ಕಾಮಾಂಧ ತಂದೆ ದಾಹಕ್ಕೆ ಮಲಮಗಳು ಬಲಿ

Man held for raping stepdaughter
ಬೆಂಗಳೂರು, ಫೆ. 10: ಅಪ್ರಾಪ್ತ ವಯಸ್ಸಿನ ತನ್ನ ಮಲಮಗಳ ಮೇಲೆ ಮದ್ಯದ ಅಮಲಿನಲ್ಲಿ ಅತ್ಯಾಚಾರವೆಸಗಿ ಆಕೆಯನ್ನು ಗರ್ಭಿಣಿಯನ್ನಾಗಿಸಿದ್ದ ಆರೋಪವನ್ನು ಶಿವಮೊಗ್ಗ ಲಕ್ಕವಳ್ಳಿ ಮೂಲದ ಕಾಮಾಂಧ ತಂದೆ ಹೊತ್ತಿದ್ದಾನೆ.
ಬೆಂಗಳೂರಿನಲ್ಲಿ ಎಲ್ ಅಂಡ್ ಟಿ ಸಂಸ್ಥೆ ಕಾರು ಚಾಲಕನಾಗಿರುವ ಆರ್ಮುಗಂನನ್ನು ಗುರುವಾರ ಮೈಕೋ ಲೇಔಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ದೇವರಚಿಕ್ಕನ ಹಳ್ಳಿ, ಬಿಳೇಕಳ್ಳಿಯ ನಿವಾಸಿ ಆರ್ಮುಗಂ (37) ಆರೋಪಿ ತನ್ನ ಒಂಭತ್ತನೆ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ 14 ವರ್ಷದ ಮಲಮಗಳ ಮೇಲೆ ಕಳೆದ ಮೂರು ತಿಂಗಳ ಹಿಂದೆ ಶಿವಮೊಗ್ಗ ಸಮೀಪದ ಲಕ್ಕವಳ್ಳಿಯ ದೊಡ್ಡಪ್ಪನ ಮನೆಯಲ್ಲಿ ಮಗಳನ್ನು ಕಟ್ಟಿಹಾಕಿ ಅತ್ಯಾಚಾರವೆಸಗಿದ್ದು, ಬಹಿರಂಗಪಡಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ

ಅತ್ಯಾಚಾರಕ್ಕೆ ಗುರಿಯಾಗಿದ್ದ ಬಾಲಕಿ ಈಗ ಗರ್ಭಿಣಿಯಾಗಿದ್ದು, ಆಕೆಯ ನಡವಳಿಕೆಯಿಂದ ಅನುಮಾನಗೊಂಡ ತಾಯಿ ಸುಧಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವಿಷಯ ಬೆಳಕಿಗೆ ಬಂದಿದೆ. ಕೂಡಲೇ ಆಕೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.

ಐಪಿಸಿ (ಭಾರತೀಯ ದಂಡ ಸಂಹಿತೆ) ಸೆಕ್ಷನ್ 376 ಹಾಗೂ 506ರ ಅನ್ವಯ ಮೊಕದ್ದಮೆ ದಾಖಲು ಮಾಡಿಕೊಂಡಿರುವ ಮೈಕೋ ಲೇಔಟ್ ಠಾಣಾ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಆರ್ಮುಗಂನನ್ನು ಮದುವೆಯಾಗುವ ಮೊದಲು ಅಂಥೋಣಿಪ್ ಪೆರೆರಾ ಎಂಬುವನನ್ನು ಸುಧಾ ವರಿಸಿದ್ದರು. ಆರ್ಮುಗಂ ಹಾಗೂ ಸುಧಾ ದಂಪತಿಗೆ 7 ವರ್ಷದ ಇನ್ನೊಂದು ಮಗು ಇದೆ. ಎಲ್ ಅಂಡ್ ಟಿ ಸೌಥ್ ಸಿಟಿಯಲ್ಲಿ ಕಾರುಚಾಲಕನಾಗಿ ಆತ ದುಡಿಯುತ್ತಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+