ಸಶಸ್ತ್ರ ಪಡೆಗಳ ಸಮರಾಭ್ಯಾಸಕ್ಕೆ ಜಾಗವೇ ಇಲ್ಲ

ನವದೆಹಲಿ,

ಮಾ.
22:
ಸತತ
ಅಭ್ಯಾಸದಿಂದ
ಗುಡ್ಡದಂತಹ
ಸಮಸ್ಯೆಯನ್ನೂ
ಕರಗಿಸಬಹುದಂತೆ.
ಅದೇನೋ
ಸರಿ.
ಆದರೆ
ಶಸ್ತ್ರಾಭ್ಯಾಸ
ಮಾಡಲು
ನಮ್ಮ
ಭದ್ರತಾ
ಪಡೆಗಳಿಗೆ
ಗುಡ್ಡವೇ
ಇಲ್ಲವಾಗಿದೆ.
ಗುಡ್ಡ
ಕರಗಿ
ಗುಡ್ಡೆ
ಆಗಿದೆ.
ವಿಶ್ವದಲ್ಲಿ
ಎರಡನೆಯ
ಅತಿ
ದೊಡ್ಡ
ಸೇನೆಯನ್ನು
ಹೊಂದಿರುವ
(11
ಲಕ್ಷ
ಯೋಧರು)
ಭಾರತದ
ಸೇನೆಗೆ
ಅಭ್ಯಾಸ
ಕಾರ್ಯಾಚರಣೆಗಾಗಿ
ಕೇವಲ
40
ಜಾಗಗಳು
ಉಳಿದಿವೆ.
ಹಿಂದೆ
ನೂರಕ್ಕೂ
ಹೆಚ್ಚು
ಇದ್ದವು.
ಹೆಚ್ಚುತ್ತಿರುವ
ಕೈಗಾರಿಕೀಕರಣ
ಮತ್ತು
ಪರಿಸರ
ಕಾಳಜಿ
ಸೇನಾಭ್ಯಾಸಕ್ಕೆ
ಮುಳುವಾಗಿದೆ.

id="toptextpromo">

ಇನ್ನು,

ವಾಯುಪಡೆಗೆ
ತನ್ನದೇ
ಜಾಗದಲ್ಲಿ
ಬಾಂಬ್
ಎಸೆಯುವುದಕ್ಕೂ
ಹಿಂದುಮುಂದು
ನೋಡುವಂತಾಗಿದೆ.
ಬಾಂಬ್
ಸ್ಫೋಟ
ಪ್ರಾಕ್ಟೀಸ್
ಮಾಡಲು
ವಾಯುಪಡೆ
ಬಳಿ
ಏಳು
ಮೈದಾನಗಳಿವೆ.
ಆದರೆ
ಅಲ್ಲೆಲ್ಲ
ಜನ
ಓಡಾಡುವುದು
ಹೆಚ್ಚಾಗಿದೆ.
ಮೈದಾನಗಳ
ಸುತ್ತಮುತ್ತಲ
ಜಾಗದಲ್ಲಿಯೇ
ಜನ
ಠಿಕಾಣಿ
ಹೂಡುತ್ತಿದ್ದಾರೆ.
ಹೀಗಿರುವಾಗ
ಬಾಂಬ್
ಎಸೆಯುವುದು
ಎಲ್ಲಿಯ
ಮಾತು?
'ಕ್ಷಿಪಣಿ
ಪ್ರಯೋಗಕ್ಕಾಗಿ
ಎಲ್ಲಾ
ಯೋಧರನ್ನೂ
ಎಲ್ಲ
ಕಾಲದಲ್ಲೂ
ರಾಜಸ್ಥಾನದ
ಪೋಖ್ರಾನ್
ರೇಂಜ್-ಗೆ
ಕಳಿಸಲಾಗದು.
ಇರುವುದದೊಂದೇ
ಏನ್ಮಾಡೋಣ.
ಪರಿಸರ
ಸಂರಕ್ಷಣೆಯೂ
ಮುಖ್ಯವೇ.
ಆದರೆ
ನಮ್ಮ
ಸಮಸ್ಯೆಯೇನೂ
ಗೌಣವೇ?'
ಎಂದು
ಹಿರಿಯ
ಸೇನಾಧಿಕಾರಿಯೊಬ್ಬರು
ಖೇದ
ವ್ಯಕ್ತಪಡಿಸುತ್ತಾರೆ.

id='are-slot-1'
class='oiad
oi-axt
oiadv'>
id='top-searched-articles'>

ಒರಿಸ್ಸಾದ

ಬಾಲಾಸೋರ್
ಜಿಲ್ಲೆಯಲ್ಲಿ
ಮೂರು
ಬಂದರುಗಳನ್ನು
ಸ್ಥಾಪಿಸಲು
ಸರಕಾರವೇನೋ
ಆಲೋಚಿಸುತ್ತಿದೆ.
ಆದರೆ
ಅದು
ತನಗೆ
ಅಪಾಯಕಾರಿ
ಎಂದು
ಮನವರಿಕೆ
ಮಾಡಿಕೊಡುವಲ್ಲೇ
ರಕ್ಷಣಾ
ಸಂಶೋಧನೆ
ಮತ್ತು
ಅಭಿವೃದ್ಧಿ
ಸಂಸ್ಥೆ
(ಡಿಆರ್
ಡಿಒ)
ಶಕ್ತಿ
ವ್ಯಯವಾಗುತ್ತಿದೆ.
ರಕ್ಷಣಾ
ಸಚಿವ
ಎಕೆ
ಆಂಟನಿ
ಅವರೇ
ಸಾಕ್ಷಾತ್
ಲೋಕಸಭೆಯಲ್ಲಿ
ಬಗ್ಗೆ
ಆತಂಕ
ವ್ಯಕ್ತಪಡಿಸಿದ್ದಾರೆ.
ಪರಿಸ್ಥಿತಿ
ಹೀಗೇ
ಸಾಗಿದರೆ
ಏನೋ,
ಎಂತೋ?
ಎಂಬ
ಆತಂಕದಲ್ಲಿವೆ
ಸೇನಾಪಡೆಗಳು.
ಸರಕಾರ
ಈಗಲೇ
ಎಚ್ಚೆತ್ತುಕೊಳ್ಳುವುದು
ಒಳಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+