ಶಿವಮೊಗ್ಗದಲ್ಲಿ ಶಿಕ್ಷಕನಿಂದ ಲೈಂಗಿಕ ಕಿರುಕುಳ

Sexual harassment to students by physical trainer
ಶಿವಮೊಗ್ಗ, ಫೆ. 7 : ದೈಹಿಕ ಶಿಕ್ಷಕನೋರ್ವ ಶಾಲಾ ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಘಟನೆ ಇಲ್ಲಿನ ಶರಾವತಿ ನಗರದ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

ಶಿಕ್ಷಕನ ಕಾಮದಾಟದ ವಿಷಯ ತಿಳಿದು ರೊಚ್ಚಿಗೆದ್ದ ಪೋಷಕ ಸಮೂಹ, ಇಂದು ಬೆಳಿಗ್ಗೆ ಕಾಮುಕ ದೈಹಿಕ ಶಿಕ್ಷಕನಿಗೆ ತಕ್ಕ ಪಾಠ ಕಲಿಸಲು ಶಾಲೆಗೆ ಆಗಮಿಸಿದ್ದರು. ಆದರೆ ಪೋಷಕರ ಆಗಮನದ ವಿಷಯ ತಿಳಿದ ಶಾಲೆಯ ದೈಹಿಕ ಶಿಕ್ಷಕ ಶಾಲೆಗೆ ಆಗಮಿಸದೆ, ಪರಾರಿಯಾಗಿದ್ದ.

ಆಕ್ರೋಶ ಭರಿತ ಪೋಷಕರು ಶಾಲೆಯ ಮುಖ್ಯಸ್ಥರನ್ನು ತೀವ್ರ ತರಾಟೆಗೆ ತೆಗೆದುಕೊಂಡು, ಹರಿಹಾಯ್ದರು. ಸ್ಥಳದಲ್ಲಿ ಕೆಲ ಸಮಯ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸರು, ಆಕ್ರೋಶಭರಿತ ಪೋಷಕರನ್ನು ಸಮಾಧಾನಪಡಿಸಿದರು.

ಲೈಂಗಿಕ ಕಿರುಕುಳ : 1ರಿಂದ 7ನೇ ತರಗತಿಯವರಿಗೆ ಮಕ್ಕಳು ಈ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿ ಕೆಲಸ ಮಾಡುತ್ತಿದ್ದ ದೈಹಿಕ ಶಿಕ್ಷಕ ವಿದ್ಯಾರ್ಥಿಗಳನ್ನು ಶಾಲೆಯಲ್ಲಿಯೇ ತನ್ನ ಕಾಮತೃಷೆಗೆ ಬಳಸಿಕೊಳ್ಳುತ್ತಿದ್ದ ಎನ್ನಲಾಗಿದೆ.

ಜೊತೆಗೆ ರಜಾ ದಿನಗಳಂದು ವಿದ್ಯಾರ್ಥಿಗಳನ್ನು ಪುಸಲಾಯಿಸಿ, ತನ್ನ ಮನೆಗೆ ಕರೆಯಿಸಿಕೊಂಡು ಲೈಂಗಿಕವಾಗಿ ಬಳಸಿಕೊಳ್ಳುತ್ತಿದ್ದ. ಈ ವಿಷಯ ಯಾರಿಗೂ ಹೇಳದಂತೆ ಮಕ್ಕಳಿಗೆ ಬೆದರಿಕೆ ಹಾಕುತ್ತಿದ್ದ ಎಂದು ಪೋಷಕರು ದೂರಿದ್ದಾರೆ.

ಕಳೆದೆರೆಡು ದಿನಗಳ ಹಿಂದೆ ಕೆಲ ವಿದ್ಯಾರ್ಥಿಗಳ ದೈಹಿಕ ಶಿಕ್ಷಕನ ಕಾಮದಾಟದ ಬಗ್ಗೆ ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದರು. ಶಿಕ್ಷಕನಿಗೆ ತಕ್ಕ ಪಾಠ ಕಲಿಸಲು ಇಂದು ಪೋಷಕರ ಸಮೂಹ ಶಾಲೆಗೆ ಆಗಮಿಸಿತ್ತು. ಮೊದಲೇ ಈ ವಿಷಯ ತಿಳಿದಿದ್ದ ಶಿಕ್ಷಕ ಶಾಲೆಗೆ ಆಗಮಿಸದೆ ಪರಾರಿಯಾಗಿದ್ದಾನೆ. ಈ ಸಂಬಂಧ ಈ ಶಿಕ್ಷಕನ ವಿರುದ್ದ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+