ದೇಶಕ್ಕೆ ಬಂತು ತ್ರಿಪಲ್ ಸಿಮ್ ಜಿಎಸ್ಎಂ ಮೊಬೈಲ್
ನವದೆಹಲಿ,
ಜ.20: 3 ಸಿಮ್ ಅಳವಡಿಸಬಹುದಾದ ಮೊದಲ ಜಿಎಸ್ಎಂ ಹ್ಯಾಂಡ್ ಸೆಟ್ ದೇಶದಲ್ಲಿ ಬಿಡುಗಡೆಗೊಂಡಿದೆ. ಜಪಾನಿನ ಎಲೆಕ್ಟ್ರಿಕ್ ಉತ್ಪನ್ನಗಳ ತಯಾರಿಕಾ ಕಂಪನಿ ಅಕಾಯ್(akai) "ನ್ಯೂ ಅಕಾಯ್ ಟ್ರಿಯೊ' ಎಂಬ ಮೊಬೈಲ್ ಹೊರತಂದಿದೆ. ಇದು ಭಾರತಕ್ಕೆ ಬಂದಿರುವ ಮೊದಲ ತ್ರಿಬಲ್ ಸಿಮ್ ಎಂದು ಕಂಪನಿ ಹೇಳಿಕೊಂಡರೂ ಇದಕ್ಕೂ ಮೊದಲು ಇಂಟೆಕ್ಸ್ ಸಿಡಿಎಂಎ+ಜಿಎಸ್ಎಂ+ಜಿಎಸ್ಎಂ ಸಿಮ್ ಗಳಿಗೆ ಸಪೋರ್ಟ್ ಮಾಡುವ ಹ್ಯಾಂಡ್ ಸೆಟ್ ಹೊರತಂದಿತ್ತು. ಹೀಗಾಗಿ ನ್ಯೂ ಟ್ರಿಯೊ, ಜಿಎಸ್ಎಂ ಸಪೋರ್ಟ್ ಮಾಡುವ ಮೊದಲ ಹ್ಯಾಂಡ್ ಸೆಟ್ ಆಗಿದೆ ಎನ್ನಬಹುದು. id="toptextpromo">ನೂತನ
ಟ್ರಿಯೊ ಎರಡು ಇಂಚಿನ ಡಿಸ್ ಪ್ಲೇ, 1.3 ಮೆಗಾ ಪಿಕ್ಸೆಲ್ ಕ್ಯಾಮರಾ, ಎಫ್ಎಂ ರೇಡಿಯೊ, ಆಡಿಯೋ ಮತ್ತು ವಿಡಿಯೋ ಪ್ಲೇಯರ್, ಬ್ಲೂಟೂಥ್, ವ್ಯಾಪ್ ಮತ್ತು ಜಿಪಿಆರ್ಎಸ್ ಸೌಲಭ್ಯ, ಟಾರ್ಚ್ ಇತ್ಯಾದಿ ಫೀಚರ್ ಗಳನ್ನು ಹೊಂದಿದೆ. ಇಷ್ಟೇ ಅಲ್ಲ ಇ-ಬುಕ್ ರೀಡರ್, 8 ಜಿಬಿ ವರೆಗೆ ವಿಸ್ತರಿಸಬಹುದಾದ ಮೆಮೋರಿ ಕಾರ್ಡ್, 5 ಗಂಟೆಗಳ ಟಾಕ್ ಟೈಮ್ ಬ್ಯಾಟರಿ ಬಾಳಿಕೆಯ ಫೀಚರ್ ಗಳೂ ಜೊತೆಯಲ್ಲಿವೆ. id='are-slot-1' class='oiad oi-axt oiadv'> id='top-searched-articles'>ಹೊಸ
ಅಕಾಯ್ ಟ್ರಿಯೊ ದರವೆಷ್ಟು ಅಂತ ನೀವು ಕೇಳಬಹುದು. ಕಂಪನಿಯು ನೂತನ ಮೊಬೈಲನ್ನು ಕೈಗೆಟುಕುವ ದರದಲ್ಲಿ ಅಂದರೆ 3,295 ರೂಪಾಯಿಯಲ್ಲಿ ನೀಡುತ್ತಿದೆ. ಇದು ದೇಶದ ಸುಮಾರು 15 ಸಾವಿರ ರಿಟೇಲ್ ಮಳಿಗೆಗಳಲ್ಲಿ ದೊರಕುತ್ತದೆ ಎಂದು ಕಂಪನಿ ಪ್ರಕಟಿಸಿದೆ. [ಮೊಬೈಲ್ ಫೋನ್]












Click it and Unblock the Notifications