ಅಲಿ ಕೊಲೆಗೆ ಬಳ್ಳಾರಿ ಜೈಲಿನಿಂದಲೇ ಸ್ಕೆಚ್!
ಬೆಂಗಳೂರು,
ಜ. 21 : ಬಿಬಿಎಂಪಿ ಬನಶಂಕರಿ ವಾರ್ಡ್ ಸದಸ್ಯ ದಿವಾನ್ ಅಲಿ ಕೊಲೆಗೈಯಲು ಬಳ್ಳಾರಿ ಜೈಲಿನಲ್ಲೇ ಕುಳಿತ ಸ್ಕೆಚ್ ರೂಪಿಸಲಾಗಿತ್ತು. ಬಳ್ಳಾರಿ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಅಸ್ಗರ್ ಎಂಬಾತನೇ ಇದಕ್ಕೆಲ್ಲಾ ಪ್ರೇರಣೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಶಂಕರಿ ಬಿದರಿ ಸ್ಪಷ್ಟಪಡಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಂಧಿತ ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಈ ಸಂಗತಿ ಬಹಿರಂಗಗೊಂಡಿದೆ ಎಂದರು. ಅಪ್ಸರ್ ಅಲಿಯಾಸ್ ಅಪ್ಪಿ ಮಾಲೀಕ ಅಸ್ಗರ್ ಜೈಲಿಗೆ ಹೋಗಲು ಹಾಗೂ ಜೀವಾವಧಿ ಶಿಕ್ಷೆಗೆ ಗುರಿಯಾಗಲು ದಿವಾನ್ ಅಲಿ ಕಾರಣ. ಹೀಗಾಗಿ ಅಲಿ ವಿರುದ್ಧ ಅಸ್ಗರ್ ಕತ್ತೆ ಮಸೆಯುತ್ತಿದ್ದ. ಈ ಎಲ್ಲ ಕಾರಣಗಳಿಂದ ಜೈಲಿನಲ್ಲೇ ಕುಳಿತುಕೊಂಡು ಅಲಿ ಹತ್ಯೆಗೆ ಸಂಚು ರೂಪಿಸಿದ. ಅಲಿ ಕೊಲೆಯಲ್ಲಿ ಒಟ್ಟು 12 ಜನ ಭಾಗಿಯಾಗಿದ್ದಾರೆಂದು ಬಿದರಿ ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅಲಿ
ಹತ್ಯೆಗೆ ಸಂಚು ರೂಪಿಸಿದ ಅಸ್ಗರ್ ಉಳಿದ ಪುಡಿ ರೌಡಿಗಳಿಗೆ ಮಾರಾಕಾಸ್ತ್ರಗಳನ್ನು ಬಳ್ಳಾರಿಯಿಂದಲೇ ರವಾನಿಸಿ ಸುಪಾರಿ ಕೊಟ್ಟಿದ್ದಾನೆ. ಬಂಧಿತ ಆರೋಪಿಗಳಿಂದ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಲಿ ಬಿಬಿಎಂಪಿ ಸದಸ್ಯನಾದ ನಂತರ ರೌಡಿ ಚಟುವಟಿಕೆಗಳನ್ನು ಹೆಚ್ಚಾಗಿ ಮಾಡುತ್ತಿದ್ದ. ಎದುರಾಳಿ ರೌಡಿಗಳಿಗೆ ಅಲಿ ತೀವ್ರ ಉಪಟಳ ನೀಡುತ್ತಿದ್ದ. ಅಪ್ಸರ್ ಕುಟುಂಬಕ್ಕೆ ಅಲಿ ತೀವ್ರ ತೊಂದರೆ ಕೊಟ್ಟಿದ್ದ ಎಂದು ಬಂಧಿತ ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ. [ಕ್ರೈಂ]











Click it and Unblock the Notifications