2ಜಿ ತರಂಗಗುಚ್ಛ ಹಗರಣದ ರಾಜಾ ಬಂಧನ

ಡಿಎಂಕೆ ಪಕ್ಷದ ಎ ರಾಜಾ ಅವರ ಸಹಾಯಕರಾಗಿದ್ದ ಮಾಜಿ ದೂರಸಂಪರ್ಕ ಕಾರ್ಯದರ್ಶಿ ಸಿದ್ದಾರ್ಥ ಬೆಹೂರಿಯಾ ಮತ್ತು ಆಪ್ತ ಕಾರ್ಯದರ್ಶಿ ಆರ್ ಕೆ ಚಂದೋಲಿಯಾ ಅವರನ್ನು ಕೂಡ ಸಿಬಿಐ ಬಂಧಿಸಿದೆ.
2ಜಿ ತರಂಗಗುಚ್ಛ ಹಂಚಿಕೆಯಲ್ಲಿ ನೀತಿ ಉಲ್ಲಂಘನೆ, ಕೆಲ ಅನರ್ಹ ಕಂಪನಿಗಳಿಗೆ ಲಾಭವಾಗುವಂತೆ ಮಾಡಿದ ಮತ್ತು ದುರ್ವರ್ತನೆ ಮಾಡಿದ ಆರೋಪಗಳನ್ನು ಹೊರಿಸಲಾಗಿದೆ. ರಾಜಾ ಅವರ ಸಹೋದರ ಎ ಕಲಿಯ ಪೆರುಮಾಳ್ ಮತ್ತು ಆತನ ಆಪ್ತ ಸಹಾಯಕನನ್ನು ಕೂಡ 22 ಸಾವಿರ ಕೋಟಿ ರು. ಹಗರಣಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಬಿಐ ವಿಚಾರಣೆ ನಡೆಸಿತು.
2008ರಲ್ಲಿಯೇ ಈ ಹಗರಣ ಬೆಳಕಿಗೆ ಬಂದಿದ್ದರೂ ಕಳೆದ ವರ್ಷದ ನವೆಂಬರ್ 14ರಂದು ಎ ರಾಜಾ ತಮ್ಮ ಸ್ಥಾನಕ್ಕೆ ಬಲವಂತವಾಗಿ ರಾಜೀನಾಮೆ ನೀಡಿದ್ದರು. ಕಳೆದ ಕೆಲ ವಾರಗಳಲ್ಲಿ ಅವರ ದೆಹಲಿ ಮತ್ತು ತಮಿಳುನಾಡಿನಲ್ಲಿನ ಕಚೇರಿ ಮತ್ತು ನಿವಾಸದ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಸೇರಿದಂತೆ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹಗರಣದಿಂದಾಗಿ ದೇಶದ ಬೊಕ್ಕಸಕ್ಕೆ 1.76 ಲಕ್ಷ ಕೋಟಿಯಷ್ಟು ನಷ್ಟವಾಗಿದೆ. ನ್ಯಾ. ಶಿವರಾಜ್ ಪಾಟೀಲ್ ಅವರ ನೇತೃತ್ವದ ಆಯೋಗ ಕೂಡ ರಾಜಾ ಅವರನ್ನು ದೋಷಿಯನ್ನಾಗಿ ಮಾಡಿದೆ.












Click it and Unblock the Notifications