ಸ್ವಜನಪಕ್ಷಪಾತಕ್ಕೆ ಅಪವಾದವಾಗದ 'ಲೀಡರ್'
ತಿರುವನಂತಪುರಂ,ಡಿ.
24 : ತಿರುವನಂತಪುರಂ,ಡಿ. 24 : ಕೇರಳದ ಮಾಜಿ ಮುಖ್ಯಮಂತ್ರಿ 'ಲೀಡರ್ ' ಕೆ ಕರುಣಾಕರನ್ (93) ಅವರ ಅಂತ್ಯಕ್ರಿಯೆ ತ್ರಿಸ್ಸೂರಿನಲ್ಲಿ ಶನಿವಾರ ಬೆಳಗ್ಗೆ ನಡೆಯಲಿದೆ. ಅಗಲಿದ ನಾಯಕನಿಗೆ ವಿದಾಯ ಹೇಳುವುದಕ್ಕೆ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ತ್ರಿಸ್ಸೂರಿಗೆ ಆಗಮಿಸಲಿದ್ದಾರೆ. id="toptextpromo">ಗುರುವಾರ
ಸಂಜೆ ಕೊನೆ ಉಸಿರೆಳೆದ ಹಿರಿಯ ಕಾಂಗ್ರೆಸ್ಸಿಗ ಕರುಣಾಕರನ್ ಸತತ ನಾಲ್ಕು ಅವಧಿಗೆ ಕೇರಳದ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ದೀರ್ಘ ಕಾಲದಿಂದ ಅಸ್ವಸ್ಥರಾಗಿದ್ದ ಅವರು ಕಳೆದ ಎರಡು ವಾರಗಳಿಂದ ತಿರುವನಂತಪುರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಉಸಿರಾಟದ ತೊಂದರೆಗಳಿಂದಾಗಿ ಬುಧವಾರ ಬೆಳಗ್ಗೆಯಿಂದ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿರಿಸಲಾಗಿತ್ತು. ಬುಧವಾರ ಪಾರ್ಶ್ವವಾಯುವಿಗೆ ತುತ್ತಾದ ಬಳಿಕ ಅವರ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿತ್ತು. ಕರುಣಾಕರನ್ ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಕೇರಳದಲ್ಲಿ ಒಂದು ಮಾತಿದೆ. "ಕೆ. ಕರುಣಾಕರನ್ ಅವರು 'ಲೀಡರ್' ಆದರೆ ಉಳಿದವರೆಲ್ಲ ಕೇಡರ್!" id='are-slot-1' class='oiad oi-axt oiadv'> id='top-searched-articles'>ಕರುಣಾಕರನ್
ನಿಧನಕ್ಕೆ ಪ್ರಧಾನಿ ಮನಮೋಹನ್‌ಸಿಂಗ್, ಯುಪಿಎ ಅಧ್ಯಕ್ಷೆ ಸೋನಿಯಾಗಾಂಧಿ, ಕಾನೂನು ಸಚಿವ ವೀರಪ್ಪ ಮೊಯ್ಲಿ, ಕೇರಳ ಮುಖ್ಯಮಂತ್ರಿ ಅಚ್ಯುತಾನಂದನ್ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ. ಕಾರ್ಮಿಕ ಒಕ್ಕೂಟ ನಾಯಕನಾಗಿ, ಮುಖ್ಯಮಂತ್ರಿಯಾಗಿ, ಪ್ರತಿಪಕ್ಷ ನಾಯಕನಾಗಿ ಹೀಗೆ ರಾಜಕಾರಣದ ವಿಭಿನ್ನ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಕರುಣಾಕರನ್ ವಿರುದ್ಧ ಸದಾ ಸ್ವಜನಪಕ್ಷಪಾತದ ಆರೋಪಗಳು ಕೇಳಿಬಂದಿದ್ದವು ಎನ್ನುವುದು ವಿಶೇಷ. ನಾಯಕ ಎಷ್ಟೇ ಪ್ರಭಾವಶಾಲಿ ಆಗಿರಲಿ, ಸ್ವಜನ ಪಕ್ಷಪಾತದಿಂದ ಹೊರಗುಳಿಯುವ ರಾಜಕಾರಣಿಗಳ ಸಂತತಿ ಭಾರತದಲ್ಲಿ ತೀರ ವಿರಳ.











Click it and Unblock the Notifications