ದೇಶದ ಪ್ರಪ್ರಥಮ ಕೃಷಿ ಬಜೆಟ್ ಫೆ.24ರಂದು ಮಂಡನೆ

ರೈತಾಪಿ ವರ್ಗಕ್ಕೆ ಶೆ.1ರ ಬಡ್ಡಿದರದಲ್ಲಿ ಸಾಲ ಸೌಲಭ್ಯ, ಮಲೆನಾಡಿನ ಅಡಿಕೆ ಬೆಳೆಗಾರರಿಗಾಗಿ ನಿಧಿ ಸ್ಥಾಪನೆ, ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪನೆಗೆ ಚಿಂತನೆ, ಕೃಷಿ ಉಪಕರಣ ಖರೀದಿಗೆ ತೆರಿಗೆ ರದ್ದು, ಶಿಥಿಲೀಕರಣ ಗೃಹ ನಿರ್ಮಾಣ, ಹೊಸ ತಳಿಗಳ ಅಭಿವೃದ್ಧಿ, ಸೇರಿದಂತೆ ಹಲವಾರು ಆಶ್ವಾಸನೆಗಳ ಮಹಾಪೂರವನ್ನು ಹರಿಸಲು ಯಡಿಯೂರಪ್ಪ ಸಿದ್ಧತೆ ನಡೆಸಿದ್ದಾರೆ.
ಜನಪರ ಬಜೆಟ್ ಖಚಿತ: ಭೂ ಹಗರಣ, ಆಂತರಿಕ ಕಚ್ಚಾಟದಿಂದ ಬೇಸರಗೊಂಡಿರುವ ಯಡಿಯೂರಪ್ಪ ಅವರು ಜನಪರ ಬಜೆಟ್ ಆಗುವುದರಲ್ಲಿ ಅನುಮಾನವೇ ಇಲ್ಲ. ಶುಕ್ರವಾರ ಸಂತಾಪ ನಿಲುವಳಿ ಮಂಡನೆಯಾಗಲಿದ್ದು, ಸೋಮವಾರದಂದು ಬಜೆಟ್ ಮೇಲಿನ ಚರ್ಚೆ ಆರಂಭವಾಗಲಿದೆ.
ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ಆರನೇ ವೇತನ ಆಯೋಗದ ಶಿಫಾರಸ್ಸುಗಳ ಜಾರಿ, ವಿಧವಾ ವಿವಾಹ ವೇತನ, ವೃದ್ದಾಪ್ಯ ವೇತನ ಹೆಚ್ಚಳ ಸೇರಿದಂತೆ ಹಲವು ಘೋಷಣೆಗಳನ್ನು ಬಿಜೆಪಿ ಸರ್ಕಾರ ಮೊಳಗಿಸಲಿದೆ. ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬ ಧ್ಯೇಯ ವಾಕ್ಯಕ್ಕೆ ಬದ್ಧವಾಗಿ ಆಯವ್ಯಯ ಪತ್ರವನ್ನು ರಾಜ್ಯದ ಹಣಕಾಸು ಮಂತ್ರಿಗಳು ರಚಿಸಿದ್ದಾರೆ.
ಸತತವಾಗಿ ಆರನೇ ಬಾರಿಗೆ ಬಜೆಟ್ ಮಂಡನೆ ಮಾಡುವ ಕೀರ್ತಿಗೆ ಯಡಿಯೂರಪ್ಪ ಅವರು ನಾಳೆ ಪಾತ್ರರಾಗಲಿದ್ದಾರೆ. ಮುಖ್ಯಮಂತ್ರಿಯಾಗಿ ನಾಲ್ಕು ಹಾಗೂ ಜೆಡಿಎಸ್ ಬಿಜೆಪಿ ಸಮ್ಮಿಶ್ರ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಎರಡು ಬಜೆಟ್ ಮಂಡನೆ ಮಾಡಿದ್ದರು.












Click it and Unblock the Notifications