14 ಕಾನೂನು ವಿವಿ ಸ್ಥಾಪನೆ : ವೀರಪ್ಪ ಮೊಯ್ಲಿ

ಮಂಗಳೂರು ವಿಶ್ವವಿದ್ಯಾಲಯದ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ನೀಡಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಎಲ್ಲ ರಾಜ್ಯಗಳಲ್ಲೂ ಕಾನೂನು ವಿಶ್ವವಿದ್ಯಾಲಯಗಳು ಸ್ಥಾಪನೆಯಾಗಬೇಕು ಎಂಬುದು ನಮ್ಮ ಗುರಿ ಎಂದರು.
ಏಕರೂಪ ಸಿಇಟಿ ವ್ಯವಸ್ಥೆಗೆ ಆಕ್ಷೇಪಿಸಿರುವ ರಾಜ್ಯ ಸರಕಾರದ ನಿಲುವಿಗೆ ಪ್ರತಿಕ್ರಿಯಿಸಿದ ಅವರು, ಅರ್ಹರಿಗೆ ಸೀಟು ಸಿಗುವಂತಾಗಲು ಮಿತಿಮೀರಿದ ಕ್ಯಾಪಿಟೇಷನ್ ಶುಲ್ಕ ಹಾವಳಿ ತಡೆಗೆ ಕೇಂದ್ರ ಮಟ್ಟದಲ್ಲಿ ನಿಯಂತ್ರಣ ವ್ಯವಸ್ಥೆ ಇರಬೇಕಾಗುತ್ತದೆ. ಇದನ್ನು ಆದಷ್ಟು ಬೇಗ ಅಸ್ತಿತ್ವಕ್ಕೆ ತರಲಾಗುತ್ತದೆ ಎಂದು ಹೇಳಿದರು.
ಭೂಸ್ವಾಧೀನ ವಿಷಯದಲ್ಲಿ ರೈತರಿಗೆ ಅನ್ಯಾಯವಾಗದಂತೆ ಮುಂದಿನ ಬಜೆಟ್ ಅಧಿವೇಶನದಲ್ಲಿ ಮಸೂದೆ ಮಂಡಿಸಲಾಗುವುದು. ಇದರ ಪ್ರಕಾರ ಸರಕಾರಿ ಅಥವಾ ಕೈಗಾರಿಕಾ ಉದ್ದೇಶಕ್ಕಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರ ಕೃಷಿ ಜಮೀನಿನ ಶೇ.10ಕ್ಕಿಂತ ಹೆಚ್ಚಿನ ಭೂಮಿ ಸ್ವಾಧೀನಕ್ಕೆ ಅವಕಾಶವಿರುವುದಿಲ್ಲ. ಅಮೂಲ್ಯ ಕೃಷಿ ಭೂಮಿ ಕ್ಷೀಣಿಸುತ್ತಿರುವುದರಿಂದ ಈ ಕಾಯಿದೆ ರೂಪಿಸಲು ನಿರ್ಧರಿಸಲಾಗಿದೆ.(ವೀರಪ್ಪ ಮೊಯ್ಲಿ)












Click it and Unblock the Notifications