ಸನ್ಯಾಸಿ ನೀಡಿದ ಪ್ರಸಾದ ಸೇವಿಸಿ ಯುವತಿ ಸಾವು
ತುಮಕೂರು,
ಜ. 10: ಸನ್ಯಾಸಿಯೊಬ್ಬರು ನೀಡಿದ ಪ್ರಸಾದ ಸೇವಿಸಿ ಯುವತಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ತುಮಕೂರು ನಗರದ ಕ್ಯಾತಸಂದ್ರ ಬಳಿಯ ಚಿಕ್ಕನಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ. id="toptextpromo">ನಳನಿಕುಮಾರಿ
ಸಾವಿಗೀಡಾದ ನತದೃಷ್ಟೆ. ಭಿಕ್ಷೆ ಬೇಡಲು ಬಂದ ಸನ್ಯಾಸಿಯೊಬ್ಬ ಕಾಣಿಕೆ ನೀಡುವಂತೆ ಕೇಳಿದ್ದು, ನಳಿನಾಕುಮಾರಿ ಕಾಣಿಕೆ ನೀಡಿದ್ದಾಳೆ. ಮನೆಯಲ್ಲಿ ಯಾರು ಇಲ್ಲದ್ದನ್ನು ಗಮನಿಸಿದ ಸನ್ಯಾಸಿ ಪ್ರಸಾದವನ್ನು ಕೊಟ್ಟು ಕೂಡಲೇ ತಿನ್ನುವಂತೆ ಒತ್ತಾಯಿಸಿದ್ದಾನೆ. ಪ್ರಸಾದ ತಿಂದ ಕೆಲವೇ ಹೊತ್ತಿನಲ್ಲಿ ಆಕೆ ಕುಸಿದು ಬಿದ್ದಿದ್ದಳು. ಚಿಕಿತ್ಸೆಗಾಗಿ ತುಮಕೂರು ಸರಕಾರಿ ಆಸ್ಪತ್ರೆಗೆ ಕರೆ ತಂದರೂ ಯಾವುದೇ ಪ್ರಯೋಜವಾಗದೆ ಆಕೆ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಇಲ್ಲಿನ
ಸರಕಾರಿ ಕಲಾ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಎ ವ್ಯಾಸಂಗ ಮಾಡುತ್ತಿದ್ದ ನಳಿನಿಕುಮಾರಿ, ಕಷ್ಟದಲ್ಲಿರುವವರನ್ನು ಕಂಡರೆ ಮರುಗುತ್ತಿದ್ದಳು. ಇಂತಹ ಗುಣವೇ ಈಕೆಯ ಸಾವಿಗೆ ಕಾರಣವಾಗಿದೆ. ಈ ಸಂಬಂಧ ಸನ್ಯಾಸಿಯ ವಿರುದ್ಧ ಕೇಸು ದಾಖಲಾಗಿದ್ದು, ಕ್ಯಾತಸಂದ್ರದ ಪೊಲೀಸರು ಕಳ್ಳ ಸನ್ಯಾಸಿಯ ಹುಡುಕಾಟದಲ್ಲಿ ತೊಡಗಿದ್ದಾರೆ.(ಕ್ರೈಂ)











Click it and Unblock the Notifications