ಬೆಂಗಳೂರು ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಕೃಷ್ಣಪ್ರಸಾದ್
ಬೆಂಗಳೂರು,
ಡಿ. 29 : ಹಿರಿಯ ಪತ್ರಕರ್ತ ಮತ್ತು ಔಟ್ ಲುಕ್ ಸಂಪಾದಕ ಕೃಷ್ಣಪ್ರಸಾದ್ ಮತ್ತು ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಸ್ವರ್ಣ ಪದಕ ಗೆದ್ದ ಕನ್ನಡತಿ ಅಶ್ವಿನಿ ಅಕ್ಕುಂಜೆ ಅವರನ್ನು 'ವರ್ಷದ ವ್ಯಕ್ತಿ' ಪ್ರಶಸ್ತಿಗೆ ಬೆಂಗಳೂರು ಪ್ರೆಸ್ ಕ್ಲಬ್ ಆಯ್ಕೆ ಮಾಡಿದೆ. id="toptextpromo">ಈ
ಸಂಜೆ ಸಂಪಾದಕ ಟಿ ವೆಂಕಟೇಶ್, ಇಂಡಿಯನ್ ಎಕ್ಸ್ ಪ್ರೆಸ್ ಸಂಪಾದಕೀಯ ಸಲಹೆಗಾರ ಟಿಜೆಎಸ್ ಜಾರ್ಜ್ ಮತ್ತು ಬೆಂಗಳೂರು ದೂರದರ್ಶನದ ಮಾಜಿ ನಿರ್ದೇಶಕ (ಸುದ್ದಿ ವಿಭಾಗ) ಕೆಎಸ್ ಅಚ್ಯುತನ್ ಅವರನ್ನು 'ವಾರ್ಷಿಕ ಪ್ರಶಸ್ತಿ'ಗೆ ಆಯ್ಕೆ ಮಾಡಿರುವುದಾಗಿ ಬೆಂಗಳೂರು ಪ್ರೆಸ್ ಕ್ಲಬ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಡಿಸೆಂಬರ್
31ರಂದು, ಹೊಸ ವರ್ಷದ ಮುನ್ನಾದಿನ ಸಂಜೆ ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆಸಲಾಗುವ ವರ್ಣರಂಜಿತ ಸಮಾರಂಭದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು ಪ್ರಶಸ್ತಿ ವಿತರಣೆ ಮಾಡಲಿದ್ದಾರೆ.











Click it and Unblock the Notifications