ಯು.ಪಿ: ಅತ್ಯಾಚಾರ ಪ್ರತಿರೋಧಿಸಿದ್ದಕ್ಕೆ ಅಂಗ ಛೇದ

"ದುಷ್ಕರ್ಮಿಗಳು ನನ್ನ ಮೇಲೆ ದೈಹಿಕ ಹಲ್ಲೆಗೆ ಮುಂದಾದರು. ಅದನ್ನು ಪ್ರತಿರೋಧಿಸಿ, ಓಡಿಹೋಗಲು ಪ್ರಯತ್ನಿಸಿದೆ. ಆದರೆ ಆಗಲಿಲ್ಲ. ಆಗ ಅವರು ನನ್ನ ಮೇಲೆ ಮುಗಿಬಿದ್ದರು. ಕುಡುಗೋಲಿನಿಂದ ಅಂಗಾಂಗಗಳನ್ನು ಕತ್ತರಿಸಿಹಾಕಿದರು' ಎಂದು ಬಾಧಿತಳು ಹೇಳಿದ್ದಾಳೆ.
ಚಿಕಿತ್ಸೆಗಾಗಿ ಬಾಲಕಿಯನ್ನು ಕಾನ್ಪುರ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಂತಾಜನಕ ಸ್ಥಿತಿಯಲ್ಲಿದ್ದಾಳೆ. ಆರೋಪಿಗಳ ಪೈಕಿ ಒಬ್ಬನನ್ನು ಬಂಧಿಸಲಾಗಿದ್ದು, ಇನ್ನೂ ಮೂವರು ಕಣ್ತಪ್ಪಿಸಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಇತ್ತೀಚೆಗಷ್ಟೇ ಆಡಳಿತಾರೂಢ ಪಕ್ಷದ ಶಾಸಕನೊಬ್ಬ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಚುನಾವಣೆಯ ಹೊಸ್ತಿಲಲ್ಲಿರುವ ಮುಖ್ಯಮಂತ್ರಿ ಮಾಯಾವತಿಗೆ ಮುಜುಗರವನ್ನುಂಟು ಮಾಡಿದ್ದ. ಇದೀಗ ಮತ್ತೊಂದು ಅತ್ಯಾಚಾರ ಪ್ರಕರಣ ನಡೆದಿರುವುದು ಮಾಯಾವತಿಗೆ ನುಂಗಲಾರದ ತುತ್ತಾಗಿದೆ.











Click it and Unblock the Notifications