ಪ್ರಜಾತಂತ್ರಕ್ಕೆ ಅಪಮಾನ : ಯಡಿಯೂರಪ್ಪ

ಗುರುವಾರ ವಿಧಾನ ಮಂಡಲ ಜಂಟಿ ಅಧಿವೇಶನದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ಸಿನ ನಡವಳಿಕೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಳಂಕಪ್ರಾಯವಾಗಿದೆ. ರಾಷ್ಟ್ರೀಯ ಪಕ್ಷವಾಗಿ ಹೆಚ್ಚು ಜವಾಬ್ದಾರಿಯಿಂದ ಆ ಪಕ್ಷದ ಸದಸ್ಯರು ನಡೆದುಕೊಳ್ಳಬೇಕಿತ್ತು. ಇದರಿಂದ ಸದನಕ್ಕೆ ಅಗೌರವವಾಗಿದೆ. ಮಾತ್ರವಲ್ಲ, ಅವರು ರಾಜ್ಯದ ಜನತೆಯನ್ನು ನಿರಾಶೆಗೊಳಿಸಿದ್ದಾರೆ ಎಂದು ಯಡಿಯೂರಪ್ಪ ಕಟುಕಿದರು.
ಸುಳ್ಳಿನ ಕಂತೆ ಓದಬೇಡಿ : ಭ್ರಷ್ಟ ಸರಕಾರದ ಸುಳ್ಳಿನ ಕಂತೆಯನ್ನು ಓದಿ ಪ್ರಜಾಪ್ರಭುತ್ವಕ್ಕೆ ಅವಮಾನ ಮಾಡಬೇಡಿ ಎಂದು ಪ್ರತಿಪಕ್ಷ ಕಾಂಗ್ರೆಸ್-ಜೆಡಿಎಸ್ ಸದಸ್ಯರು ರಾಜ್ಯಪಾಲರಿಗೆ ಮನವಿ ಮಾಡಿಕೊಂಡರು. ಸದನದ ಆರಂಭದಲ್ಲಿ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಎದ್ದು ನಿಂತು ರಾಜ್ಯಪಾಲರಿಗೆ ಭಾಷಣ ಓದದಂತೆ ಮನವಿ ಮಾಡುತ್ತಿದ್ದಂತೆ, ಉಳಿದೆಲ್ಲಾ ಸದಸ್ಯರು ಎದ್ದು ನಿಂತು ಕೂಗಾಡ ತೊಡಗಿದರು. ಇದರಿಂದ ಸದನದಲ್ಲಿ ಗೊಂದಲಮಯ ವಾತಾವರಣ ನಿರ್ಮಾಣವಾಯಿತು.
ಮುಖ್ಯಮಂತ್ರಿ, ಸಚಿವರು ತಮ್ಮ ವಿರುದ್ಧ ಟೀಕೆ ಮಾಡಿದ್ದಾರೆ. ತಾವು ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿದ್ದೀರಿ, ವಿಪಕ್ಷ ನಾಯಕರಾಗಿದ್ದೀರಿ ಎಂಬಿತ್ಯಾದಿ ಆರೋಪಗಳನ್ನು ಮಾಡುತ್ತಿದ್ದಾರೆ. ದಯವಿಟ್ಟು ತಾವು ಸರಕಾರದ ಸುಳ್ಳಿನ ಕಂತೆಯನ್ನು ಸದನದ ಮುಂದಿಟ್ಟು ಅವಮಾನ ಮಾಡಬೇಡಿ ಎಂದು ಪ್ರತಿಪಕ್ಷದ ಸದಸ್ಯರು ಆಗ್ರಹಿಸಿದರು.












Click it and Unblock the Notifications