ಕ್ವಟ್ರೋಚಿ ಜೊತೆ ಸೋನಿಯಾ ಸ್ನೇಹ ಸಂಬಂಧ

LK Advani
ಗುವಾಹಟಿ, ಜ. 10 : ಬೋಫೋರ್ಸ್ ಹಗರಣದ ಪ್ರಮುಖ ರೂವಾರಿ ಎನ್ನಲಾದ ಇಟಲಿಯ ಒಟ್ಟಾವಿಯೋ ಕ್ವಟ್ರೋಚಿ ಜೊತೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಉತ್ತಮ ಸಂಬಂಧ ಹೊಂದಿದ್ದರು ಎಂದು ಬಿಜೆಪಿ ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಆರೋಪಿಸಿದ್ದಾರೆ.

ಇಲ್ಲಿನ ನಡೆದಿರುವ ಬಿಜೆಪಿ ಕಾರ್ಯಾಕಾರಿಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾನು ಯಾವುದೇ ವ್ಯಕ್ತಿಯ ವಿರುದ್ಧ ಮಾತನಾಡುತ್ತಿಲ್ಲ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವರ್ಚಸ್ಸಿಗೆ ಧಕ್ಕೆ ತಂದ ಬೋಫೋರ್ಸ್ ಲಂಚ ಹಗರಣದ ಬಗ್ಗೆ ಜನತೆಗೆ ವಿವರ ತಿಳಿಯಬೇಕಿದೆ ಎಂದರು. ಬೋಫೋರ್ಸ್ ಹಗಣದಲ್ಲಿ ಲಂಚ ನೀಡಿರುವುದು ಆದಾಯ ತೆರಿಗೆ ನ್ಯಾಯಾಧೀಕರಣದಿಂದ ತಿಳಿದು ಬಂದಿದೆ.

ಆದರೆ, ಕೇಂದ್ರ ಸರಕಾರ ಮತ್ತು ಸಿಬಿಐ ಈ ಹಗರಣವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ. ಭಾರತದ ದೊಡ್ಡ ಹಗರಣವಾಗಿರುವ ಬೋಫೋರ್ಸ್ ಹಗರಣದ ತನಿಖೆಯನ್ನು ಮುಂದುವರಿಸಬೇಕು ಎಂದು ಅಡ್ವಾಣಿ ಒತ್ತಾಯಿಸಿದ್ದಾರೆ. ಸ್ವಿಸ್ ಬ್ಯಾಂಕಿನಲ್ಲಿರುವ ಕಪ್ಪು ಹಣವನ್ನು ತರವಲ್ಲಿ ಯುಪಿಎ ಸರಕಾರ ವಿಫಲವಾಗಿದೆ. ಕಾಂಗ್ರೆಸ್ಸಿಗರ ಹಣ ಸ್ವಿಸ್ ಬ್ಯಾಂಕಿನಲ್ಲಿ ಇರುವುದರಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅಡ್ವಾಣಿ ಕಟುಕಿದರು.

ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯಗಳಾದ ವಿದ್ಯುತ್, ರಸ್ತೆ, ಕುಡಿಯುವ ನೀರು, ಶಾಲಾ, ಕಾಲೇಜುಗಳನ್ನು ನೀಡಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ವಿದೇಶಿದಲ್ಲಿರುವ ಕಪ್ಪು ಹಣವನ್ನು ದೇಶಕ್ಕೆ ತೆಗೆದುಕೊಂಡು ಬಂದರೆ ಈ ಹಣವನ್ನು ಮೂಲಭೂತ ಸೌಕರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟ ಅಡ್ವಾಣಿ, ದಿನಬಳಕೆ ವಸ್ತುಗಳ ಏರಿಕೆಗೆ ಸರಕಾರದ ತಪ್ಪು ನೀತಿಗಳೆ ಕಾರಣ ಎಂದರು.(ಎಲ್ ಕೆ ಅಡ್ವಾಣಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+