ಮತ್ತೆ ಗಡಗಡ: ಮ್ಯಾನ್ಮಾರ್ ಭೂಕಂಪಕ್ಕೆ 100 ಬಲಿ

ಯಾಂಗೊ, ಮಾ. 25: ಮ್ಯಾನ್ಮಾರ್-ನಲ್ಲಿ ಗುರುವಾರ ಸಂಜೆ ಬಲವಾದ ಭೂಕಂಪ ಸಂಭವಿಸಿದ್ದು ಅಂದಾಜು 100 ಮಂದಿ ಸಾವಿಗೀಡಾಗಿದ್ದಾರೆ. ನೂರಾರು ಮಂದಿ ಗಾಯಗೊಂಡಿದ್ದಾರೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ಪ್ರಮಾಣ 6.8 ದಾಖಲಾಗಿದ್ದು, 6 ಬಲಿಷ್ಠ ಪಶ್ಚಾತ್ ಕಂಪನಗಳೂ ಸಂಭವಿಸಿವೆ. ಬ್ಯಾಂಕಾಕ್, ಹನೋಯಿ ಮತ್ತು ಚೀನಾದ ಕೆಲವು ಭಾಗಗಳಲ್ಲಿಯೂ ಗುರುವಾರ ಭೂಕಂಪವಾಗಿರುವ ವರದಿಗಳು ಬಂದಿವೆ.

ಥಾಯ್ಲೆಂಡ್ ಗಡಿಯಲ್ಲಿ ಈ ಕಂಪನ ಕಂಡುಬಂದಿದ್ದು, ಅನೇಕ ಭಾಗಗಳು ಸಂಪರ್ಕ ಕಡಿದುಕೊಂಡಿವೆ. ನೂರಾರು ಮನೆಗಳು ನೆಲಕಚ್ಚಿವೆ ಎಂದು ಅಧಿಕೃತ ಮೂಲಗಳು ಶುಕ್ರವಾರ ಹೇಳಿವೆ. ಟರ್ಲೆ, ಮೈನ್ ಲಿನ್ ಮತ್ತು ಟಸಿಲೆಕ್ ಪಟ್ಟಣಗಳಲ್ಲಿಯೂ ಭೂಕಂಪ ಸಂಭವಿಸಿದೆ. ಭೂಕಂಪ ಸಂಭವಿಸಿದ ಇನ್ನೂ ಕೆಲವು ಭಾಗಗಳನ್ನು ತಲುಪಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ. ಶುಕ್ರಾವಾರ ಬೆಳಗ್ಗೆಯೂ ಈ ಭಾಗಗಳಲ್ಲಿ ಮರುಕಂಪನಗಳಾಗಿವೆ. ಚಾರಿತ್ರಿಕ ಪಟ್ಟಣವಾದ ಚಿಯಾಂಗ್ ಶೇನ್-ನಲ್ಲಿ ನಾಲ್ಕು ಇತಿಹಾಸ ಪ್ರಸಿದ್ಧ ಪಗೋಡಾಗಳು ಬಿರುಕು ಬಿಟ್ಟಿವೆ.

ಜನ ಭಯಭೀರಾಗಿದ್ದಾರೆ. ಅನೇಕ ಕಟ್ಟಡಗಳು ಕುಸಿದು ಬಿದ್ದಿವೆ. ಆದರೂ ಮಹಾದುರಂತ ಎನ್ನುವಷ್ಟು ಭೀಕರವಾಗಿಯೇನೂ ಭೂಮಿ ಕಂಪಿಸಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ. ಥಾಯ್ಲೆಂಡ್-ಲಾವೋಸ್ ಗಡಿಯಲ್ಲಿ ಗೋಲ್ಡನ್ ಟ್ರಯಾಂಗಲ್ ಬಳಿಯಿರುವ ಬೆಟ್ಟ ಪ್ರದೇಶದಲ್ಲಿ ಹೆಚ್ಚಿನ ಅನಾಹುತ ಸಂಭವಿಸಿದೆ. 7,000 ಹೆಚ್ಚು ಮಕ್ಕಳು ಇಲ್ಲಿನ ಶಿಕ್ಷಣ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಅವರ ರಕ್ಷಣೆಗೆ ಧಾವಿಸಲು ಪರಿಹಾರ ತಂಡಗಳಿಗೆ ಇನ್ನೂ ಸಾಧ್ಯವಾಗಿಲ್ಲ. ಪ್ರಮುಖ ವಾಣಿಜ್ಯ ಕೇಂದ್ರವೂ ಆದ ಈ ಭಾಗದಲ್ಲಿ ನಷ್ಟದ ಪ್ರಮಾಣ ತಕ್ಷಣಕ್ಕೆ ತಿಳಿದುಬಂದಿಲ್ಲ.

ಮ್ಯಾನ್ಮಾರ್ ಹಿಂದೂ ಸಾಗರದಿಂದ ತುಂಬಾ ದೂರವಿರುವುದರಿಂದ ಸದ್ಯಕ್ಕೆ ಸುನಾಮಿ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ ಮ್ಯಾನ್ಮಾರ್ ಮತ್ತು ಇತ್ತೀಚೆಗಷ್ಟೇ ಭಾರಿ ಸುನಾಮಿ ಕಂಡಿರುವ ಜಪಾನ್ ಭೌಗೋಳಿಕವಾಗಿ ಪ್ರತ್ಯೇಕ ಭೂಕಂಪನ ವಲಯಗಳಲ್ಲಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+