ಬಿಐಎಎಲ್ ಗೆ ಟಿಪ್ಪು ಸುಲ್ತಾನ್ ಹೆಸರಿಡಲು ಅಗ್ರಹ

ಮೈಸೂರು ಹುಲಿ ಟಿಪ್ಪು ಸುಲ್ತಾನ್ ಬ್ರಿಟಿಷರ ವಿರುದ್ಧ ಹೋರಾಡಿ ಹುತಾತ್ಮರಾದರೂ ಅವರ ಹುಟ್ಟೂರು ದೇವನಹಳ್ಳಿ. ನಾಡಪ್ರಭು ಕೆಂಪೇಗೌಡರ ಸಾಧನೆಯನ್ನು ಸ್ಮರಿಸಲು ಬೇರೆ ಮಾರ್ಗಗಳಿವೆ. ನಾಡಿನ ಐತಿಹಾಸಿಕ ಸ್ಮಾರಕಗಳು, ಸ್ಥಳಗಳಿಗೆ ಕೆಂಪೇಗೌಡರ ಹೆಸರು ಇಡುವುದು ಸೂಕ್ತ. ಟಿಪ್ಪು ಸುಲ್ತಾನ್ ನಾಡಿನ ಸಂಸ್ಕೃತಿ, ಭಾಷೆ, ನೆಲ, ಜಲ ರಕ್ಷಣೆಗಾಗಿ ಹಲವು ಯೋಜನೆಗಳನ್ನು ರೂಪಿಸಿದ್ದಾರೆ. ಅವರ ಹೆಸರನ್ನು ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ಇಡುವುದು ಎಲ್ಲ ರೀತಿಯಿಂದಲೂ ಸೂಕ್ತ ಎಂದು ಸಂಘಟನೆಯ ಅಧ್ಯಕ್ಷ ಸರ್ದಾರ್ ಅಹ್ಮದ್ ಖುರೇಶಿ ಹೇಳಿದ್ದಾರೆ.
ಎಚ್ ಡಿ ದೇವೇಗೌಡರು ಪ್ರಧಾನಿಯಾಗಿದ್ದ ಕಾಲದಿಂದಲೂ ಟಿಪ್ಪು ಸುಲ್ತಾನ್ ಹೆಸರಿಡುವಂತೆ ಮನವಿ ಮಾಡುತ್ತಾ ಬಂದಿದ್ದೇವೆ. ಯಾವ ಸರ್ಕಾರವೂ ಸೂಕ್ತ ಕ್ರಮ ಕೈಗೊಂಡಿಲ್ಲ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಬಗ್ಗೆ ಮತ್ತೊಮ್ಮೆ ಯೋಚಿಸುವುದು ಒಳ್ಳೆಯದು. ಸರ್ಕಾರ ಸೂಕ್ತವಾಗಿ ಸ್ಪಂದಿಸದಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಜನಪರ ಸಂಘಟನೆಗಳ ಜೊತೆಸೇರಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಕರ್ನಾಟಕ ಮುಸ್ಲಿಮರ ವೇದಿಕೆ ಅಧ್ಯಕ್ಷ ಖಾಸಿಂ ಸಾಬ್ ಹೇಳಿದರು.
ಆದರೆ, ನಾಡಪ್ರಭು ಕೆಂಪೇಗೌಡ ಅವರ 500ನೇ ಜಯಂತಿಯನ್ನು 5 ಕೋಟಿ ರು ವೆಚ್ಚದಲ್ಲಿ ಆಚರಿಸಲು ಸರ್ಕಾರ ಮುಂದಾಗಿದೆ. ಡಾ ಹೇಮಚಂದ್ರ ಸಾಗರ್ ನೇತೃತ್ವದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜಂಟಿ ಸದನ ಪರಿಶೀಲನಾ ಸಮಿತಿ ಸಲ್ಲಿಸಿದ್ದ ವರದಿಯ ಆಧಾರದ ಮೇಲೆ, ಬಿಐಎಎಲ್ ಗೆ ಕೆಂಪೇಗೌಡರ ಹೆಸರಿಡುವುದು ಸೂಕ್ತ ಎಂದು ನಿರ್ಧರಿಸಿದೆ. ಈ ವಿಷಯವನ್ನು ಸ್ವತಃ ಮುಖ್ಯಮಂತ್ರಿಗಳು ಹೇಳಿದ್ದಾರೆ.












Click it and Unblock the Notifications