ಜಿಲ್ಲಾ ಓಂಬಡ್ಸ್ ಮನ್ ನೇಮಕ ಅಗತ್ಯ : ಲೋಕಾಯುಕ್ತ
ಬೆಂಗಳೂರು,
ಜ. 17 : ಸರಕಾರದ ಯೋಜನೆ ಮತ್ತು ಕಾರ್ಯಕ್ರಮಗಳು ಸಮರ್ಪಕವಾಗಿ ಜಾರಿಯಾಗಲು ಜಿಲ್ಲಾ ಮಟ್ಟದಲ್ಲಿ ಓಂಬಡ್ಸ್ ಮನ್ ನೇಮಕ ಅಗತ್ಯ ಎಂದು ಲೋಕಾಯುಕ್ತ ಸಂತೋಷ ಹೆಗ್ಡೆ ಪ್ರತಿಪಾದಿಸಿದ್ದಾರೆ. id="toptextpromo">ಬೆಂಗಳೂರು
ದೂರದರ್ಶನ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಭ್ರಷ್ಟಾಚಾರ ನಿಗ್ರಹಕ್ಕೆ ಸಂಬಂಧಿಸಿದಂತೆ ನಾನು ಪರಮಾಧಿಕಾರ ಕೇಳಿಲ್ಲ. ಹಾಗೆ ಕೇಳಿದರೆ ಅದು ಸರ್ವಾಧಿಕಾರ ಆಗುತ್ತದೆ. ಹೆಚ್ಚಿನ ಅಧಿಕಾರ ಕೇಳಿದ್ದೆ. ಆದರೆ, ಈವರೆಗೂ ಸರಕಾರ ನನಗೆ ಯಾವ ಹೆಚ್ಚಿನ ಅಧಿಕಾರವನ್ನೂ ನೀಡಿಲ್ಲ. ಇದರಿಂದ ನಾನು ಹತಾಶನಾಗಿಲ್ಲ ಎಂದು ಹೆಗ್ಡೆ ಸ್ಪಷ್ಟಪಡಿಸಿದರು. id='are-slot-1' class='oiad oi-axt oiadv'> id='top-searched-articles'>ಭ್ರಷ್ಟಾಚಾರ
ನಿಗ್ರಹಕ್ಕೆ ಜಿಲ್ಲಾ ಮಟ್ಟದಲ್ಲಿ ಓಂಬಡ್ಸ್ ಮನ್ ಗಳನ್ನು ನೇಮಕ ಮಾಡಬೇಕಾಗಿದೆ. ಬೀದರ್ ನಿಂದ ಕೋಲಾರದವರಿಗಿನ 30 ಜನರ ಆಯ್ದ ಪ್ರಶ್ನೆಗಳಿಗೆ ಅವರು ಉತ್ತರಿಸಿದರು. ವೈಯಕ್ತಿಕ ಸಾಲ ವಸೂಲಿಯಿಂದ ಹಿಡಿದು ರಸ್ತೆ ಕಾಮಗಾರಿಯಲ್ಲಿ ಸರಕಾರದ ಹಣ ದುರ್ಬಳಿಕೆ ಕುರಿತ ಪ್ರಶ್ನೆಗೆ ಸ್ಪಂದಿಸಿದ ಅವರು, ಲಿಖಿತ ರೂಪದಲ್ಲಿ ದೂರು ಸಲ್ಲಿಸಿದರೆ, ವಿಚಾರಣೆ ನಡೆಸುವುದಾಗಿ ಭರವಸೆ ನೀಡಿದರು.











Click it and Unblock the Notifications