ಇಬ್ಬರು ಚಾಲಕರ ಪೈಪೋಟಿಗೆ ಅಮಾಯಕ ಬಲಿ

ಮೃತನನ್ನು ಅಕ್ಕಿ ವ್ಯಾಪಾರಿ ಟಿ.ವಿ. ಪ್ರವೀಣ್‌ಕುಮಾರ್ (32) ಎಂದು ಗುರುತಿಸಲಾಗಿದೆ. ಬಳ್ಳಾರಿಯ ಅಗಡಿ ಮರೆಪ್ಪ ಕಾಂಪೌಂಡ್ ನಿವಾಸಿ, ಅಕ್ಕಿ ವ್ಯಾಪಾರಿ ಜಿ.ಟಿ. ವೆಂಕಟರಮಣಪ್ಪ ಅವರ ಪುತ್ರ ಎಂದು ಪೊಲೀಸರು ತಿಳಿಸಿದ್ದಾರೆ. ಮೃತನಿಗೆ ಓರ್ವ ಪುತ್ರಿ, ಪತ್ನಿ ಇದ್ದಾರೆ. ಅಪಘಾತ ಪಾರ್ವತಿನಗರ ಮುಖ್ಯ ರಸ್ತೆಯಲ್ಲಿ ಟಿವಿಎಸ್ ಶೋರೂಂ ಸಮೀಪ ನಡೆದಿದೆ.
ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ಏಕಾಏಕಿ ವೇಗವಾಗಿ ಬಂದ ಮರಳು ತುಂಬಿದ್ದ ಎರಡು ಟ್ರ್ಯಾಕ್ಟರ್‌ಗಳು ಈತನಿಗೆ ಡಿಕ್ಕಿ ಹೊಡೆದು, ಸರತಿಯಲ್ಲಿ ಒಂದರ ಮೇಲೊಂದರಂತೆ ಪ್ರವೀಣ್ ಕುಮಾರ್ ಮೇಲೆ ಚಲಿಸಿದವು. ಬುರುಡೆ ಒಡೆದು ಪ್ರವೀಣ್ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಚಾಲಕ ನಾಗೇಂದ್ರನನ್ನು ಪೊಲೀಸರು ಬಂಧಿಸಿದ್ದಾರೆ. ಮೊತ್ತೋರ್ವ ಚಾಲಕ ಅಪಘಾತವಾಗುತ್ತಲೇ ಸ್ಥಳದಿಂದ ಪರಾರಿಯಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications