ಬಳ್ಳಾರಿ ನಂತರ ಗುಲ್ಬರ್ಗಾ ಆಪರೇಷನ್ ಕಮಲ!
ಬೆಂಗಳೂರು,
ಜ. 11 : ಅತಂತ್ರ ಜಿಲ್ಲಾ ಪಂಚಾಯಿತಿಗಳಲ್ಲಿ ಬಿಜೆಪಿ ಭರ್ಜರಿ ಆಪರೇಷನ್ ಕಮಲ ಮುಂದುವರಿಸಿದ್ದು, ಬಳ್ಳಾರಿ ಜಿಲ್ಲಾ ಪಂಚಾಯಿತಿ ನಂತರ ಇದೀಗ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯಲ್ಲೂ ಆಪರೇಷನ್ ಕಮಲ ನಡೆಸಿದೆ. id="toptextpromo">ಶಾಸಕ
ಸುಭಾಷ್ ಗುತ್ತೇದಾರ್ ಮಗ ಸೇರಿದಂತೆ ಗುಲ್ಬರ್ಗಾ ಜಿಲ್ಲಾ ಪಂಚಾಯಿತಿಯ ಜೆಡಿಎಸ್ ನ ಮೂವರು ಸದಸ್ಯರು ಸೋಮವಾರ ಬಿಜೆಪಿ ಸೇರ್ಪಡೆಯಾದರು. ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ರಾಜ್ಯಾಧ್ಯಕ್ಷ ಕೆ ಎಸ್ ಈಶ್ವರಪ್ಪ ಅವರ ಸಮ್ಮುಖದಲ್ಲಿ ತಡಕಲ್ ಕ್ಷೇತ್ರದ ಜಿಪಂ ಸದಸ್ಯ ಹರ್ಷ ಗುತ್ತೇದಾರ್, ನರೋನ ಕ್ಷೇತ್ರದ ಮಂಗಳಬಾಯಿ ಮತ್ತು ಕಜೂರಿ ಕ್ಷೇತ್ರದ ಜಯಶ್ರೀ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. id='are-slot-1' class='oiad oi-axt oiadv'> id='top-searched-articles'>ಇದರಿಂದಾಗಿ
43 ಸದಸ್ಯ ಬಲದ ಗುಲ್ಬರ್ಗಾ ಜಿಪಂನಲ್ಲಿ ಬಿಜೆಪಿಯ ಸಂಖ್ಯಾಬಲ 23ಕ್ಕೆ ಏರಿದಂತಾಗಿದೆ. ಮೂರು ಜನರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಈಶ್ವರಪ್ಪ, ಗುಲ್ಬರ್ಗಾದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧರಿದ್ದೇವು. ಆದರೆ, ಆ ಪಕ್ಷದ ಸದಸ್ಯರು ಬಿಜೆಪಿ ಸೇರಲು ಇಚ್ಚೆ ವ್ಯಕ್ತಪಡಿಸಿದ್ದರಿಂದ ಹೇಳಿದರು.











Click it and Unblock the Notifications