ಬೆಂಗಳೂರು: ವಿಮಾನ ಹಾರಾಟಕ್ಕೆ ಮಂಜಿನ ಅಡ್ಡಿ
ಬೆಂಗಳೂರು,
ಡಿ.25: ದೇವನಹಳ್ಳಿ ಹಾಗೂ ಸುತ್ತಮುತ್ತ ದಟ್ಟ ಮಂಜು ಕವಿದ ವಾತಾವರಣದ ಕಾರಣ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿದ್ದು, ಶುಕ್ರವಾರ (ಡಿ.24) ಮೂರು ಗಂಟೆಗಳ ಕಾಲ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿತ್ತು. id="toptextpromo">ದಟ್ಟ
ಮಂಜಿನ ಕಾರಣ ರನ್ ವೇಯಲ್ಲಿ ಏನೂ ಕಾಣದ ಪರಿಸ್ಥಿತಿಯಿದ್ದು,ವಿಮಾನಗಳ ಹಾರಾಟವನ್ನು ಬೆಳಗ್ಗೆ 5 ರಿಂದ 8ಗಂಟೆ ತನಕ ಸ್ಥಗಿತಗೊಳಿಸಲಾಗಿತ್ತು. ಟೇಕಾಫ್ ಆಗಬೇಕಿದ್ದ ಸುಮಾರು 25 ವಿಮಾನಗಳ ಸಂಚಾರ ವಿಳಂಬವಾಯಿತು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಅಧಿಕಾರಿಗಳು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಕೆಲವೊಂದು
ವಿಮಾನಗಳು ಸಮಯಕ್ಕೆ ಸರಿಯಾಗಿ ಲ್ಯಾಂಡ್ ಆಗದ ಕಾರಣ ಪ್ರಯಾಣಿಕರು ಆತಂಕಗೊಂಡಿದ್ದರು. ಚಳಿಗಾಳ ಬಂತೆಂದರೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನದಲ್ಲಿ ಪ್ರತಿವರ್ಷ ಇದೇ ರೀತಿ ಪರಿಸ್ಥಿತಿ ತಲೆದೋರುತ್ತದೆ. ದಟ್ಟ ಮಂಜಿನ ಕಾರಣ ಗುರುವಾರವೂ 30 ವಿಮಾನಗಳ ಹಾರಾಟಕ್ಕೆ ಅಡ್ಡಿಯಾಗಿತ್ತು. ಚಳಿಗಾಲ ಮುಗಿಯುವವರೆಗೂ ಇದೇ ರೀತಿಯ ಪರಿಸ್ಥಿತಿ ತಪ್ಪಿದ್ದಲ್ಲ.











Click it and Unblock the Notifications