ಅಕ್ಷಯಪಾತ್ರೆ ಕ್ಲೀನ್ ಚಿಟ್ ಗೆ ಇಸ್ಕಾನ್ ಹರ್ಷ
ಬೆಂಗಳೂರು,
ಜ. 13 : ಇಸ್ಕಾನ್ ನ ಅಕ್ಷಯಪಾತ್ರೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ವಿಧಾನಸಭೆ ಸಮಿತಿ ತನಿಖೆ ನೀಡಿರುವ ವರದಿಗೆ ಇಸ್ಕಾನ್ ಅಧ್ಯಕ್ಷ ಮಧುಪಂಡಿತ ದಾಸ್ ಹರ್ಷ ವ್ಯಕ್ತಪಡಿಸಿದ್ದಾರೆ. id="toptextpromo">ಕಾಂಗ್ರೆಸ್
ಮುಖಂಡ ಡಿಕೆ ಶಿವಕುಮಾರ್ ಸೇರಿದಂತೆ ಕೆಲ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಈ ಎಲ್ಲ ಆರೋಪಗಳನ್ನು ಸಮಿತಿ ತಿರಸ್ಕರಿಸಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ದಾಸ್ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು. ಅಕ್ಷಯಪಾತ್ರಾ ಯೋಜನೆಯ ಬಗ್ಗೆ ಸಾರ್ವಜನಿಕರಾಗಲಿ, ಶಾಲಾ ಶಿಕ್ಷಕರಾಗಲಿ ದೂರು ನೀಡಲಿಲ್ಲ. ಕೇವಲ ಕಾಂಗ್ರಸ್ ಪಕ್ಷದ ನಾಯಕರು ದೂರಿರುವುದು ವ್ಯಾಪಕ ಪ್ರಚಾರ ಪಡೆಯಿತು. ಇದೀಗ ಸದನ ಸಮಿತಿಯಿಂದ ಎಲ್ಲವೂ ಬಹಿರಂಗವಾಗಿದೆ ಎಂದು ಹೇಳಿದರು. id='are-slot-1' class='oiad oi-axt oiadv'> id='top-searched-articles'>ಡಿಕೆ
ಶಿವಕುಮಾರ್ ಮಾಡಿದ ಎಲ್ಲಾ ಆರೋಪಗಳ ಬಗ್ಗೆ ಸದನ ಸಮಿತಿ ಕೂಲಂಕುಷವಾಗಿ ತನಿಖೆ ನಡೆಸಿ ವಿವರವಾದ ವರದಿ ನೀಡಿದೆ. ಈ ವರದಿಯನ್ನು ಶಿವಕುಮಾರ್ ಒಪ್ಪಿಕೊಳ್ಳಬೇಕು ಎಂದು ದಾಸ್ ಆಗ್ರಹಿಸಿದರು.(ಇಸ್ಕಾನ್)











Click it and Unblock the Notifications