ರೈತರ ಮೇಲೆ ಲಾಠಿಚಾರ್ಚ್, ಪೊಲೀಸರು ಅಮಾನತು

Koppl Police lathi charge on farmer condemned
ಕೊಪ್ಪಳ ಮಾ.27: ಉದ್ಯೋಗ ಖಾತ್ರಿ ಯೋಜನೆ(MNREGA)ಯಡಿಯಲ್ಲಿ ಸಿಗಬೇಕಿದ್ದ ಕೂಲಿ ಪಡೆಯಲು ಪರದಾಡುತ್ತಿದ್ದ ರೈತರ ಮೇಲೆ ನಡೆದ ಲಾಠಿ ಚಾರ್ಜ್ ಗೆ ವ್ಯಾಪಕ ಟೀಕೆ, ಖಂಡನೆಗಳು ಬಂದಿದೆ. ಈ ದುಷ್ಕೃತ್ಯ ಎಸೆಗಿದ ಎಎಸ್ ಐ ಹಾಗೂ ಪೇದೆಯನ್ನು ತಕ್ಷಣವೇ ಅಮಾನತು ಮಾಡಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ವಕೀಲರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಪೊಲೀಸ್ ದೌರ್ಜನ್ಯ ಖಂಡಿಸಿ, ವಿವಿಧೆಡೆ ಬೃಹತ್ ಪ್ರತಿಭಟನಾ ಮೆರವಣಿಗೆಗಳು ನಡೆದಿದೆ.

ಸಹಾಯಕ ಸಬ್ ಇನ್ಸ್‌ಪೆಕ್ಟರ್ ರಾಮಣ್ಣ ನಾಯಕ್ ಹಾಗೂ ಪೇದೆ ತಾರಾಸಿಂಗ್‌ರನ್ನು ಅಮಾನತು ಮಾಡಲಾಗಿದೆ. ರೈತರ ಮೇಲಿನ ಲಾಠಿ ಚಾರ್ಜ್‌ಗೆ ಈ ಅಧಿಕಾರಿಗಳು ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದ್ದರಿಂದ ಅಮಾನತುಗೊಳಿಸಲಾಗಿದೆ. ತನಿಖೆ ನಡೆದಿದೆ ಎಂದು ವಿದ್ಯಾಸಾಗರ್ ತಿಳಿಸಿದರು.

ಕೊಪ್ಪಳ ತಾಲ್ಲೂಕು ಪಂಚಾಯತ್ ಕಚೇರಿ ಎದುರು ರೈತರು ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರು. ಲಾಠಿ ಚಾರ್ಜ್ ನಡೆಸಿದ ಕೊಪ್ಪಳ ನಗರ ಪೊಲೀಸ್ ಠಾಣಾ ಪೊಲೀಸರನ್ನು ಗೂಂಡಾ ಖಾಯ್ದೆಯಡಿ ಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಬೇಕು ಈ ಗಲಭೆಯಲ್ಲಿ ಪ್ರತಿಭಟನಾ ನಿರತ ಮಹಿಳೆಯರ ಬಂಗಾರದ ಆಭರಣಗಳು ಕಳೆದುಹೋಗಿವೆ. ಇದಕ್ಕೆಲ್ಲ ಕಾರಣರಾದ ಎಸ್‌ಪಿಯವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ರೈತ ಒತ್ತಾಯಿಸಿತ್ತು.

ವಿವಿಧೆಡೆ ಧರಣಿ, ಮೆರವಣಿಗೆ: ರೈತರ ಮೇಲೆ ಲಾಠಿ ಪ್ರಹಾರ ಘಟನೆಯನ್ನು ಖಂಡಿಸಿ ಬಳ್ಳಾರಿ ಜಿಲ್ಲೆಯ ಸಿರಗುಪ್ಪ ತಾಲೂಕಿನ ರೈತಸಂಘ, ಚಾಮರಾಜನಗರದ ರೈತ ಸಂಘ, ಕೂಲಿಕಾರರ ಸಂಘಟನೆಗಳ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಬೆಂಗಳೂರಿನ ಪೊಲೀಸ್ ಪ್ರಧಾನ ಕಚೇರಿ ಎದುರು ಟಿ.ಎ.ನಾರಾಯಣಗೌಡರ ಬಣದ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಎದುರು ಪ್ರತಿಭಟನೆ ನಡೆಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+