ಪತ್ನಿ ತಲೆ ಚಚ್ಚಿ, ಬೆಂಕಿ ಹಚ್ಚಿದ ಕುಡುಕ ಪತಿ

ಮಗಳು ಸೋಮವಾರಪೇಟೆಯಲ್ಲಿ ಖಾಸಗಿ ನೌಕರಿ ಮಾಡುತ್ತಿದ್ದರೆ ಮಗ ಮನೆಯಲ್ಲಿದ್ದಾನೆ. ಗಣೇಶ ಹಾಗೂ ವೇದಾವತಿ ದಂಪತಿಗಳು ಮದ್ಯ ಸೇವಿಸುತ್ತಿದ್ದರು. ಕುಡಿದ ಮತ್ತಿನಲ್ಲಿ ಇಬ್ಬರು ಜಗಳ ಮಾಡುತ್ತಿದ್ದರೂ ಹೆಂಡದ ಅಮಲು ಬಿರಿಯುತ್ತಿದ್ದಂತೆಯೇ ಒಂದಾಗಿ ಬಿಡುತ್ತಿದ್ದರು. ಮೊನ್ನೆ ಸೋಮವಾರ ಸೋಮವಾರಪೇಟೆಯಲ್ಲಿ ಸಂತೆ. ಹೀಗಾಗಿ ತಾಲೂಕಿನ ಎಲ್ಲಾ ಕಾಫಿ ತೊಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅವತ್ತು ರಜೆ. ಕೆಲವರು ಸಂತೆಗೆ ಹೋದರೆ ಇನ್ನು ಕೆಲವರು ಅಲ್ಲಿಇಲ್ಲಿ ಸುತ್ತಾಡುತ್ತಾ ಮದ್ಯ ಸೇವಿಸುತ್ತಾ ತಮ್ಮ ರಜೆಯನ್ನು ಕಳೆಯುತ್ತಾರೆ.
ಅವತ್ತು ಮಗ ಸೀಮೆಎಣ್ಣೆ ತರಲು ನ್ಯಾಯಬೆಲೆ ಅಂಗಡಿಗೆ ಹೋಗಿದ್ದರೆ, ಮಗಳು ಎಂದಿನಂತೆ ಸೋಮವಾರಪೇಟೆಗೆ ಕೆಲಸಕ್ಕೆ ಹೋಗಿದ್ದಳು. ಮನೆಯಲ್ಲಿ ಯಾರೂ ಇರಲಿಲ್ಲ. ಹೀಗಾಗಿ ಗಣೇಶ ಹಾಗೂ ವೇದಾವತಿ ಮಧ್ಯಾಹ್ನವೇ ಮದ್ಯ ಸೇವಿಸಿ ಊಟ ಮಾಡಿದ್ದರು. ಅಲ್ಲಿಯ ತನಕ ಚೆನ್ನಾಗಿಯೇ ಇದ್ದವರು ಮದ್ಯದ ಅಮಲು ತಲೆಗೇರುತ್ತಿದ್ದಂತೆಯೇ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ.
ಬೆಂಕಿ ಹಚ್ಚಿ ಸುಮ್ಮನೆ ಕೂತ:ಕೋಪಗೊಂಡ ಗಣೇಶ ಹೆಂಡದ ಅಮಲಿನಲ್ಲಿ ಮನೆಯಲ್ಲಿದ್ದ ಸುತ್ತಿಗೆಯನ್ನು ತಂದವನೇ ಆಕೆಯ ತಲೆಗೆ ಬಡಿದಿದ್ದಾನೆ. ತಲೆ ಹೋಳಾಗಿ ಆಕೆ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ರಕ್ತದ ಕೋಡಿ ಹರಿದಿದೆ. ಆದರೆ ಅಷ್ಟಕ್ಕೆ ಸುಮ್ಮನಾಗದ ಆತ ಮನೆಯಲ್ಲಿದ್ದ ಸೀಮೆಎಣ್ಣೆಯನ್ನು ಆಕೆಯ ಮೇಲೆ ಸುರಿದು ಬೆಂಕಿಹಚ್ಚಿದ್ದಾನೆ. ಅಷ್ಟರಲ್ಲಿಯೇ ಮನೆಗೆ ಮಗ ವಿನಯ್ ಬಂದಿದ್ದಾನೆ. ಮನೆಯಲ್ಲಿ ಅಮ್ಮ ಬೆಂಕಿಯಲ್ಲಿ ಉರಿಯುತ್ತಿರುವುದು ಕಂಡಿದೆ ತಕ್ಷಣ ಬೆಂಕಿಯನ್ನು ನಂದಿಸಿ ಅಕ್ಕನಿಗೆ ಪೋನ್ ಮಾಡಿ ಕರೆಸಿದ್ದಾನೆ.
ಇಷ್ಟೆಲ್ಲಾ ಆದರೂ ಹೆಂಡದ ಮತ್ತಿನಲ್ಲಿದ್ದ ಗಣೇಶನಿಗೆ ತಾನೇನು ಮಾಡಿದ್ದೇನೆ ಎಂಬ ಪ್ರಜ್ಞೆಯಿಲ್ಲದೆ ಮಲಗಿದ್ದಾನೆ. ಬಳಿಕ ಅಕ್ಕತಮ್ಮ ಸೇರಿ ಗಣೇಶನನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಆ ವೇಳೆಗೆ ಗ್ರಾಮದ ಜನರಿಗೆ ವಿಷಯ ತಿಳಿದು ೧೦೮ ವಾಹನ ಕರೆಸಿ ಸೋಮವಾರಪೇಟೆಗೆ ಕರೆದೊಯ್ಯುವ ವೇಳೆಗೆ ಮಾರ್ಗ ಮಧ್ಯದಲ್ಲಿಯೇ ತೀವ್ರ ಗಾಯಗೊಂಡಿದ್ದ ವೇದಾವತಿ ಸಾವನ್ನಪ್ಪಿದ್ದಾಳೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಸೋಮವಾರಪೇಟೆ ಠಾಣೆ ಪೊಲೀಸರು ಆರೋಪಿ ಗಣೇಶನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ ಸುತ್ತಿಗೆಯನ್ನು ವಶಪಡಿಸಿಕೊಂಡಿದ್ದಾರೆ. ಹೆಂಡದ ಸಹವಾಸದಿಂದ ಒಂದು ಕುಟುಂಬ ಬೀದಿಗೆ ಬಿದ್ದಿದೆ. ಅತ್ತ ತಾಯಿಯೂ ಇಲ್ಲ. ಇತ್ತ ತಂದೆಯೂ ಇಲ್ಲದೆ ಮಕ್ಕಳು ತಬ್ಬಲಿಯಾಗಿವೆ. [ಕ್ರೈಂ]












Click it and Unblock the Notifications