ಕರ್ನಾಟಕದಲ್ಲಿ ಏರ್ ಸೆಲ್ 3 ಜಿ ಸೇವೆ ಆರಂಭ

ಮಾರ್ಚ್ ತಿಂಗಳ ಮಧ್ಯದೊಳಗೆ ದೇಶದ ಇನ್ನಿತರ 12 ವಲಯಗಳಲ್ಲಿ 3ಜಿ ಸೌಲಭ್ಯವನ್ನು ಒದಗಿಸಲು ಏರ್ ಸೆಲ್ ಸಿದ್ಧತೆ ನಡೆಸಿದೆ. ಇದರಲ್ಲಿ ತಮಿಳುನಾಡು, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಒರಿಸ್ಸಾ, ಅಸ್ಸಾಂ, ಬಿಹಾರ್, ಜಾರ್ಖಂಡ್, ಪಂಜಾಬ್, ಚೆನ್ನೈ ಸೇರಿದೆ. ಆಂಧ್ರ ಪ್ರದೇಶ, ಕೇರಳ ಹಾಗೂ ಪಶ್ಚಿಮ ಬಂಗಾಲದಲ್ಲಿ ಈಗಾಗಲೇ ಏರ್ ಸೆಲ್ 3ಜಿ ಸೇವೆ ಆರಂಭವಾಗಿದ್ದು, ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ ಎಂದು ಗುರ್ದೀಪ್ ಸಿಂಗ್ ಹೇಳಿದರು.
3ಜಿ ಸೌಲಭ್ಯ ಪಡೆಯುವುದು ಹೇಗೆ?: ನೀವು ಈಗಾಗಲೇ ಏರ್ ಸೆಲ್ ಸಂಸ್ಥೆಗೆ ಚಂದಾದಾರರಾಗಿದ್ದರೆ SMS START 3G ಎಂದು ನಿಮ್ಮ ಮೊಬೈಲ್ ನಲ್ಲಿ ಕೀ ಮಾಡಿ 121 ಗೆ ಕಳಿಸಿ ಸೌಲಭ್ಯವನ್ನು ಪಡೆಯಬಹುದು. ಒಂದು ವಾರದವರೆಗು ಪ್ರಾಯೋಗಿಕವಾಗಿ 3ಜಿ ಸೌಲಭ್ಯ ಬಳಸಬಹುದಾಗಿದ್ದು, 250MB ಡಾಟಾ ಬಳಕೆ. 50 ನಿಮಿಷಗಳ ಕಾಲ ವಿಡಿಯೋ ಕಾಲಿಂಗ್ ಉಚಿತವಾಗಿ ಪಡೆಯಬಹುದು. ನಿಯಮಿತ ಪ್ಯಾಕೇಜ್ ಹಾಗೂ ಮಾಸಿಕ ಪ್ಯಾಕೇಜ್ ದರದಲ್ಲಿ 3ಜಿ ಸೌಲಭ್ಯವನ್ನು ತನ್ನ ಗ್ರಾಹಕರಿಗೆ ಏರ್ ಸೆಲ್ ನೀಡುತ್ತಿದೆ.
ನಿಯಮಿತ ಪ್ಯಾಕೇಜ್:
* 1 ದಿನದ ಪ್ಯಾಕ್ (ರು.7) ಡಾಟಾ ಬಳಕೆ ಮಿತಿ 8 MB/ದಿನ
* 3 ದಿನದ ಪ್ಯಾಕ್ ( ರು.22) ಡಾಟಾ ಬಳಕೆ ಮಿತಿ 25 MB/ದಿನ
ಮಾಸಿಕ ಬಳಕೆ ದರ ವಿವರ:
* ವಿದ್ಯಾರ್ಥಿ ಪ್ಯಾಕ್ (ರು.92) ಡಾಟಾ ಬಳಕೆ ಮಿತಿ 100 MB
* ಎಕ್ಸಿಕ್ಯೂಟೀವ್ ಪ್ಯಾಕ್ (ರು.202) ಡಾಟಾ ಬಳಕೆ ಮಿತಿ 250 MB
* ಪ್ರೊಫೆಷನಲ್ ಪ್ಯಾಕ್ (ರು. 602) ಡಾಟಾ ಬಳಕೆ ಮಿತಿ 1024MB(1ಜಿಬಿ)
* ಸೂಪರ್ ಪ್ರೊಫೆಷನಲ್ ಪ್ಯಾಕ್ (ರು.975) ಡಾಟಾ ಬಳಕೆ ಮಿತಿ2500MB(ಅಂದಾಜು 2.5ಜಿಬಿ)
ಟ್ಯಾರಿಫ್ ವಾರ್: ಸದ್ಯಕ್ಕೆ ಬೆಂಗಳೂರು ನಗರದಲ್ಲೇ ಗಿರಕಿ ಹೊಡೆಯುತ್ತಿರುವ ಏರ್ ಟೆಲ್ 3ಜಿ ಸೌಲಭ್ಯದಲ್ಲಿ ಪ್ರತಿ MB ಬಳಕೆಗೆ ರು.15 ವಿಧಿಸಲಾಗಿದೆ. ಅದೇ ಏರ್ ಸೆಲ್ ನಲ್ಲಿ ರು. 3/MB ದುಡ್ಡು ತೆರಬೇಕಾಗುತ್ತದೆ. ಅಲ್ಲದೆ, ಟಾಟಾ ಡೊಕೊಮೊ ಹಾಗೂ ಏರ್ ಟೆಲ್ ಸಂಸ್ಥೆಗಳ ದರ ಪಟ್ಟಿ ಯೋಜನೆಯಲ್ಲಿ ಹೆಚ್ಚಿನ ವೈವಿಧ್ಯತೆ ಇನ್ನೂ ಅಳವಡಿಸಿಕೊಂಡಿಲ್ಲ. ಕಾಲ ಕಳೆದಂತೆ ಮೊಬೈಲ್ ಫೋನ್ 3ಜಿ ಸೇವೆ ದರ ಸಮರ ಗ್ರಾಹಕರಿಗೆ ವರದಾನವಾಗುವ ಸಾಧ್ಯತೆಯೇ ಹೆಚ್ಚು.












Click it and Unblock the Notifications