ರಾಜ್ಯಪಾಲರೆ ನೀವು ಪಕ್ಷಪಾತಿ : ಸಿಎಂ ಆಕ್ರೋಶ

ಗುರುವಾರ ಬೆಳಗ್ಗೆ ರಾಜ್ಯಪಾಲರು ನೀಡಿದ್ದ ಹೇಳಿಕೆ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ರಾತ್ರಿ ರಾಜ್ಯಪಾಲರಿಗೆ ಪ್ರತಿಭಟನಾ ಪತ್ರ ಬರೆಯುವ ಮೂಲಕ ರಾಜ್ಯಪಾಲರಿಗೆ ತಿರುಗೇಟು ನೀಡಿದ್ದಾರೆ. ತಮ್ಮ ಹಾಗೂ ಗೃಹ ಸಚಿವ ಆರ್. ಅಶೋಕ್ ಅವರ ವಿರುದ್ಧ ಯಾವುದೇ ವಿಚಾರಣೆಯನ್ನು ನಡೆಸದೇ ಪೂರ್ವಾಗ್ರಹ ಪೀಡಿತರಾಗಿ ಹೇಳಿಕೆಗಳನ್ನು ನೀಡುತ್ತಿರುವುದು ಇಡೀ ಸಚಿವ ಸಂಪುಟ ಹಾಗೂ ರಾಜ್ಯದ ಮತದಾರರಿಗೆ ಮಾಡಿದ ಅಪಮಾನ ಎಂದು ಕಿಡಿಕಾರಿದ್ದಾರೆ.
ಆರೋಪಗಳನ್ನು ಪ್ರಾಸಿಕ್ಯೂಷನ್‌ಗೆ ವಹಿಸುವ ಕುರಿತಂತೆ ತಾವು ಈಗಾಗಲೇ ಜ.19ರಂದು ಸಂಪುಟದ ನಿರ್ಣಯದ ಜತೆಗೆ ವಿವರವಾದ ಪತ್ರ ಬರೆದಿದ್ದೇನೆ. ಆದರೂ ತಾವು ಪದೇ ಪದೇ ಹೇಳಿಕೆಗಳನ್ನು ನೀಡುತ್ತಿರುವುದು ಸರಿಯಲ್ಲ ಎಂದಿದ್ದಾರೆ.
ಸಂಪುಟದಲ್ಲಿ ಕೈಗೊಂಡ ನಿರ್ಣಯ ಕುರಿತಂತೆ ಕಳ್ಳನೊಬ್ಬ ಪೊಲೀಸರಿಗೆ ದೂರು ನೀಡಿದಂತೆ ಎಂಬ ಮಾತು ಹೇಳಿರುವುದು ಸಂಪುಟಕ್ಕೆ ಮತ್ತು ಮುಖ್ಯಮಂತ್ರಿಗೆ ಮಾಡಿದ ಅಪಮಾನವಾಗಿದೆ. ರಾಜ್ಯಪಾಲರು ಯಾವುದೇ ನಿರ್ಣಯವನ್ನು ರಹಸ್ಯವಾಗಿ ಕೈಗೊಳ್ಳಬೇಕು, ಆದರೆ ಆ ರೀತಿಯಲ್ಲಿ ವರ್ತಿಸುತ್ತಿಲ್ಲ. ಇದು ನಿಮ್ಮ ಹಿಂದಿನ ರಾಜಕೀಯ ದಾರಿಯಲ್ಲಿಯೇ ನಡೆಯುತ್ತ ಸರ್ಕಾರಕ್ಕೆ ಮುಜುಗರ ತರುತ್ತಿದ್ದೀರಿ ಎಂದು ಟೀಕಿಸಿದ್ದಾರೆ.












Click it and Unblock the Notifications