ವಿದ್ಯಾರ್ಥಿಗಳ ಕಾಮ ದಾಹ, ವಿವಿ ಮುಖಕ್ಕೆ ಮಸಿ

JNU MMS scandal
ನವದೆಹಲಿ, ಫೆ.9: ವಿಶ್ವವಿದ್ಯಾಲಯ, ಕಾಲೇಜು, ಹಾಸ್ಟೆಲ್ ಗಳಲ್ಲಿ ಲೈಂಗಿಕ ಹಗರಣಗಳು ನಡೆಯುವುದು ಹೊಸ ಸಂಗತಿಯೇನಲ್ಲ. ಆದರೆ ದೇಶದ ಪ್ರತಿಷ್ಠಿತ ಜವಾಹರಲಾಲ ನೆಹರು ವಿಶ್ವವಿದ್ಯಾಲಯದ(JNU) ಹಾಸ್ಟೆಲ್ ಆವರಣದಲ್ಲೇ ವಿದ್ಯಾರ್ಥಿಗಳಿಬ್ಬರು ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ ವಿಡಿಯೋ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇದರಿಂದ ವಿಶ್ವವಿದ್ಯಾಲಯ ಭಾರಿ ಮುಜುಗರ ಅನುಭವಿಸುತ್ತಿದೆ.

ಜವಾಹರಲಾಲ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿರುವ ಹಾಸ್ಟೆಲ್‌ನಲ್ಲಿ ಒಬ್ಬ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿ ನಡೆಸಿದ್ದ ಅನೈತಿಕ ಚಟುವಟಿಕೆ ವಿಡಿಯೋ ಭಾರೀ ವಿವಾದ ಸೃಷ್ಟಿಸುತ್ತಿದೆ. ಆ ಮೂಲಕ ಉನ್ನತ ಗೌರವ ಹೊಂದಿರುವ ವಿವಿ ಬಗೆಗಿನ ವಿಶ್ವಾಸಕ್ಕೆ ಪೆಟ್ಟು ಬಿದ್ದಂತಾಗಿದೆ.

ಯಾವುದು ಈ ವೀಡಿಯೋ : ತಪ್ತಿ ಹಾಸ್ಟೆಲ್ ಸೆಕ್ಸ್ ವಿಡಿಯೋ ಚಿತ್ರೀಕರಣಗೊಂಡದ್ದು ಆರು ತಿಂಗಳ ಹಿಂದೆ. ಅದರ ನಂತರ ಇದು ಸಾವಿರಾರು ವಿದ್ಯಾರ್ಥಿಗಳ ಮೊಬೈಲುಗಳನ್ನು ಸೇರಿವೆ. ಇಂಟರ್ನೆಟ್ಟಿನಲ್ಲಿ ಹರಿದಾಡಿವೆ. ಸಿಡಿ ರೂಪದಲ್ಲಿ ಮಾರಾಟವಾಗಿವೆ. ವಿಶ್ವವಿದ್ಯಾಲಯದ ಅಧಿಕಾರಿಗಳ ಗಮನಕ್ಕೆ ತೀರಾ ತಡವಾಗಿ ತಿಳಿದುಬಂದಿದೆ. ಸೋಮವಾರ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಂಕಿತ ವಿದ್ಯಾರ್ಥಿಗಳ ವಿಚಾರಣೆ ನಡೆಸಿದ್ದಾರೆ.

ಏನಿದೆ ಅದರಲ್ಲಿ?: ಈ ವಿವಾದಿತ ವಿಡಿಯೋದಲ್ಲಿರುವ ಹುಡುಗ ಮತ್ತು ಹುಡುಗಿ ಬಿಹಾರ ಮೂಲದವರು. ಇಬ್ಬರೂ ಪರಸ್ಪರ ಇಚ್ಛೆಯಿಂದ ಲೈಂಗಿಕ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದಾರೆ. ಅದೇ ಕಾಲೇಜಿನ ಎಂಸಿಎ ವಿದ್ಯಾರ್ಥಿಯೊಬ್ಬ ಒದಗಿಸಿದ್ದ ಕ್ಯಾಮರಾವನ್ನು ಬಳಸಿ ಅಕ್ರಮ ಚಟುವಟಿಕೆಯನ್ನು ಚಿತ್ರೀಕರಿಸಲಾಗಿತ್ತು.ಇದಕ್ಕೆಲ್ಲಾ ಸಾಕ್ಷಿಯಾದದ್ದು ಮಾತ್ರ ಕಾಲೇಜು ಆವರಣದ ಇದ್ದ ತಪ್ತಿ ಎಂಬ ಹಾಸ್ಟೆಲ್.

ಆದರೆ, ಈ ವಿಡಿಯೋ ಬಹಿರಂಗವಾದ ಮೇಲೆ ವಿಡಿಯೋದಲ್ಲಿದ್ದ ಹುಡುಗಿಯ ಜತೆ ಈ ರೀತಿಯಾಗಿ ವರ್ತನೆ ಮಾಡಿರುವ ಎಂಸಿಎ ವಿದ್ಯಾರ್ಥಿಯನ್ನು ಅದೇ ಕಾಲೇಜಿನ ಕೆಲವು ಹುಡುಗರು ಸೇರಿಕೊಂಡು ಥಳಿಸಿದ್ದರು. ಕಾಲೇಜಿನ ಗೌರವಕ್ಕೆ ನಿನ್ನಿಂದ ಧಕ್ಕೆಯಾಗಿದೆ ಎಂದು ಇತರ ವಿದ್ಯಾರ್ಥಿಗಳು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

ಕೊನೆಗೂ ಎಚ್ಚೆತ್ತುಕೊಂಡ ವಿವಿ: ಸೋಮವಾರದಿಂದ ಪ್ರಕರಣವನ್ನು ತನಿಖೆ ನಡೆಸಲಾಗುತ್ತಿದೆ. ಯುನಿವರ್ಸಿಟಿಯ ಸೆಕ್ಯುರಿಟಿ ವಿಭಾಗವು ನಮಗೆ ಸಿಡಿಯನ್ನು ಕೊಟ್ಟಿದೆ. ಸಿಡಿಯನ್ನು ಕಾಲೇಜು ಕ್ಯಾಂಪಸ್ಸಿನ ಚಿತ್ರೀಕರಿಸಲಾಗಿತ್ತು ಮತ್ತು ಹಂಚಲಾಗಿತ್ತು ಎಂದು ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಹಾಸ್ಟೆಲ್ ವಾರ್ಡನ್ ಅಥವಾ ಇತರೆ ಸಿಬ್ಬಂದಿ ಸಹಾಯವಿರುವ ಬಗ್ಗೆ ತನಿಖೆ ನಡೆಸಿ ನಂತರ ಪೊಲೀಸರ ಮೊರೆ ಹೋಗುವುದಾಗಿ ವಿವಿ ಅಧಿಕಾರಿಗಳು ಹೇಳಿದ್ದಾರೆ. ದೂರು ದಾಖಲಾದ ನಂತರ ತನಿಖೆ ಮುಂದುವರೆಸುವಾಗಿ ಪೊಲೀಸ್ ಆಯುಕ್ತ ಎಚ್ ಜಿಎಸ್ ಧಲ್ವಾಲ್ ತಿಳಿಸಿದ್ದಾರೆ. ಒಟ್ಟಿನಲ್ಲಿ ವಿದ್ಯಾರ್ಥಿಗಳ ಕಾಮಕಾಂಡ, ವಿವಿಯ ನಿರ್ಲಕ್ಷತೆಯಿಂದ ಪ್ರತಿಷ್ಠಿತ ವಿದ್ಯಾಸಂಸ್ಥೆ ತಲೆ ತಗ್ಗಿಸಿ ನಿಲ್ಲುವಂತಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+