ಪ್ರೇರಣಾಂಗಣ: ಲೋಕಸಭೆಯಲ್ಲಿ ತೊಡೆತಟ್ಟಿದ ದೇವೇಗೌಡ
ನವದೆಹಲಿ,
ಮಾ. 16: ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ಮತ್ತು ಅಳಿಯನಿಗೆ ಸೇರಿದ ಪ್ರೇರಣಾ ಟ್ರಸ್ಟ್ ದೇಣಿಗೆ ಸಂಗ್ರಹ ಹಗರಣ ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬುಧವಾರ ತೀವ್ರ ಬಿರುಗಾಳಿ ಎಬ್ಬಿಸಿದೆ. ಮಾಜಿ ಪ್ರಧಾನಿ ದೇವೇಗೌಡ ಅವರು ಲೋಕಸಭೆಯಲ್ಲಿ ವಿಷಯ ಪ್ರಸ್ತಾಪನೆಗೆ ಪಟ್ಟು ಹಿಡಿದು, ಹಗರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಆಗ್ರಹಿಸಿದರು. ಇತ್ತ ರಾಜ್ಯದ ಎರಡೂ ಸದನಗಳಲ್ಲಿ ಮೂರನೇ ದಿನವೂ ಹಗರಣ ತೀವ್ರ ಸಂಚಲನವನ್ನುಂಟುಮಾಡಿದೆ. id="toptextpromo">ಲೋಕಸಭೆ
ಕಲಾಪದಲ್ಲಿ ಜೆಡಿಎಸ್ ಸಂಸದ ದೇವೇಗೌಡ ಅವರು ಶೂನ್ಯವೇಳೆಯಲ್ಲಿ ವಿಷಯವನ್ನು ಪ್ರಸ್ತಾಪಿಸಲು ಹವಣಿಸಿದರು. ಇದರಿಂದ ಸಭೆಯಲ್ಲಿ ತೀವ್ರ ಕೋಲಾಹಲ ಸೃಷ್ಟಿಯಾಯಿತು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅವ್ಯವಹಾರಗಳ ವಿರುದ್ಧ ವಾಗ್ದಾಳಿ ನಡೆಸತೊಡಗಿದರು. ಬಿಜೆಪಿ ಸಂಸದರು ದೇವೇಗೌಡರ ಆರೋಪಗಳ ಬಗ್ಗೆ ಕಿಡಿಕಾರಿದರು. ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸಂಸದರು ಸದನದ ಬಾವಿಗಿಳಿದು ಗೌಡರ ವಿರುದ್ಧ ಘೋಷಣೆ ಕೂಗತೊಡಗಿದರು. ಆಗ ಸ್ಪೀಕರ್ ಮೀರಾಕುಮಾರ್ ಸ್ವಲ್ಪ ಹೊತ್ತು ಕಲಾಪವನ್ನು ಮುಂದೂಡಿದರು. ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ಗೌಡರು ತಮ್ಮ ದಾಳಿಯನ್ನು ಮುಂದುವರಿಸಿ, ಸಿಬಿಐ ತನಿಖೆಗೆ ಒಪ್ಪಿಸಲೇಬೇಕು ಎಂಬ ವಾದವನ್ನು ಮುಂದುವರಿಸಿದರು. id='are-slot-1' class='oiad oi-axt oiadv'> id='top-searched-articles'>ಇತ್ತ,
ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್-ನಲ್ಲೂ ಪ್ರಕರಣ ತೀವ್ರ ಕೋಲಾಹಲಕ್ಕೆ ಕಾರಣವಾಗಿದೆ. ಹಗರಣದ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರಕ್ಕೆ ಹೊಸ ಮಾರ್ಗವನ್ನೇ ಸೃಷ್ಟಿಸಿಕೊಟ್ಟಿದ್ದಾರೆ. ಯಡಿಯೂರಪ್ಪ ಅವರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವುದೇ ನಮ್ಮ ಉದ್ದೇಶ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ನೇತೃತ್ವವದಲ್ಲಿ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸತೊಡಗಿದರು. ಯಡಿಯೂರಪ್ಪ ಮತ್ತು ಕಾಂಗ್ರೆಸ್ ಸದಸ್ಯರ ಮಧ್ಯೆ ತೀವ್ರ ಮಾತಿನ ಚಕಮಕಿಯೂ ನಡೆಯಿತು.ಒಂದು ಹಂತದಲ್ಲಿ ಯಡಿಯೂರಪ್ಪ ರಾಜೀನಾಮೆ ನೀಡಲೇಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಯಡಿಯೂರಪ್ಪ ಯಾವುದೇ ಕಾರಣಕ್ಕೂರಾಜೀನಾಮೆ ನೀಡುವುದಿಲ್ಲ. ಪ್ರಕರಣವನ್ನು ಯಾವುದೇ ತನಿಖೆಗೂ ಒಪ್ಪಿಸುವುದಿಲ್ಲ. ಮೊದಲು ಆರೋಪವನ್ನು ಸಾಬೀತುಪಡಿಸಿ ಎಂದು ಸವಾಲ್ ಹಾಕಿದರು.












Click it and Unblock the Notifications