ರಾಜಾ ಕಾಲುವೆಯಲ್ಲಿ ಬಾಲಕ ರಿಹಾನ್ ಶವ ಪತ್ತೆ
ಬೆಂಗಳೂರು,
ಫೆ. 26: ಬೊಮ್ಮನಹಳ್ಳಿಯ ಗುಲ್ಬರ್ಗಾ ಕಾಲೋನಿಯ ರಾಜಾ ಕಾಲುವೆಯಲ್ಲಿ ಬಿದ್ದಿರಬಹುದೆಂದು ಶಂಕಿಸಲಾಗಿದ್ದ 3 ವರ್ಷದ ಕಂದ ರಿಹಾನ್ ಶವ ಇಂದು ಪತ್ತೆಯಾಗಿದೆ. ಕೌಟುಂಬಿಕ ಕಲಹದ ಕಾರಣದ ಹಿನ್ನೆಲೆಯಲ್ಲಿ ಅಪಹರಣ ಮಾಡಿರಬಹುದು ಎಂದು ರಿಹಾನ್ ನ ತಾಯಿ ಆರೋಪಿಸಿದ್ದರಿಂದ ಈ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದಿತ್ತು. ರೂಪೇನ ಅಗ್ರಹಾರ ಬಳಿಯಲ್ಲಿ ಇಂದು ಬೆಳಗ್ಗೆ ಶವ ಪತ್ತೆಯಾಗಿರುವುದನ್ನು ಬಿಬಿಎಂಪಿ ಸದಸ್ಯ ಮಂಜುನಾಥ್ ರೆಡ್ಡಿ ಖಚಿತಪಡಿಸಿದ್ದಾರೆ. id="toptextpromo">ರಿಹಾನ್
ಸಾವಿನಿಂದ ದುಃಖಿತರಾಗಿರುವ ಅಪ್ಪ ಸಿದ್ದಿಕ್ ಮತ್ತು ಅಮ್ಮ ಜಬೀನಾ ಅವರಿಗೆ ಸಾಂತ್ವನ ಹೇಳಿದ ಬೊಮ್ಮನಹಳ್ಳಿ ವಾರ್ಡ್ ಬಿಬಿಎಂಪಿ ಸದಸ್ಯ ಮಂಜುನಾಥ್ ರೆಡ್ಡಿ, 1 ಲಕ್ಷ ರು ಪರಿಹಾರ ಧನವನ್ನು ಘೋಷಿಸಿದರು. ರಿಹಾನ್ ಕಾಣೆಯಾದ ದಿನದಿಂದ ಮಗುವಿನ ಅಜ್ಜಿ ನೂರ್ ಜಹಾನ್ ಕೂಡಾ ಕಾಣೆಯಾಗಿದ್ದಳು. ರಿಹಾನ್ ತಾಯಿ ಜೊತೆಗಿನ ವೈಮನಸ್ಯದಿಂದ ರಿಹಾನ್ ನನ್ನು ಆಕೆಯೇ ಅಪಹರಿಸಿರಬಹುದು ಎಂದು ಆರಂಭದಲ್ಲಿ ಶಂಕಿಸಲಾಗಿತ್ತು. id='are-slot-1' class='oiad oi-axt oiadv'> id='top-searched-articles'>2009ರಲ್ಲಿ
ಅಭಿಷೇಕ್ ಎಂಬ ಬಾಲಕ ಮಳೆಗಾಲದಲ್ಲಿ ಕೊಚ್ಚಿ ಹೋಗಿದ್ದ ನಂತರ, ಈ ರಿಹಾನ್ ಪ್ರಕರಣದಲ್ಲೂ ಬಿಬಿಎಂಪಿ ನಿರ್ಲಕ್ಷ್ಯತನವನ್ನು ಸಾರ್ವಜನಿಕರು ಖಂಡಿಸಿದ್ದರು. ಸೋಮವಾರ(ಫೆ.14) ಗುಂಡಿಗೆ ಬಿದ್ದರೆ ಮಂಗಳವಾರ ಘಟನಾ ಸ್ಥಳಕ್ಕೆ ಆಗಮಿಸಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಬ್ಬಂದಿಗಳು, ತಕ್ಷಣವೇ ಕಾಲುವೆಯಲ್ಲಿ ಶೋಧ ಕಾರ್ಯ ನಡೆಸದೆ, ರಿಹಾನ್ ತಾಯಿ ಅಪಹರಣದ ಶಂಕೆ ವ್ಯಕ್ತಪಡಿಸಿದ್ದನ್ನೇ ಬೆಂಬಲಿಸುತ್ತಾ ಸಮಯ ವ್ಯರ್ಥ ಮಾಡಿದರು ಎಂದು ಸಾರ್ವಜನಿಕರು ಆಕ್ರೋಶದಿಂದ ದೂರಿದ್ದಾರೆ.











Click it and Unblock the Notifications