Get Updates
Get notified of breaking news, exclusive insights, and must-see stories!

ವಿಕಿಪೀಡಿಯಗೆ 10; ಸಂಭ್ರಮದಿಂದ ಆಚರಣೆ

Wikipedia 10 anniversary, Bengaluru
ಬೆಂಗಳೂರು, ಜ.15: ಮುಕ್ತ ವಿಶ್ವಕೋಶ ವಿಕಿಪೀಡಿಯದ ಹತ್ತನೇ ವಾರ್ಷಿಕೋತ್ಸವವನ್ನು ಇಂದು ಬೆಂಗಳೂರಿನ ವಿಕಿಪೀಡಿಯ ಸಮುದಾಯ ಸಂಭ್ರಮದಿಂದ ಆಚರಿಸಿತು. ಇಂದು ನಡೆದ ಆಚರಣೆಯಲ್ಲಿ ವಿಕಿಪೀಡಿಯ ಬಳಕೆದಾರರು ,ನಿರ್ವಾಹಕರಲ್ಲದೆ ಕಾಲೇಜಿನ ಉಪನ್ಯಾಸಕರುಗಳು, ವಿದ್ಯಾರ್ಥಿಗಳು, ಹಿರಿಯ ನಾಗರಿಕರುಗಳು ಭಾಗವಹಿಸಿದ್ದು ವಿಶೇಷ.

ಸಾರ್ವಜನಿಕ ವಲಯಕ್ಕೆ ವಿಕಿಪೀಡಿಯ ಎಂದರೇನು ಅದರ ಮಹತ್ವ, ಕಾರ್ಯ ನಿರ್ವಹಣೆ, ಹೆಚ್ಚು ಜನ ಪಾಲ್ಗೊಳ್ಳುವ ಬಗ್ಗೆ ಸಂಜೆ 6 ಕ್ಕೆ ಪ್ರತ್ಯೇಕ ಸಮಯ ಮೀಸಲಿರಿಸಲಾಗಿದ್ದರೂ, ಬೆಳಗ್ಗಿನ ಮೊದಲ ಸಭೆಯಿಂದಲೇ ಹಲವು ಜನರು(ಸಾರ್ವಜನಿಕ ವಲಯದ) ಉತ್ಸಾಹದಿಂದ ಪಾಲ್ಗೊಂಡಿದ್ದು ಸಂತಸದ ಸಂಗತಿ. ಹತ್ತನೆಯ ವಾರ್ಷಿಕೋತ್ಸವವನ್ನು ಭಾರತೀಯ ವಿಜ್ಞಾನ ಮಂದಿರದ ನ್ಯಾಷನಲ್ ಇನ್ಸ್ ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ ನ ಸಭಾಂಗಣಗಳಲ್ಲಿ ಆಯೋಜಿಸಲಾಗಿತ್ತು.

ಮೊದಲ ಭಾಗದಲ್ಲಿ ವಿವಿಧ ಭಾಷೆಗಳ ವಿಕಿ ಎಡಿಟರ್ ಗಳು ತಮ್ಮಮ್ಮ ಭಾಷಾ ವಿಕಿಪೀಡಿಯದ ಸ್ಥಿತಿ ಗತಿಗಳು, ತೊಂದರೆಗಳು, ಮುಂದಿನ ಯೋಜನೆಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು. ಮೊದಲಿಗೆ ಬೆಂಗಾಲಿ ವಿಕಿಪೀಡಿಯದ ಬಗ್ಗೆ ಢಾಕಾದಿಂದ ಮೆಸ್ಸೆಂಜರ್ ಮೂಲಕ ಬಿಲಾಯತ್ ಅವರು ಪ್ರಾತ್ಯಾಕ್ಷಿಕೆ ನೀಡಿದರು. ನಂತರ ಕನ್ನಡ ವಿಕಿಪೀಡಿಯದ ಬಗ್ಗೆ ಹರಿ ಪ್ರಸಾದ್ ನಾಡಿಗ್, ಮಲೆಯಾಳಂ ಬಗ್ಗೆ ಶಿಜು ಅಲೆಕ್ಸ್, ತೆಲುಗು ಬಗ್ಗೆ ಅರ್ಜುನ ರಾವ್, ಸಂಸ್ಕೃತದ ಬಗ್ಗೆ ಅರುಣ್ ರಾಮ್ ಹಾಗೂ ಇಂಗ್ಲೀಷ್ ಬಗ್ಗೆ ಟೀನು ಚೆರಿಯನ್ ಬದಲಿಗೆ ಶ್ರೀಕಾಂತ್ ಮಾತನಾಡಿದರು.

ಗ್ಯಾಲರಿ :
ವಿಕಿಪೀಡಿಯ 10ರ ಸಂಭ್ರಮಾಚರಣೆ

ಪ್ರಶ್ನೆಗಳ ಸುರಿಮಳೆ: ಅಮೆರಿಕದ ವಿಕಿಪೀಡಿಯ ಫೌಂಡೇಷನ್ ನ ಸಕ್ರಿಯ ಸದಸ್ಯೆ ಪಿ. ಮೋಕಾ ಇಂದಿನ ಸಭೆಗೆ ಆಗಮಿಸಿ, ಸದಸ್ಯರ ಹಲವಾರು ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರಿಸಿದರು. ಕೆಲ ಪ್ರಶ್ನೆಗಳು ಇಂತಿದ್ದವು:

ವಿಕಿಪೀಡಿಯಗೆ ಕಾನೂನಿನ ಸಹಾಯ ಬೇಡವೆ? ಆಕ್ಷೇಪಾರ್ಹ ಲೇಖನಗಳನ್ನು ಹಾಕಿ ಕೋಮು ಗಲಭೆ ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಅನಗತ್ಯ ನಿಂದನೆ ಮಾಡಿದರೆ ಏನು ಮಾಡುತ್ತೀರಾ? ಲೇಖನಗಳನ್ನು ಸಂಪಾದಿಸುವುದೇ ಹೆಚ್ಚಿನ ಸಮಯ ತಿನ್ನುತ್ತಿಲ್ಲವೇ?..ಇತ್ಯಾದಿ..

ಮೋಕಾ: ವಿಕಿಪೀಡಿಯ ಒಂದು ಸಾಂಸ್ಕೃತಿಕ ಸಮುದಾಯವಾಗಿ ಆರಂಭವಾಗಿದ್ದು, ಈಗಲೂ ಹಾಗೇ ಬೆಳೆಯುತ್ತಿದೆ. ಕೆಟ್ಟ ಉದ್ದೇಶದಿಂದ ಹಾಕುವ ಲೇಖನಗಳು ವಿಕಿಪೀಡಿಯದಲ್ಲಿ ತುಂಬಾ ಕಡಿಮೆ ಸಂಖ್ಯೆಯಲ್ಲಿ ಕಾಣಬಹುದು. ಕಂಡರೂ ಎಡಿಟ್ ಮಾಡಲಾಗುತ್ತದೆ ಅಥವಾ ಅಂಥಾ ಅನಗತ್ಯ ಚರ್ಚಾ ಪುಟಗಳಿಗೆ ನಿರ್ಬಂಧ ಹೇರಲಾಗುತ್ತದೆ. ಆದರೂ, ನಿಮ್ಮ ಸಲಹೆಯನ್ನು ಪರಿಗಣಿಸಲಾಗಿದ್ದು, ವಿಕಿಪೀಡಿಯ ಹಾಗೂ ಕಾನೂನು ಸಂಬಂಧದ ಬಗ್ಗೆ ಮುಂಬರುವ ದಿನಗಳಲ್ಲಿ ಚರ್ಚಿಸಲಾಗುವುದು ಎಂದರು.

ಮಧ್ಯಾಹ್ನದ ಸಭೆಗಳು: ಬೇರೆ ಭಾಷೆಗಳಿಗೆ ಹೋಲಿಸಿದರೆ ಕನ್ನಡದಲ್ಲಿ ಲೇಖನಗಳ ಸಂಖ್ಯೆ ಕಡಿಮೆ ಏಕೆ ಎಂದು ನಿರ್ವಾಹಕರಲ್ಲಿ ಒಬ್ಬರಾದ ಹರಿಪ್ರಸಾದ್ ಅವರನ್ನು ಪ್ರಶ್ನಿಸಿದಾಗ, ಇತರೆ ರಾಜ್ಯಗಳಲ್ಲಿ ಅಲ್ಲಿನ ಸರ್ಕಾರವೇ ಅಧಿಕೃತ ಮಾಹಿತಿಯನ್ನು ವಿಕಿಪೀಡಿಯಗೆ ನೀಡುತ್ತಿದೆ. ತಮಿಳುನಾಡು ಸರ್ಕಾರದಿಂದ ಸಾವಿರಾರು ಲೇಖನಗಳು ವಿಕಿ ಪುಟ ಸೇರಿವೆ. ಇಲ್ಲಿ ಸರ್ಕಾರದ ಜೊತೆಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆಯೂ ಅಗತ್ಯ ಎಂದರು.

ಮಾಹಿತಿ ಸೇರಿಸುವ ವ್ಯಕ್ತಿಯ ಸಂಪೂರ್ಣ ವಿವರ ಸಿಗುವುದರಿಂದ ಮಾಹಿತಿ ಸಂಗ್ರಹ, ನಿರ್ವಹಣೆ ಹಾಗೂ ಸಂಕಲನ ಮಾಡಲು ಅನುಕೂಲವಾಗುತ್ತಿದೆ. ಇತರೆ ಭಾಷೆಗಳಲ್ಲಿದ್ದಂತೆ botಗಳ ಸಮರ್ಪಕ ಬಳಕೆ, ಬ್ಲಾಗರ್ಸ್ ಗಳ ಕೊಡುಗೆ, ಸರ್ಕಾರದ ಮಾಹಿತಿ ಬೆಂಬಲ ದೊರೆತರೆ ವಿಕಿಪೀಡಿಯ ಕನ್ನಡವನ್ನು ಎಲ್ಲಾ ಸ್ತರಗಳಿಗೂ ಪರಿಚಯಿಸುವ ಕಾರ್ಯ ಸುಲಭವಾಗುತ್ತದೆ ಎಂದು ನಾಡಿಗ್ ವಿವರಿಸಿದರು. [ಸಂಪೂರ್ಣ ವಿವರಗಳಿಗೆ ನಿರೀಕ್ಷಿಸಿ...]

ತಂತ್ರಜ್ಞರಿಗೆ, ಛಾಯಾಗ್ರಾಹಕರಿಗೆ, ವಿವಿಧ ಭಾಷಾ ಆಸಕ್ತರಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಾಯಿತು. ಸಂಜೆ ಸಾರ್ವಜನಿಕರಿಗಾಗಿ ಸಂಪೂರ್ಣ ಸಮಯವನ್ನು ಮೀಸಲಿಡಲಾಗಿತ್ತು. ಮೈಸೂರಿನಲ್ಲಿ ನಾಳೆ (ಜ.16) ವಿಕಿಪೀಡಿಯ ಹತ್ತನೇ ವಾರ್ಷಿಕೋತ್ಸವ ಆಚರಿಸಲಾಗುವುದು ಎಂದು ಹರಿ ಹೇಳಿದರು. [ಬೆಂಗಳೂರು]

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+