ಕಾಳಧನ ಖಾತೆದಾರರ ಹೆಸರು ಬಹಿರಂಗಕ್ಕೆ ಬದ್ಧ: ಕೇಂದ್ರ

ವಿದೇಶ ಬ್ಯಾಂಕ್‌ಗಳಲ್ಲಿ ಕಾಳ ಧನ ಜಮೆ ಮಾಡಿರುವ ಆರೋಪದ ಮೇಲೆ ಅನೇಕ ವ್ಯಕ್ತಿಗಳಿಗೆ ಷೊ ಕಾಸ್ ನೋಟಿಸ್ ನೀಡಲಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಅವರ ಹೆಸರನ್ನು ಸಾರ್ವಜನಿಕಗೊಳಿಸಲಾಗುವುದು. ಪ್ರಕರಣದ ಸಂಬಂಧ ಸಕರಿಸುವಂತೆ ಹಾಂಕಾಂಗ್, ಸಿಂಗಾಪುರ, ಕೊಲ್ಲಿ ರಾಷ್ಟ್ರಗಳು, ಅಮೆರಿಕ ಮತ್ತು ಬ್ರಿಟನ್ ಅಧಿಕಾರಿಗಳಿಗೆ ಈಗಾಗಲೇ ಪತ್ರ ಬರೆಯಲಾಗಿದೆ ಎಂದು ಸಾಲಿಸಿಟರ್ ಜನರಲ್ ಗೋಪಾಲ್ ಸುಬ್ರಮಣ್ಯಮ್ ನ್ಯಾಯಪೀಠಕ್ಕೆ ತಿಳಿಸಿದರು.
ವಿದೇಶ ಬ್ಯಾಂಕ್‌ಗಳಲ್ಲಿ ಖಾತೆ ಹೊಂದಿರುವವರ ಪೈಕಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಪುಣೆಯ ಉದ್ಯಮಿ ಹಸನ್ ಅಲಿ ಖಾನ್ ದೇಶ ಬಿಟ್ಟು ಓಡಿಹೋಗುವ ಸಾಧ್ಯತೆಯಿದ್ದು, ಅದನ್ನು ತಡೆಯುವ ಹೊಣೆ ಸರಕಾರದ ಮೇಲಿದೆ ಎಂದು ಇದೇ ಸಂದರ್ಭದಲ್ಲಿ ಪೀಠವು ಸರಕಾರಕ್ಕೆ ಎಚ್ಚರಿಸಿತು. ಹಸನ್ ಅಲಿಯನ್ನು ಪ್ರಕರಣದಲ್ಲಿ ಸಹ ಆರೋಪಿಯನ್ನಾಗಿ ದಾಖಲಿಸುವಂತೆಯೂ ಪೀಠ ಸರಕಾರಕ್ಕೆ ಸೂಚಿಸಿತು.
ವಿದೇಶ ಬ್ಯಾಂಕ್‌ಗಳಲ್ಲಿ ಜಮೆಯಾಗಿರುವ ಸುಮಾರು ಒಂದು ಟ್ರಿಲಿಯನ್ ಡಾಲರ್ ಹಣವನ್ನು ಸ್ವದೇಶಕ್ಕೆ ವಾಪಸ್ ತರಲು ಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಹಿರಿಯ ನ್ಯಾಯವಾದಿ ರಾಂ ಜೇಠ್ಮಲಾನಿ ಸುಪ್ರೀಂಕೋರ್ಟ್‌ಗೆ ಮೊರೆ ಹೋಗಿದ್ದಾರೆ. ವಿಚಾರಣೆ ಮಾರ್ಚ್ ೩ಕ್ಕೆ ಮುಂದೂಡಲಾಗಿದೆ.












Click it and Unblock the Notifications