ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೈಸೂರಿನಲ್ಲೂ ’ಬಸ್ ಡೇ’ ಆಚರಣೆಗೆ ಸಿದ್ಧತೆ

By Mahesh
|
Google Oneindia Kannada News

KSRTC Bus Day in Mysore
ಮೈಸೂರು, ಮಾ.23: ಬಸ್ ಡೇ ಆಚರಣೆ ಮೂಲಕ ಸಾರ್ವಜನಿಕ ಸಾರಿಗೆ ಬಳಕೆ ಹೆಚ್ಚಳ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮುಂತಾದ ಉತ್ತಮ ಗುರಿಯನ್ನು ಕೆಎಸ್ ಆರ್ ಟಿಸಿ ಇರಿಸಿಕೊಂಡಿದೆ. ಬೆಂಗಳೂರಿನಲ್ಲಿ ಸಚಿವ ಆರ್ ಅಶೋಕ್ ಆರಂಭಿಸಿದ ಈ ಆಚರಣೆ ಜನಪ್ರಿಯಗೊಂಡಿದ್ದು, ಈಗ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಬಸ್ ಡೇ ಜಾರಿಗೆ ಬರಲಿದೆ. ನಂತರ ಬಸ್ ವೀಕ್ ಆಚರಣೆಗೂ ಯೋಜಿಸಲಾಗಿದೆ ಎಂದು ಕೆಎಸ್ ಆರ್ ಟಿಸಿ ವ್ಯವಸ್ಥಾಪಕ ನಿರ್ದೇಶಕ ಗೌರವ್ ಗುಪ್ತಾ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಐಟಿ, ಬಿಟಿ ಜನರನ್ನು ಗುರಿಯನ್ನಾಗಿಸಿಕೊಂಡು ಜಾರಿಗೆ ತಂದಿದ್ದ ಬಸ್ ಡೇ ಈಗ ಮೈಸೂರಿಗೆ ಬಂದಿದೆ. ಪರಿಸರ ಸಂರಕ್ಷಣೆ, ಶಬ್ದ ಹಾಗೂ ವಾಯು ಮಾಲಿನ್ಯ ನಿಯಂತ್ರಿಸುವ ಮುಖ್ಯ ಉದ್ದೇಶದ ಜತೆಗೆ ಸ್ವಂತ ವಾಹನ ಹೊಂದಿರುವ ಉದ್ಯೋಗಿಗಳನ್ನು ಬಸ್ ಸಂಚಾರಕ್ಕೆ ಪ್ರೇರೆಪಿಸುವ ಗುರಿಯನ್ನು ಈ ಬಸ್ ಡೇ ಹೊಂದಿದೆ.

ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾರ್ವಜನಿಕರು ಹಾಗೂ ವಿವಿಧ ಖಾಸಗಿ ಸಂಸ್ಥೆ ಪ್ರತಿನಿಧಿಗಳ ಜತೆ ಸಮಾಲೋಚನಾ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಸಾರಿಗೆ ಇಲಾಖೆ ಎಂಡಿ ಸೌರವ್ ಗುಪ್ತ ಭಾಗವಹಿಸಿ ಬಸ್ ಡೇ ಮಹತ್ವ ವಿವರಿಸಿದರು. ವಿದ್ಯಾರ್ಥಿಗಳನ್ನು ಬಳಸಿಕೊಂಡು ಬಸ್ ಡೇ ಜನಪ್ರಿಯಗೊಳಿಸಲು ಯೋಜಿಸಲಾಗಿದೆ. ವಿದ್ಯಾರ್ಥಿಗಳು ಬಸ್ ಡೇ ಬಗ್ಗೆ ಯಾವುದೇ ಸಲಹೆ, ಸೂಚನೆಗಳಿದ್ದರೆ [email protected] ಮೇಲ್ ಕಳಿಸಬಹುದು ಅಥವಾ 51516 ಸಂಖ್ಯೆಗೆ ಎಸ್ ಎಂಎಸ್ ಕಳಿಸಬಹುದು ಎಂದರು.

ನಾಲ್ಕು ರೂಟ್ ಗಳಲ್ಲಿ ಬಸ್ ಡೇ:
ಏಪ್ರಿಲ್ 8 ರಂದು ಮೈಸೂರು ನಗರದಲ್ಲಿ ಈ ಬಸ್ ಡೇ ಆಚರಣೆ ಜಾರಿಗೆ ಬರಲಿದೆ. ಅಂದು ದಿನವಿಡಿ ಸಿಟಿ ಬಸ್ ನಿಲ್ದಾಣದಿಂದ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿರುವ L

English summary
BMTC Bus Day introduced by Minister R Ashok is catching its popularity. Now, Karnataka State Road Transport Corporation Bus Day will be observed in Mysore on April 8 said KSRTC Managing Director Gaurav Gupta. Bus Day is observed to encourage the use of public transport to save fuel, minimize air and noise pollution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X