ಹಂಪಿ, ಸಂಶೋಧಕರ ಪಾಲಿನ ಬರಿದಾಗದ ಭಂಡಾರ

Dr HS Gopal Rao
ಹಂಪಿ, ಜ. 27: ಇತಿಹಾಸಕಾರ ದೊರೆತ ಆಕರಗಳನ್ನು ಸಾಕ್ಷಿಯಾಗಿಟ್ಟುಕೊಂಡು ನಿಸ್ಪಕ್ಷಪಾತ ನಿರ್ಧಾರ ಕೈಗೊಳ್ಳಬೇಕು ಎಂದು ಹಿರಿಯ ಸಂಶೋಧಕ ಡಾ| ಎಚ್.ಎಸ್. ಗೋಪಾಲರಾವ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ ಉಪನಿರ್ದೇಶಕರ ಕಮಲಾಪುರದ ಕಚೇರಿಯ ಆವರಣದಲ್ಲಿ ಗುರುವಾರ ನಡೆದ ವಿಜಯ ಅಧ್ಯಯನ'ದ 16ನೇ ವಾರ್ಷಿಕ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿಜಯನಗರದ ಬಗ್ಗೆ ಇಲ್ಲಿವರೆಗೆ ದೊರೆತ ಹೆಚ್ಚಿನ ಆಕರಗಳು ಆಳುವ ವರ್ಗದ ಬಗ್ಗೆಯೇ ಹೆಚ್ಚು ವಿಷಯಗಳನ್ನು ತಿಳಿಸಿವೆ. ಇನ್ನು ಮುಂದೆ ಅಕ್ಷರ ರೂಪದ ಆಕರಗಳ ಜೊತೆಗೆ ಮೌಖಿಕ ಆಕರಗಳನ್ನು ಮತ್ತು ರೂಢಿ ಮೂಲದ ಆಕರಗಳನ್ನು ಬಳಸಿಕೊಂಡು ಜನ ಇತಿಹಾಸವನ್ನು ತಿಳಿಯಬೇಕಾಗಿದೆ ಎಂದರು.

ವಿಜಯನಗರ ಸಾಮ್ರಾಜ್ಯ ಅಸ್ತಿತ್ವಕ್ಕೆ ಬರುವುದಕ್ಕೆ ಮೊದಲಿನ ಮತ್ತು ನಂತರದ ಸಣ್ಣ ಪುಟ್ಟ ಅರಸು ಮನೆತನಗಳ ಸಮಗ್ರ ಅಧ್ಯಯನ ನಡೆಯಬೇಕಿದೆ ಎಂದ ಅವರು, ಹಂಪಿಯ ಶೋಧ ಕಾರ್ಯ ನಿಂತ ನೀರಾಗಲೇ ಇಲ್ಲ. ಇದಕ್ಕೆ ಸಾಕ್ಷಿ ಎಂಬಂತೆ ಈಗಲೂ ಹಂಪಿಯಲ್ಲಿ ಸರ್ವೇಕ್ಷಣೆ, ಉತ್ಖನನ, ಶೋಧ-ಪರಿಶೋಧ ಕಾರ್ಯ ನಡೆಯುತ್ತಲೇ ಇದೆ ಎಂದರು.

ಹಂಪಿ ಉತ್ಸವ 2011 ಚಿತ್ರಪಟ

ಇದು ಸಂಶೋಧಕರ ಪಾಲಿಗೆ ಬರಿದಾಗದ ಭಂಡಾರ. ವಿಜಯನಗರದ ನೆಲದಲ್ಲಿ ನಿಧಿ ಶೋಧಕರಿಗೆ ಕೆಲಸವಿಲ್ಲ. ಇಲ್ಲಿ ಕೆಲಸ ಇರುವುದು ಸಂಶೋಧಕರಿಗೆ ಮಾತ್ರ. ನಿಧಿ ಶೋಧಕರು ಸ್ಮಾರಕಗಳನ್ನು ಹಾಳು ಮಾಡಿದರೆ, ಸಂಶೋಧಕರು ಸ್ಮಾರಕಗಳಿಗೆ ಜೀವ ತುಂಬುತ್ತಾರೆ ಎಂದು ಸಂಶೋಧನಾ ಮಹತ್ವವನ್ನು ಬಿಚ್ಚಿಟ್ಟರು.

ಸಣ್ಣ ನೀರಾವರಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜವಳಿ ಇಲಾಖೆಯ ಸಚಿವ ಗೋವಿಂದ ಎಂ. ಕಾರಜೋಳ ಅವರು ಕಾರ್ಯಕ್ರಮ ಉದ್ಘಾಟಿಸಿ, ಸಂಶೋಧಕರಿಗೆ ಹಂಪಿ ಅಕ್ಷಯ ಪಾತ್ರೆ ಇದ್ದಂತೆ. ಸುವರ್ಣ ಯುಗವೆಂದೇ ಖ್ಯಾತಿ ಪಡೆದಿದ್ದ ವಿಜಯನಗರ ಸಾಮ್ರಾಜ್ಯ ಸ್ಪೂರ್ತಿಯ ಸೆಲೆ ಆಗಿದ್ದು, ಇಲ್ಲಿಯ ಇತಿಹಾಶ ಬಗೆದಷ್ಟು ಹೊಸ ಹೊಸ ಮಾಹಿತಿ ನೀಡುತ್ತದೆ. ಪ್ರತಿ ಅಧ್ಯಯನದಲ್ಲೂ ಹೊಸತನ ಮೂಡುತ್ತದೆ ಎಂದರು.

ಶ್ರೀಮಂತ ಸಂಸ್ಕೃತಿಯ ಇತಿಹಾಸಕ್ಕೆ ಹೊಸ ಹೊಳಪು ನೀಡುವ ಕಾರ್ಯ ಆಗಬೇಕು. ಗತವೈಭವದ ವಿಜಯನಗರ ಇತಿಹಾಸದ ಸಂರಕ್ಷಣೆಗೆ ಸರ್ಕಾರ ಬದ್ಧವಾಗಿದ್ದು, ಸರ್ವೇಕ್ಷಣೆ, ಶೋಧನೆ ಹಾಗೂ ಉತ್ಕನನ ಕುರಿತು 15 ಗ್ರಂಥಗಳನ್ನು ಪ್ರಾಚ್ಯವಸ್ತು ಇಲಾಖೆ ಪ್ರಕಟಿಸಿದೆ ಎಂದು ಹೇಳಿದರು. ಸಚಿವರು ಇದೇ ಸಂದರ್ಭದಲ್ಲಿ ಪ್ರಾಚೀನ ನಾಣ್ಯಗಳ ಪ್ರದರ್ಶನವನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿ ಶಾಸಕ ಆನಂದ ಸಿಂಗ್ ಅವರು, ಅನೇಕ ಸಂಶೋಧನೆಗಳಿಂದ ಹಂಪಿಯ ಗತವೈಭವದ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಈ ಬಗ್ಗೆ ನಿರಂತರವಾದ ಸಂಶೋಧನೆಗಳು ವಿಜಯ ನಗರದ ಇತಿಹಾಸದ ಮೇಲೆ ಬೆಳಕು ಚೆಲ್ಲಲಿದ್ದು, ಅದು ನಿರಂತರವಾಗಿ ನಡೆಯಬೇಕು ಎಂದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಮನು ಬಳಿಗಾರ್, 'ವಿಜಯನಗರ ಅಧ್ಯಯನ ಸಂಪುಟ - 15' ಗ್ರಂಥವನ್ನು ಬಿಡುಗಡೆ ಮಾಡಿದರು. ಮೈಸೂರು ಪ್ರಾಚ್ಯವಸ್ತು ಸಂಗ್ರಹಾಲಯಗಳ ನಿರ್ದೇಶನಾಲಯ ನಿರ್ದೇಶಕ ಡಾ: ಆರ್. ಗೋಪಾಲ್ ಸ್ವಾಗತಿಸಿ ಪ್ರಾಸ್ತಾವಿಕ ಭಾಷಣ ಮಾಡಿದರು. ಡಾ: ಲ.ನಾ. ಸ್ವಾಮಿ ನಿರೂಪಿಸಿದರು. ಉಪನಿರ್ದೇಶಕಿ ಸುಲೋಚನಾ ಪೋತ್ನಿಸ್ ವಂದಿಸಿದರು. [ಹಂಪಿ ಉತ್ಸವ]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+