ಈ ಐನಾತಿ ಕಳ್ಳರು ಕದ್ದ ಮಾಲು ಕೋಟಿಗೂ ಅಧಿಕ

ಮಂಜೇಶ್ವರ ವರ್ಕಾಡಿಯ ಮೊದಿನ್ ಅಲಿಯಾಸ್ ಪಿ.ಎಸ್. (37), ಜೋಕಟ್ಟೆ ಸಮೀಪದ ತೋಕೂರಿನ ಹನೀಫ್ ಅಲಿಯಾಸ್ ಎಲಿ ಹನೀಫ್ (37), ವಿಟ್ಲಪಡ್ನೂರು ಕಂಬಳಬೆಟ್ಟುವಿನ ಎಸ್.ಅಶ್ರಫ್ (28), ಮೂಲತ: ಶಿವಮೊಗ್ಗದ ಪ್ರಸ್ತುತ ಬೆಂಗಳೂರು ನಿವಾಸಿ ಸಯ್ಯದ್ ನಿಹಾಲ್ ಅಲಿಯಾಸ್ ಸೈಯ್ಯದ್ ಇರ್ಫಾನ್ ನಿಹಾಲ್ ಅಲಿಯಾಸ್ ಇರ್ಫಾನ್ (40), ಹಾಸನ ಜಿಲ್ಲೆಯ ಚಿಪ್ಪಿನಕಟ್ಟೆಯ ಮೊದಿನ್ ಶರೀಫ್ ಅಲಿಯಾಸ್ ಆರ್‌ಟಿಓ ಮೊದಿನ್ (42)ಎಂಬುವರು ಬಂಧಿತ ಆರೋಪಿಗಳಾಗಿದ್ದಾರೆ.
ಬಂಧಿತರಿಂದ 22 ದ್ವಿಚಕ್ರ ಮತ್ತು 10 ನಾಲ್ಕು ಚಕ್ರ ಮತ್ತು 4 ಆರು ಚಕ್ರದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಲ್ಲಿ ಲಾರಿ, ಟಿಪ್ಪರ್, ಇಂಡಿಕಾ, ಮಾರುತಿ ಓಮ್ನಿ, ಮಾರುತಿ ಸ್ವಿಫ್ಟ್, ಮಾರುತಿ 800, ಸ್ಯಾಂಟ್ರೋ, ಇನ್ನೋವ, ಸ್ಕಾರ್ಪಿಯೋ ಕಾರುಗಳು ಸೇರಿದೆ. ಇದರ ವೌಲ್ಯ 1.20 ಕೋಟಿ ರೂಪಾಯಿಗೂ ಅಧಿಕವಾಗಿರಬಹುದು ಎಂದು ಅಂದಾಜಿಸಲಾಗಿದೆ.
ಕಳ್ಳರ ವಿಸ್ತೃತ ಜಾಲ :ಬೆಂಗಳೂರು, ಹುಬ್ಬಳ್ಳಿ, ಮಂಗಳೂರು, ಮಂಡ್ಯ, ದಾವಣಗೆರೆ, ಕೇರಳ, ಅರಸೀಕೆರೆ, ಮಂಜೇಶ್ವರ, ಮೈಸೂರು, ಬಂಟ್ವಾಳ ಸೇರಿದಂತೆ ವಿವಿಧೆಡೆ ನಿಹಾಲ್ ನೇತೃತ್ವದ ವಾಹನ ಕಳ್ಳತನದಲ್ಲಿ ಈ ತಂಡ ತೊಡಗಿತ್ತು. ಬಂಟ್ವಾಳ ನಗರ ಮತ್ತು ಬಂಟ್ವಾಳ ಗ್ರಾಮಾಂತರ ಹಾಗೂ ವಿಟ್ಲ ಠಾಣಾ ವ್ಯಾಪ್ತಿಗಳಲ್ಲಿ ವಾಹನ ಕಳವು ಪ್ರಕರಣ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಅಧಿಕಾರಿಗಳು ಈ ನಿಟ್ಟಿನಲ್ಲಿ ವಿಶೇಷ ತನಿಖೆ ನಡೆಸಲಾಯಿತು.
ಮೊದಲಿಗೆ ಮೊದಿನ್ ಮತ್ತು ಹನೀಫ್‌ರನ್ನು ವಶಕ್ಕೆ ತೆಗೆದು ವಿಚಾರಿಸಿದಾಗ ವಾಹನ ಕಳವಿನ ಬೃಹತ್ ಜಾಲದ ಸುಳಿವು ಲಭ್ಯವಾಗಿ ಉಳಿದ ಮೂವರನ್ನು ಬಂಧಿಸಿದರು. ಈ ತಂಡದವರು ಕರ್ನಾಟಕ, ಕೇರಳ, ಮಹಾರಾಷ್ಟ್ರದಲ್ಲಿ ವಾಹನ ಕಳವು ಮಾಡಿ ನಕಲಿ ಆರ್‌ಸಿ ನೀಡಿ ವಾಹನಗಳನ್ನು ಮಾರಾಟ ಮಾಡಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇನ್ನಷ್ಟು ವಾಹನಗಳು ವಶಪಡಿಸಿಕೊಳ್ಳಬೇಕಿದೆ ಎಂದು ಎಸ್ಪಿ ರಾವ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಪುತ್ತೂರು ಎಸಿಪಿ ಡಾ. ರೋಹಿಣಿ ಕಟೋಚ್ ಉಪಸ್ಥಿತರಿದ್ದರು.











Click it and Unblock the Notifications