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳುವ ಭೀತಿ ಎದುರಾಗುವುದರಿಂದ ಪ್ರಭಾವಿ ಲಿಂಗಾಯತ ನಾಯಕರಾದ ಯಡಿಯೂರಪ್ಪ ಅವರ ಹೊಸ ಯೋಜನೆಗಳನ್ನು ತಡೆಹಿಡಿಯುವಲ್ಲಿ ಹೈ ಕಮಾಂಡ್ ಯಶಸ್ವಿಯಾಗಿದೆ. ಆದರೆ, ಯಡಿಯೂರಪ್ಪ ಅವರ ಮುಂದಿನ ನಡೆ ಬಗ್ಗೆ ಕಾದು ನೋಡೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+