ರೈಲ್ವೇ ಬಜೆಟ್ 2011 ಕರ್ನಾಟಕದ ನಿರೀಕ್ಷೆಗಳು

Minister Mamata Banerjee
ನವದೆಹಲಿ, ಫೆ. 25: 2011-12ನೇ ಸಾಲಿನ ರೈಲ್ವೇ ಬಜೆಟ್ ಯನ್ನು ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿ ಇಂದು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ. ಸತತ 8ನೆ ವರ್ಷವೂ ರೈಲ್ವೆ ಬಜೆಟ್‌ನಲ್ಲಿ ಪ್ರಯಾಣ ದರಗಳಲ್ಲಿ ಮಹತ್ತ್ವದ ಬದಲಾವಣೆ ನಿರೀಕ್ಷೆಯನ್ನು ಶ್ರೀಸಾಮಾನ್ಯ ಹೊಂದಿದ್ದಾನೆ.

ಆದರೆ, ಪ್ರಯಾಣ ದರದಲ್ಲಿ ವ್ಯತ್ಯಯ ಆಗುವುದು ಕಷ್ಟಸಾಧ್ಯ. ನಿಲುಗಡೆ ರಹಿತ 'ದುರಂತೊ" ರೈಲುಗಳು ಸೇರಿದಂತೆ ಸುಮಾರು 100ರಷ್ಟು ಹೊಸ ರೈಲುಗಳ ಘೋಷಣೆಯನ್ನು ನಿರೀಕ್ಷಿಸಲಾಗಿದೆ.

ದಿನವೊಂದರಲ್ಲಿ 50 ಸಾವಿರದಿಂದ ಒಂದು ಲಕ್ಷ ರೈಲು ಪ್ರಯಾಣಿಕರಿಗೆ ಊಟ ತಯಾರಿಸಲು ಮಹಾನಗರಗಳಲ್ಲಿ ಭಾರೀ ಅಡುಗೆ ಕೋಣೆಗಳ ಸ್ಥಾಪನೆಯನ್ನು ಪ್ರಕಟಿಸುವ ಸಂಭವವಿದೆ. ಹೊಸ ಕ್ಯಾಟರಿಂಗ್ ನೀತಿಯಂತೆ ಇದರ ಮೇಲುಸ್ತುವಾರಿಯನ್ನು ರೈಲ್ವೆಯೇ ನೋಡಿಕೊಳ್ಳುವ ಸಾಧ್ಯಗಳಿವೆ.

ಪಶ್ಚಿಮಬಂಗಾಳದ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿರಿಸಿ ರೈಲ್ವೇ ಸಚಿವೆ ಹಾಗೂ ತೃಣಮೂಲ ಕಾಂಗ್ರೆಸ್ ವರಿಷ್ಠೆ ಮಮತಾ ಬ್ಯಾನರ್ಜಿ ತಮ್ಮ ರಾಜ್ಯಕ್ಕೆ ಅನೇಕ ಸೌಲಭ್ಯಗಳನ್ನು ಘೋಷಿಸುವ ಸಾಧ್ಯತೆಯಿದೆ.

ಕರ್ನಾಟಕದ ಬೇಡಿಕೆಗಳು:

* ಶಿವಮೊಗ್ಗ -ಬೆಂಗಳೂರು ಇಂಟರ್ ಸಿಟಿ ಹೆಚ್ಚಳ
* ಮೈಸೂರು ಇಂಟರ್ ಸಿಟಿ ವಿಸ್ತರಣೆ
* ಶಿವಮೊಗ್ಗ ಹರಿಹರ ಕಾಮಗಾರಿ ಆರಂಭ
* ತಾಳಗುಪ್ಪ ಹೊನ್ನಾವರಕ್ಕೆ ಲಿಂಕ್ ರೈಲು
* ಶಿವಮೊಗ್ಗ ಬೀರೂರು ಡಬಲ್ ಟ್ರ್ಯಾಕ್
* ಚಿಕ್ಕಮಗಳೂರು ಜಿಲ್ಲಾ ಕೇಂದ್ರಕ್ಕೆ ರೈಲು ನಿಲ್ದಾಣ
* ಶೃಂಗೇರಿ ಹೊರನಾಡು ರೈಲ್ವೆ ಸಂಪರ್ಕ
* 1997 ಮಂಜೂರಾದ ಚಿಕ್ಕಮಗಳೂರು ಕಡೂರು ರೈಲು ಕಾಮಗಾರಿ ತ್ವರಿತಗೊಳಿಸಲು ಮನವಿ
* ಸರ್ವೇ ಕಾರ್ಯ ಮುಗಿಸಿರುವ ಚಿತ್ರದುರ್ಗ ವಿಭಾಗದ ರೈಲುಗಳ ಕಾಮಗಾರಿ ಪೂರೈಕೆಗೆ ಆಗ್ರಹ

ಕರಾವಳಿ ವಲಯ:
* ಮಂಗಳೂರಿನಲ್ಲಿ ಪ್ರಧಾನ ಕಚೇರಿ ಸೇರಿದಂತೆ ಪ್ರತ್ಯೇಕ ರೈಲ್ವೇ ವಿಭಾಗ ಸ್ಥಾಪನೆ
* ಕಾರವಾರ-ಬೆಂಗಳೂರು, ಮಂಗಳೂರು-ಹೌರಾ, ಹುಬ್ಬಳ್ಳಿ- ಲೋಂಡ-ಮಂಗಳೂರು ಮಾರ್ಗದಲ್ಲಿ ರೈಲಿಗೆ ಆಗ್ರಹ
* ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರಮುಖ ಪಟ್ಟಣಗಳ ಮೂಲಕ ಹಾದು ಹೋಗುವ ಕುಂದಾಪುರ-ಮಂಗಳೂರು ಮಾರ್ಗದಲ್ಲಿ ರ್‍ಯಾಪಿಡ್ ಟ್ರಾನ್ಸಿಟ್ ಸಿಸ್ಟಮ್ ರೈಲನ್ನು ಮಂಜೂರು ಮಾಡುವಂತೆ ಮನವಿ

ಉತ್ತರ ಕರ್ನಾಟಕ:
* ಹುಬ್ಬಳ್ಳಿ ಮೀರಜ್ ಹಾಗೂ ಹುಬ್ಬಳ್ಳಿ ಬೆಂಗಳೂರು ಡಬ್ಲಿಂಗ್
* ಧಾರವಾಡಕ್ಕೆ ವಿಸ್ತರಿಸಿರುವ ಇಂಟರ್ ಸಿಟಿ ವೇಳೆ ಬದಲಾವಣೆ
* ಹುಬ್ಬಳ್ಳಿ ವಿಭಾಗಕ್ಕೆ ಇನ್ನಷ್ಟು ಸೂಪರ್ ಫಾಸ್ಟ್ ರೈಲಿಗೆ ಆಗ್ರಹ
* ಗದಗ ವಾಡಿ, ಗದಗ- ಹಾವೇರಿ ರೈಲು ಸಂಚಾರ ಸಮಸ್ಯೆ
* ಪುಣೆ, ಮುಂಬೈಗೆ ನೇರ ರೈಲು
* ಹುಬ್ಬಳ್ಳಿಯಲ್ಲಿ ರೈಲ್ವೇ ವರ್ಕ್ ಶಾಪ್ ಆರಂಭಕ್ಕೆ ಆಗ್ರಹ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+