ಮಗುವಿನ ಕೈಕಾಲುಗಳನ್ನು ತಿಂದ ಬೀದಿ ನಾಯಿಗಳು
ಬೆಂಗಳೂರು,
ಜ. 13 : ನಾಯಿಗಳ ಹಾವಳಿಗೆ ಬಿಬಿಎಂಪಿ ಏನೇ ಕ್ರಮ ಕೈಗೊಂಡರೂ ಪ್ರಯೋಜವಾಗುತ್ತಿಲ್ಲ ಎನ್ನುವುದಕ್ಕೆ ಇದೊಂದು ತಾಣ ನಿದರ್ಶನ. ನಗರದ ಹೊರವಲಯದ ಬಾಗಲೂರಿನಲ್ಲಿ 18 ತಿಂಗಳಿನ ಮಗುವನ್ನು ಬೀದಿ ನಾಯಿಗಳು ಎಳೆದೊಯ್ದು ಕೈಕಾಲುಗಳನ್ನು ತಿಂದು ದೇಹವನ್ನು ಬಿಟ್ಟುಹೋಗಿರುವ ಹೃದಯ ವಿದ್ರಾವಕ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ. id="toptextpromo">ಅಂತಾರಾಷ್ಟ್ರೀಯ
ವಿಮಾನ ನಿಲ್ದಾಣ ರಸ್ತೆ ಹತ್ತಿರದ ಬಾಗಲೂರು ಪ್ರದೇಶದ ಇಟ್ಟಿಗೆ ಕಾರ್ಖಾನೆ ಕಾರ್ಮಿಕ ಒರಿಸ್ಸಾದ ಸುಖದೇವ್ ಮತ್ತು ಕೈಕೇಯಿ ದಂಪತಿಗಳ ಮಗ ಪ್ರಶಾಂತ್ ಬೀದಿ ನಾಯಿಗಳ ಅಬ್ಬರಕ್ಕೆ ಬಲಿಯಾದ ನತದೃಷ್ಟ. ಬಾಗಲೂರು ಸುತ್ತಮುತ್ತ ಹಂದಿ ಮತ್ತು ಮೀನು ಸಾಗಾಣಿಕೆಗೆ ತರುವ ಕೋಳಿ ವ್ಯಾಜ್ಯ ತಿನ್ನಲು ಬರುವ ನಾಯಿಗಳು ಮಗುವನ್ನು ಆಹಾರವಾಗಿಸಿಕೊಂಡಿವೆ. id='are-slot-1' class='oiad oi-axt oiadv'> id='top-searched-articles'>ಬಾಗಲೂರಿನಲ್ಲಿರುವ
ಇಟ್ಟಿಗೆ ಕಾರ್ಖಾನೆ ಬಳಿ ಗುಡಿಸಲಲ್ಲಿ ಸುಖದೇವ್ ವಾಸವಾಗಿದ್ದು, ಅವರಿಗೆ ಆರು ಮಕ್ಕಳಿದ್ದಾರೆ. ಕಾರ್ಖಾನೆ ಬಳಿ ವಾಸವಾಗಿರುವ ಕಾರ್ಮಿಕರು ರಾತ್ರಿ ಮಾಂಸದೂಟ ಮಾಡಿ ಉಳಿದ ಮಾಂಸದ ತುಂಡಗಳನ್ನು ಗುಡಿಸಲಿನ ಪಕ್ಕದಲ್ಲಿ ಎಸೆದಿದ್ದರು. ಬೀಡಾಡಿ ನಾಯಿಗಳು ಮಾಂಸದ ತುಂಡಗಳನ್ನು ತಿನ್ನಲು ಬಂದು ಮಗುವನ್ನು ಎಳೆದೊಯ್ದು ತಿಂದು ಹಾಕಿವೆ ಎಂದು ಪೊಲೀಸರು ತಿಳಿಸಿದ್ದಾರೆ.(ಬೀದಿ ನಾಯಿ)












Click it and Unblock the Notifications