ಐಪಿಎಸ್ ಅಧಿಕಾರಿಗಳಿಗೆ ಮತ್ತೆ ವರ್ಗಾವಣೆ
ಬೆಂಗಳೂರು,
ಮಾ.23: ಐಪಿಎಸ್, ಐಎಎಸ್ ಅಧಿಕಾರಿಗಳನ್ನು ಪದೇ ಪದೇ ಬಡ್ತಿ ನೀಡುವ ನೆಪದಲ್ಲಿ ವರ್ಗಾವಣೆ ಮಾಡುವುದನ್ನೇ ಕರ್ನಾಟಕ ಸರ್ಕಾರ ಕಾಯಕ ಮಾಡಿಕೊಂಡಿದೆ. ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ನಡೆಸಲಾಗಿದ್ದು, 24 ಹಿರಿಯ ಐಪಿಎಸ್ ಅಧಿಕಾರಿಗಳನ್ನು ವರ್ಗಾಯಿಸಲಾಗಿದೆ. ಸಾರ್ವಜನಿಕರು ದಯವಿಟ್ಟು ನಿಮ್ಮ ನಿಮ್ಮ ನಿವಾಸದ ವ್ಯಾಪ್ತಿಯ ಠಾಣಾಧಿಕಾರಿ, ವರಿಷ್ಠಾಧಿಕಾರಿಗಳ ಹೆಸರನ್ನು ಮತ್ತೊಮ್ಮೆ ಗಮನಿಸಬೇಕಾಗಿ ವಿನಂತಿ. id="toptextpromo">*
ದಕ್ಷಿಣ ಕನ್ನಡ ಜಿಲ್ಲೆ ಎಸ್ ಪಿ ಆಗಿ ಲಬೂ ರಾಮ್ ಅವರನ್ನು ನೇಮಿಸಲಾಗಿದೆ. ಎಸ್ ಪಿ ಎಎಸ್ ರಾವ್ ಅವರಿಗೆ ಆಂತರಿಕ ಭದ್ರತಾ ವಿಭಾಗಕ್ಕೆ ವರ್ಗಾಯಿಸಲಾಗಿದೆ.* ಹರಿಸಿಂಗ್ ನಿವೃತಿಯಿಂದ ತೆರವಾಗಿದ್ದ ರಾಜ್ಯ ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣೆ ವಿಭಾಗದ ಮಹಾನಿರ್ದೇಶಕ ಹುದ್ದೆಗೆ ಸಿಐಡಿ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಅವರನ್ನು ನೇಮಕ ಮಾಡಲಾಗಿದೆ.
* ಎಚ್‌ಎನ್ ಸತ್ಯನಾರಾಯಣ ರಾವ್ ಅವರಿಗೆ ಭಡ್ತಿ ನೀಡಲಾಗಿದ್ದು ಬೆಂಗಳೂರಿನ ಅಪರಾಧ ಮತ್ತು ತಾಂತ್ರಿಕ ಸೇವೆ ವಿಭಾಗಕ್ಕೆ ಎಡಿಜಿಪಿಯಾಗಿದ್ದಾರೆ. ಅಶಿತ್ ಮೋಹನ್ ಪ್ರಸಾದ್‌ಗೆ ಎಡಿಜಿಪಿಯಾಗಿ ಭಡ್ತಿ ನೀಡಲಾಗಿದೆ.
* ಬೆಂಗಳೂರಿನ ಸಂಪರ್ಕ ಮತ್ತು ಆಧುನಿಕರಣ ವಿಭಾಗದ ಎಂ.ಎ ಸಲೀಂ ಅವರಿಗೆ ಬೆಂಗಳೂರಿನ ಪೊಲೀಸ್ ಆಡಳಿತ ಹುದ್ದೆ ಎಡಿಜಿಪಿಯಾಗಿ ಭಡ್ತಿ.
* ಕೆ.ಎಸ್. ಆರ್ ಚಂದ ಚರಣ ರೆಡ್ಡಿ ಅವರನ್ನು ಈಶಾನ್ಯ ವಲಯ(ದಾವಣಗೆರೆ) ಐಜಿಪಿ ಹುದ್ದೆಗೆ ಭಡ್ತಿ ನೀಡಿ ವರ್ಗಾಯಿಸಲಾಗಿದೆ.
* ಉಡುಪಿ ಎಸ್‌ಪಿ ಮಧುಕರ ಪವಾರ್ ಗುಲ್ಬರ್ಗ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ. ಉಡುಪಿಗೆ ವೈ.ಎಸ್ ರವಿ ಕುಮಾರ್ ಬರಲಿದ್ದಾರೆ.
* ಮಂಗಳೂರು ಡಿಸಿಪಿ ಆರ್. ರಮೇಶ್ ಉತ್ತರ ಕನ್ನಡ ಜಿಲ್ಲೆಗೆ ಎಸ್‌ಪಿಯಾಗಿ ವರ್ಗಾವಣೆಗೊಂಡಿದ್ದಾರೆ.* ಪುತ್ತೂರಿನಲ್ಲಿ ಎಸ್‌ಪಿಯಾಗಿದ್ದ ಅಮಿತ್ ಸಿಂಗ್ ಹಾಸನ ಎಸ್‌ಪಿಯಾಗಿ ನಿಯುಕ್ತಿಗೊಂಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>
ಉಳಿದಂತೆ
ಎಸ್ ಮುರುಗನ್(ಡಿಐಜಿ, ಸಿಐಡಿ, ಆರ್ಥಿಕ ಅಪರಾಧ ವಿಭಾಗ), ಕೆವಿ ಶರತ್ಚಂದ್ರ(ಡಿಐಜಿ, ಬೆಂಗಳೂರು ಕೇಂದ್ರ ವಿಭಾಗ), ಬಿಎ ಪದ್ಮನಯನ್ (ಡಿಐಜಿ, ಸಿಐಡಿ, ಬೆಂಗಳೂರು), ಬಿಎನ್ ಎಸ್ ರೆಡ್ಡಿ(ಡಿಐಜಿ, CAR, ಬೆಂಗಳೂರು), ಪಿಎಚ್ ರಾಣೆ(ಡಿಐಜಿ, ಸುರಕ್ಷತೆ ಬೆಂಗಳೂರು), ಟಿಆರ್ ಸುರೇಶ್ (ಎಸ್ ಪಿ ತುಮಕೂರು), ಡಾ. ಪಿಎಸ್ ಹರ್ಷ(ಡಿಸಿಪಿ ಆಗ್ನೇಯ ಬೆಂಗಳೂರು),ರಮಣ್ ಗುಪ್ತಾ (ಎಸ್ ಪಿ ಶಿವಮೊಗ್ಗ) ಹಾಗೂ ಚೇತನ್ ಸಿಂಗ್ ರಾಥೋಡ್ (ಎಸ್ ಪಿ ಹಾವೇರಿ)











Click it and Unblock the Notifications