ಬಚ್ಚಾ ಶವಪರೀಕ್ಷೆ: ವೈದ್ಯನ ರಾಜೀನಾಮೆ ತಿರಸ್ಕೃತ

ವೀಡಿಯೊ: ವೈದ್ಯ ದೇಕಲ್ ರಾಜೀನಾಮೆ ರಾಜಕೀಯಕ್ಕೆ ತಣ್ಣೀರು
ರಾಯಪೇಟ ಸರಕಾರಿ ಆಸ್ಪತ್ರೆಯ ವೈದ್ಯರಾಗಿರುವ ದೇಕಲ್, ರಾಜೀನಾಮೆ ನೀಡಿ ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಗಳಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಉದ್ದೇಶ ಹೊಂದಿದ್ದರು. ಗಮನಾರ್ಹವೆಂದರೆ ಸೇವೆಯಿಂದ ಮುಕ್ತಗೊಳಿಸುವಂತೆ ಮಾರ್ಚ್ 3ರಂದೇ ಅವರು ಸರಕಾರಕ್ಕೆ ಪತ್ರ ಬರೆದಿದ್ದರು. ಸಿಬ್ಬಂದಿ ಕೊರತೆ ನೆಪವೊಡ್ಡಿ ಅವರ ರಾಜೀನಾಮೆಯನ್ನು ತಿರಸ್ಕರಿಸಲಾಗಿದ್ದು, ಮಂಗಳವಾರ ಅವರು ಸೇವೆಗೆ ಮರಳಬೇಕಾಗಿದೆ.
ರಾಜಾ ನಿಕಟವರ್ತಿ ಸಾದಿಕ್ ಬಚ್ಚಾ ಮಾರ್ಚ್ 16ರಂದು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದ. ಬಚ್ಚಾ ಒಡೆತನದ ಗ್ರೀನ್ ಹೌಸ್ ಪ್ರಮೋಟರ್ಸ್ ಕಂಪನಿ ಸ್ಪೆಕ್ರ್ಟಂ ಹಗರಣದಲ್ಲಿ ನಡೆದ ಲೇವಾದೇವಿಯಲ್ಲಿ ಭಾಗಿಯಾಗಿತ್ತೇ ಎಂಬುದರ ಬಗ್ಗೆ ಸಿಬಿಐ ತನಿಖೆ ನಡೆಯುತ್ತಿತ್ತು. ರಾಯಪೇಟ ಆಸ್ಪತ್ರೆಯಲ್ಲಿ ಎರವಲು ಸೇವೆಯಲ್ಲಿದ್ದ ಮೂಲತಃ ಕಿಳ್ ಪಾಕ್ ವೈದ್ಯಕೀಯ ಕಾಲೇಜಿನ ಪ್ರೊಫೆಸರ್ ದೇಕಲ್, ಮಾರ್ಚ್ 17ರಂದು ಬಚ್ಚಾ ಶವಪರೀಕ್ಷೆ ನಡೆಸಿದ್ದರು. ಬಚ್ಚಾನನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ ಎಂದು ಅವರು ವರದಿ ನೀಡಿದ್ದರು.












Click it and Unblock the Notifications