ಅಜ್ಜಿಯ ಸಾವಿನ ಸಮ್ಮುಖದಲ್ಲಿ ನಡೆಯಲಿದೆ ವರುಣ್‌ ವಿವಾಹ

varun-gandhi1
ವಾರಣಾಸಿ, ಮಾ 2: ಇಂದಿರಾಗಾಂಧಿ ಮೊಮ್ಮಗ, ಬಿಜೆಪಿ ಸಂಸದ ಫಿರೋಜ್‌ ವರುಣ್ ಗಾಂಧಿ ಮತ್ತು ಯಾಮಿನಿ ರಾಯ್ ಚೌಧರಿ ಅವರ ಮದುವೆ ಪೂರ್ವ ನಿರ್ಧಾರದಂತೆ ಮಾರ್ಚ್ 6ರಂದು ನಡೆಯಲಿದೆ. ಹೀಗೇಕೆ ಎಂದರೆ ವರುಣ್‌ ಅವರ ಅಜ್ಜಿ ಅಂದರೆ ಮೇನಕಾ ಗಾಂಧಿ ಅವರ ತಾಯಿ ಅಮತೇಶ್ವರ ಆನಂದ್‌ (77) ಮೊನ್ನೆ ಸೋಮವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.

ಆದಾಗ್ಯೂ ಸೂತಕದ ಛಾಯೆ ಶುಭ ಕಾರ್ಯದ ಮೇಲೆ ಬೀಳದಂತೆ ಮೊಮ್ಮಗನ ಮದುವೆ ನಿರ್ವಿಘ್ನವಾಗಿ ನೇರವೇರಲೆಂದು ಹಿರಿಯರು ನಿಶ್ಚಯಿಸಿದ್ದಾರೆ. ಅಲ್ಲಿಗೆ ಅಮತೇಶ್ವರ ಅವರ ಮೊಮ್ಮಗ ವರುಣ್‌ ಮತ್ತು ಗ್ರಾಫಿಕ್‌ ಡಿಸೈನರ್‌ ಯಾಮಿನಿ ರಾಯ್ ಚೌಧರಿ ವಿವಾಹ ಶುಭಪ್ರದವಾಗಿ ನಡೆಯಲಿದೆ. ಆದರೆ ಸಮಾರಂಭವನ್ನು ಸರಳವಾಗಿ, ಶಾಸ್ತ್ರೋಕ್ತವಾಗಿ ನಡೆಸಲು ನಿರ್ಧರಿಸಲಾಗಿದೆ.

ಆದರೆ ನವದೆಹಲಿಯ ಅಶೋಕ ಹೋಟೆಲ್‌ನಲ್ಲಿ ಮಾರ್ಚ್ 8ರಂದು ನಡೆಯಬೇಕಿದ್ದ ವಿವಾಹ ಆರತಕ್ಷತೆಯನ್ನು ಸ್ಥಗಿತಗೊಳಿಸಲಾಗಿದೆ. ಅನೇಕ ರಾಜಕೀಯ ನಾಯಕರು, ಬಾಲಿವುಡ್‌ ಸ್ನೇಹಿತರು, ಕಲಾವಿದರು ಸೇರಿದಂತೆ ಒಟ್ಟು 1600 ಮಂದಿಗೆ ಆಮಂತ್ರಣ ನೀಡಲಾಗಿತ್ತು.

ಅಲ್ಲಿಗೆ, ಸನಾತನ ಸಂಪ್ರದಾಯದಲ್ಲಿ ಕಂಚಿ ಕಾಮಕೋಟಿ ಪಿಠಂನ ಶಂಕರಾಚಾರ್ಯ ಸ್ವಾಮಿ ಜಯೇಂದ್ರ ಸರಸ್ವತಿ ಅವರ ಸಮ್ಮುಖದಲ್ಲಿ ಮಾರ್ಚ್ 6ರಂದು ವಾರಣಾಸಿಯಲ್ಲಿ ನೆರವೇರಲಿದೆ. ಇಲ್ಲಿನ ಹನುಮಾನ್ ಘಾಟ್‌ನಲ್ಲಿರುವ ಶ್ರೀ ಕಾಶಿ ಕಾಮಕೋಟೀಶ್ವರ ದೇವಾಲಯದಲ್ಲಿ ಸಂಜಯ್ ಗಾಂಧಿ ಹಾಗೂ ಮೇನಕಾ ಗಾಂಧಿ ಅವರ ಏಕೈಕ ಪುತ್ರ ವರುಣ್ ಮದುವೆ ನಡೆಯಲಿದೆ. ವಿವಾಹಕ್ಕಾಗಿ ಸೋನಿಯಾ ಗಾಂಧಿ ಸೇರಿದಂತೆ ಕೆಲವೇ ಮಂದಿಗೆ ಆಮಂತ್ರಣ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+