ಸಿಎಂ ಸಭೆಗೆ ಬಂದವರಾರು, ಬಿಟ್ಟವರಾರು?

Chief minister BS Yeddyurappa
ಬೆಂಗಳೂರು, ಮಾ. 24 : ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತ ಶಮನಕ್ಕೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ತಮ್ಮ ಗೃಹ ಕಚೇರಿ ಕೃಷ್ಣಾದಲ್ಲಿ ಕರೆದಿರುವ ಸಭೆಗೆ ಯಾವ್ಯಾವ ಶಾಸಕರು ಬಂದಿದ್ದಾರೆ, ಯಾರ್ಯಾರು ತಪ್ಪಿಸಿಕೊಂಡಿದ್ದಾರೆ ಎಂಬುದು ಭಾರೀ ಕುತೂಹಲ ಕೆರಳಿಸಿದೆ.

ಕುಳಿತಿರುವ ಕುರ್ಚಿ ಮತ್ತೆ ಅಲುಗಾಡುತ್ತಿದೆ, ಚನ್ನಪಟ್ಟಣ, ಜಗಳೂರು, ಬಂಗಾರಪೇಟೆ ಕ್ಷೇತ್ರಗಳಿಗೆ ಉಪಚುನಾವಣೆ ಕಾಲಡಿಯಲ್ಲೇ ಇದೆ. ಮೇಲಾಗಿ ಬಹಿರಂಗವಾಗಿಯಾದರೂ ಯಡಿಯೂರಪ್ಪನವರನ್ನು ಬೆಂಬಲಿಸುತ್ತಿದ್ದ ರಾಜ್ಯಾಧ್ಯಕ್ಷ ಕೆಎಸ್ ಈಶ್ವರಪ್ಪ ಈ ಬಾರಿ ಬಹಿರಂಗವಾಗಿಯೇ ಭಿನ್ನಮತದ ಬಾವುಟ ಹಾರಿಸಿದ್ದಾರೆ. ಯಡಿಯೂರಪ್ಪನವರು ಕರೆದಿರುವ ಸಭೆಯ ಬದಲು ವರಿಷ್ಠರ ಭೇಟಿಗಾಗಿ ಈಶ್ವರಪ್ಪ, ಜನಾರ್ದನ ರೆಡ್ಡಿ, ಅರವಿಂದ ಲಿಂಬಾವಳಿ, ಸಿಟಿ ರವಿ ದೆಹಲಿಗೆ ತೆರಳಿದ್ದಾರೆ.

ಅವರು ದೆಹಲಿಗೆ ತೆರಳಿ ವರಿಷ್ಠರಿಗೆ ಯಡಿಯೂರಪ್ಪ ವಿರುದ್ಧ ಭಿನ್ನವತ್ತಳೆ ಅರ್ಪಿಸಲು ಈಶ್ವರಪ್ಪ, ಅರವಿಂದ ಲಿಂಬಾವಳಿ, ಸಿಟಿ ಮತ್ತು ಜನಾರ್ದನ ರೆಡ್ಡಿ ತೆರಳಿರುವುದು ಪಕ್ಷದಲ್ಲಿ ಅಸಮಾಧಾನದ ಹೊಗೆಯೆಬ್ಬಿಸಿದೆ. ಜಗದೀಶ್ ಶೆಟ್ಟರ್ ಕೂಡ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಹೆದಲಿಗೆ ತೆರಳಿದ್ದಾರೆ. ಭಿನ್ನಾಭಿಪ್ರಾಯಗಳೇನೇ ಇದ್ದರೆ ಅದನ್ನು ಇಲ್ಲೇ ಕುಳಿತು ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಳ್ಳಬಹುದಿತ್ತಲ್ಲ ಎಂದು ಮಾಜಿ ಕೇಂದ್ರ ಸಚಿವ ಧನಂಜಯ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ಸಭೆಗೆ ಸುರೇಶ್ ಕುಮಾರ್, ವಿಎಸ್ ಆಚಾರ್ಯ, ಗೋವಿಂದ ಕಾರಜೋಳ, ಕರುಣಾಕರ ರೆಡ್ಡಿ, ಸಿಎಂ ಉದಾಸಿ, ರೇವೂನಾಯಕ್ ಬೆಳಮಗಿ, ಮುರುಗೇಶ್ ನಿರಾಣಿ, ಬಸವರಾಜ್ ಬೊಮ್ಮಾಯಿ, ಲಕ್ಷ್ಮಣ ಸವದಿ, ಸಿಸಿ ಪಾಟೀಲ್, ಬಚ್ಚೇಗೌಡ, ರೇಣುಕಾಚಾರ್ಯ, ಉಮೇಶ್ ಕತ್ತಿ, ನಾರಾಯಣ ಸ್ವಾಮಿ, ವಿಶ್ವೇಶ್ವರ ಹೆಗಡೆ ಕಾಗೇರಿ, ವಿಜಯ ಶಂಕರ್, ಶೋಭಾ ಕರಂದ್ಲಾಜೆ, ಆರ್ ಅಶೋಕ್, ರವೀಂದ್ರ ನಾಥ್ ಮುಂತಾದ ಸಚಿವರು ಹಾಜರಾಗಿ ಯಡಿಯೂರಪ್ಪನವರಿಗೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ. ಶ್ರೀರಾಮುಲು ಮಾತ್ರ ಬಳ್ಳಾರಿಯಲ್ಲೇ ಕುಳಿತಿರುವುದು ನಾನಾ ಪ್ರಶ್ನೆ ಹುಟ್ಟುಹಾಕುವಂತೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+