ಕಾಡಿಗೆ ಬೆಂಕಿಯೇ? ಕಂಟ್ರೋಲ್ ರೂಮ್-ಗೆ ಕರೆ ಮಾಡಿ
ಬೆಂಗಳೂರು,
ಮಾ. 12: ಅರಣ್ಯ ಇಲಾಖೆಯಲ್ಲಿ ನಡೆಯುತ್ತಿರುವ ಅಕ್ರಮ ಕೃತ್ಯಗಳನ್ನು ನಿಯಂತ್ರಿಸಲು ಇಲಾಖೆ ಕೊನೆಗೂ ಮುಂದಾಗಿದೆ. ತನ್ಮೂಲಕ ಕಳೆದ ಎಂಟು ವರ್ಷಗಳಿಂದ ನಿಷ್ಪ್ರಯೋಜಕವಾಗಿದ್ದ ಅರಣ್ಯ ಇಲಾಖೆ ನಿಯಂತ್ರಣ ಕೊಠಡಿಗೆ ಮರುಜೀವ ನೀಡಲಾಗಿದೆ. ಮರ, ಪ್ರಾಣಿಗಳ ಹನನ, ಮರದ ತುಂಡುಗಳ ಕಳ್ಳಸಾಗಣೆ ಸೇರಿದಂತೆ ಅರಣ್ಯದಲ್ಲಿ ನಡೆಯುವ ಇನ್ನಿತರೆ ಅಪರಾಧ ಕೃತ್ಯಗಳಿಗೆ ಬ್ರೇಕ್ ಬೀಳಲಿದೆ. ಅರಣ್ಯದಲ್ಲಿನ ಕುಕೃತ್ಯಗಳನ್ನು ತಡೆಗಟ್ಟುವ ಉದ್ದೇಶದಿಂದ ನಿಯಂತ್ರಣ ಕೊಠಡಿಗೆ ಮರುಜೀವ ನೀಡಲಾಗಿದೆ. id="toptextpromo">'ಬೇಸಿಗೆ
ಕಾಲ ಕಾಲಿಟ್ಟಿದೆ. ಸಾಮಾನ್ಯವಾಗಿ ಈ ಕಾಲದಲ್ಲಿ ಅರಣ್ಯ ಪ್ರದೇಶದಲ್ಲಿ ಕಿಚ್ಚು ಕಾಣಿಸಿಕೊಳ್ಳುತ್ತದೆ. ಕಾಡು ಪ್ರಾಣಿಗಳು ನಾಡಿಗೆ ಬರುವುದೂ ಋತುವಿನಲ್ಲಿ ಹೆಚ್ಚು. ಇನ್ನು ಅಪಘಾತಗಳಲ್ಲಿ ಪ್ರಾಣಿಗಳು ಸಾವಿಗೀಡಾಗುವುದು ಹೆಚ್ಚಾಗುತ್ತಿದೆ. ಜತೆಗೆ ಅರಣ್ಯ ಇಲಾಖೆಯಲ್ಲೂ ಅಪರಾಧ, ಅಕ್ರಮಗಳು ಹೆಚ್ಚುತ್ತಿವೆ. ಇದರ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅನುಕೂಲವಾಗುವಂತೆ ಈ ನಿಯಂತ್ರಣ ಕೊಠಡಿಗೆ ಕಾಯಕಲ್ಪ ನೀಡಲಾಗಿದೆ. ಜನ ಇದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಅರಣ್ಯ ಸಚಿವ ಸಿ.ಎಚ್. ವಿಜಯಶಂಕರ್ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಬೆಂಗಳೂರಿನ
ಮಲ್ಲೇಶ್ವರಂನಲ್ಲಿರುವ ಅರಣ್ಯ ಭವನದಲ್ಲಿ ಮಾತ್ರ ಈ ಕೊಠಡಿಯಿದ್ದು, ಇತ್ತೀಚೆಗೆ ಮತ್ತೆ ಕಾರ್ಯಾರಂಭಿಸಿದೆ. ಿಲ್ಲಿ ಇಲಾಖೆಯ ಆರು ಮಂದಿ ಹಗಲು ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಾರೆ. ಸಾರ್ವಜನಿಕರು ರಾಜ್ಯದ ಯಾವುದೇ ಮೂಲೆಯಿಂದ 080-8805 0555ಗೆ
ಕರೆ
ಮಾಡಬಹುದು.
ಹಾಗೆಯೇ,
96395
66677
ಮೊಬೈಲ್-ಗೆ
ಎಸ್ಎಂಎಸ್
ಮಾಡಿ
ಮಾಹಿತಿ
ನೀಡಬಹುದು.
ww.aranya.gov.in
ವೆಬ್
ಸೈಟ್
ಅನ್ನೂ
ಸಂಪರ್ಕಿಸಬಹುದು.
ಕರೆ
ಸ್ವೀಕರಿಸುವ
ಸಿಬ್ಬಂದಿ
ತಕ್ಷಣ
ಆ
ಬಗ್ಗೆ
ಸಂಬಂಧಪಟ್ಟವರಿಗೆ
ಮಾಹಿತಿ
ರವಾನಿಸಲಿದ್ದಾರೆ.
ಕರೆ
ಅಥವಾ
ಸಂದೇಶದ
ಮೂಲಕ
ಮಾಹಿತಿ
ನೀಡುವವರ
ಹೆಸರನ್ನು
ಗೌಪ್ಯವಾಗಿಡಲಾಗುವುದು
ಎಂದು
ಇಲಾಖೆ
ತಿಳಿಸಿದೆ.












Click it and Unblock the Notifications